ಸಂಬಲ್ಪುರ: ಒಡಿಶಾದ ಸಂಬಲ್ಪುರ ನಗರದ ಮಣಪ್ಪುರಂ ಫೈನಾನ್ಸ್ ಶಾಖೆಯೊಂದರಲ್ಲಿ ದರೋಡೆಕೋರರು ಬರೋಬ್ಬರಿ 30 ಕೆ.ಜಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ನಗರದ ಮಣಪ್ಪುರಂ ಫೈನಾನ್ಸ್ ಶಾಖೆಯಲ್ಲಿ ಈ ಘಟನೆ ನಡೆದಿದೆ.

'ಸುಮಾರು ಹತ್ತು ಮಂದಿ ದರೋಡೆಕೋರರು ಹೆಲ್ಮೆಟ್ ಮತ್ತು ಮುಖವಾಡಗಳನ್ನು ಧರಿಸಿ ಏಕಾಏಕಿ ಶಾಖೆಗೆ ನುಗ್ಗಿ ಸಿಬ್ಬಂದಿಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಇದೇ ವೇಳೆ ಶಾಖೆಯ ವ್ಯವಸ್ಥಾಪಕರು ಸೇರಿದಂತೆ ಹಲವರನ್ನು ಕಟ್ಟಿ ಹಾಕಿ 30 ಕೆ.ಜಿ ಚಿನ್ನಾಭರಣ ಮತ್ತು ₹4 ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದಾರೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
.ತಮಿಳುನಾಡು ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ: ಆರು ಕಾರ್ಮಿಕರ ಸಾವು.ಧ್ವನಿವರ್ಧಕದಲ್ಲಿ ಮಾಹಿತಿ: ಅಂಗವಿಕಲರ ಒಳಗೊಳ್ಳುವಿಕೆಯತ್ತ ಮಹತ್ವದ ಹೆಜ್ಜೆ.
ಈ ಸಂಬಂಧ ಶಾಖೆಯ ಅಧಿಕಾರಿಗಳು ನೀಡಿದ ದೂರನ್ನು ಆಧರಿಸಿ ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ನಡೆದ ಸ್ಥಳ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ಕಂಪನಿಯ ಉದ್ಯೋಗಿಗಳನ್ನೂ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಯಾವುದೇ ಸಿಬ್ಬಂದಿ ಅಥವಾ ಗ್ರಾಹಕರು ಗಾಯಗೊಂಡಿಲ್ಲ. ಕಂಪನಿಯ ಗ್ರಾಹಕರು ಆತಂಕ ಪಡುವ ಅಗತ್ಯತೆ ಇಲ್ಲ. ಕಂಪನಿಯು ನಿಮ್ಮ ಸ್ವತ್ತುಗಳಿಗೆ ಜವಾಬ್ದಾರಿಯಾಗಿದ್ದು, ನಷ್ಟವನ್ನು ತುಂಬಿಕೊಡಲಿದೆ ಎಂದು ಮಣಪ್ಪುರಂ ಫೈನಾನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
.ಮಣಿಪುರ | ಎಸ್ಪಿ ಕಚೇರಿ ಮೇಲೆ ದಾಳಿ: ಬಿಗುವಿನ ವಾತಾವರಣ, ಭದ್ರತೆ ಹೆಚ್ಚಳ.VIDEO | ಬಂಡಿಪುರ–ಬಿಳಿಗಿರಿ–ಮಲೆ ಮಹದೇಶ್ವರ ಕಾಡನ್ನು ನುಂಗುತ್ತಿರುವ ಲಂಟಾನಾ! .ಲೈಂಗಿಕ ದೌರ್ಜನ್ಯ: ಆರೋಗ್ಯ ಇಲಾಖೆ ಅಧೀಕ್ಷಕ ಬಂಧನ.ಚುನಾವಣಾ ತಕರಾರು ಅರ್ಜಿ: ರಾಜೇಗೌಡ ಅರ್ಜಿ ಪರಿಗಣನೆಗೆ ಸುಪ್ರೀಂ ಕೋರ್ಟ್ ನಕಾರ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.