ನವದೆಹಲಿ: ಆಧಾರ್ ಕಾರ್ಡ್ ವ್ಯಕ್ತಿಯ ಪೌರತ್ವ ನಿರ್ಧರಿಸುವ ಪುರಾವೆಯಲ್ಲ. ಈ ಕಾರ್ಡ್ಗೆ ಸಂಬಂಧಿಸಿದ ಕಾಯ್ದೆಯ ಅವಕಾಶಗಳು ಕೂಡ ಇದನ್ನು ಪೌರತ್ವ ಅಥವಾ ವಾಸಸ್ಥಳ ಕುರಿತ ಪುರಾವೆಯನ್ನಾಗಿ ಪರಿಗಣಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ವೇಳೆ, ಮತ ಚಲಾಯಿಸುವ ಹಕ್ಕು ಹೊಂದಿರುವ ಕುರಿತು ಅರ್ಹತೆ ಸಾಬೀತುಪಡಿಸುವುದಕ್ಕೆ ಆಧಾರ್ಅನ್ನು ಪ್ರಾಥಮಿಕ ದಾಖಲೆಯಾಗಿ ಪರಿಗಣಿಸದಿರುವ ಚುನಾವಣಾ ಆಯೋಗದ ನಿರ್ಧಾರ ಸರಿ ಇದೆ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.

ಎಸ್ಐಆರ್ ನಡೆಸುವುದಕ್ಕೆ ಚುನಾವಣಾ ಆಯೋಗಕ್ಕೆ ಅಧಿಕಾರ ಇದೆ ಎಂದು ತೀರ್ಪು ನೀಡಿರುವ ನ್ಯಾಯಾಲಯವು, ಆಧಾರ್ ಕಾರ್ಡ್ ಕುರಿತು ಈ ಸ್ಪಷ್ಟನೆ ನೀಡಿದೆ. ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ಜಾಯ್ಮಾಲ್ಯ ಬಾಗ್ಚಿ ಅವರು ಇದ್ದ ಪೀಠವು, ಈ ಕುರಿತು ಪ್ರತ್ಯೇಕ ತೀರ್ಪು ಪ್ರಕಟಿಸಿದೆ.

ಎಸ್ಐಆರ್ ವೇಳೆ, ಯಾವ ದಾಖಲೆಗಳನ್ನು ಪುರಾವೆಯಾಗಿ ಪರಿಗಣಿಸಲಾಗುವುದು ಎಂಬ ಬಗ್ಗೆ ಆಯೋಗ ತಿಳಿಸಿತ್ತು. ಈ ಪೈಕಿ, ಪೌರತ್ವ ನಿರ್ಧರಿಸುವುದಕ್ಕೆ ಆಧಾರ್ ಕಾರ್ಡ್ ಪುರಾವೆಯಾಗುವುದಿಲ್ಲ ಎಂದೂ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.