ಮುಂಬೈ: ‘ಬಿಜೆಪಿಯ ನಾಯಕರೊಂದಿಗೆ ಸೇರಿಕೊಂಡಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಕೆಲವು ಅಧಿಕಾರಿಗಳು ಜನರಿಂದ ಹಣದ ಸುಲಿಗೆ ಮಾಡುತ್ತಿದ್ದು, ನಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದ ಬಳಿಕ ಈ ಅಕ್ರಮವು ಬಹಿರಂಗಗೊಳ್ಳಲಿದೆ’ ಎಂದು ಶಿವಸೇನಾ (ಉದ್ಧವ್ ಬಣ) ಮುಖಂಡ ಸಂಜಯ್ ರಾವುತ್ ಹೇಳಿದರು.
‘ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ಇಂತಹ ಅಕ್ರಮಗಳಲ್ಲಿ ತೊಡ ಗಿಸಿಕೊಂಡಿರುವವರ ಬಗ್ಗೆ ಗೊತ್ತಿದೆ’ ಎಂದು ಭಾನುವಾರ ದೂರಿದರು.
‘ಜಿತು ನವ್ಲಾನಿ ಅವರು ಹಣ ಸುಲಿಗೆಯಲ್ಲಿ ಇ.ಡಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಈ ಹಿಂದಿನ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರವು ಇವರ ವಿರುದ್ಧ ಕಾನೂನು ಕ್ರಮ ಕೈಗೊಂಡಿತ್ತು. ಆದರೆ, ಈಗ ಅವರಿಗೆ ಇ.ಡಿ ಮತ್ತು ಫಡಣವೀಸ್ ಬೆಂಬಲವಿದೆ’ ಎಂದು ರಾವುತ್ ಆರೋಪಿಸಿದರು.