ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಠಾಣೆ: ಸರ್ಕಾರಿ ಮಕ್ಕಳ ವೀಕ್ಷಣಾ ಕೇಂದ್ರದಿಂದ ನಾಲ್ವರು ಬಾಲಕಿಯರು ಪರಾರಿ

Published : 30 ಸೆಪ್ಟೆಂಬರ್ 2024, 4:31 IST
Last Updated : 30 ಸೆಪ್ಟೆಂಬರ್ 2024, 4:31 IST
ಫಾಲೋ ಮಾಡಿ
Comments

ಠಾಣೆ: ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಮಕ್ಕಳಿಗಾಗಿ ಸರ್ಕಾರ ನಡೆಸುತ್ತಿರುವ ವೀಕ್ಷಣಾ ಕೇಂದ್ರದಿಂದ‌‌ ನಾಲ್ವರು ಬಾಲಕಿಯರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

13 ರಿಂದ 17 ವರ್ಷದೊಳಗಿನ ಈ ಬಾಲಕಿಯರು, ಠಾಣೆಯ ಉಲ್ಹಾಸ್‌ ನಗರ, ಉತ್ತರ ಪ್ರದೇಶ, ಬಾಂಗ್ಲಾದೇಶ ಮತ್ತು ಮುಂಬೈನ ಮನ್‌ಖುರ್ದ್‌ನಿಂದ ಬಂದವರಾಗಿದ್ದರು ಎಂದು ಹಿಲ್‌ಲೈನ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೀಕ್ಷಣಾ ಕೇಂದ್ರದಿಂದ ಶನಿವಾರ ಮುಂಜಾನೆ 3.30 ಸುಮಾರಿಗೆ ಪರಾರಿಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬಾಲಕಿಯರಿಗಾಗಿ ಹುಡುಕಾಟ ನಡೆಸಿದ ವೀಕ್ಷಣಾ ಕೇಂದ್ರದ ಸಿಬ್ಬಂದಿ ಶನಿವಾರ ರಾತ್ರಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 137 (2) (ಅಪಹರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಾಲಕಿಯರನ್ನು ಪತ್ತೆಹಚ್ಚುವ ಪ್ರಯತ್ನ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT