ನವದೆಹಲಿ: ಒಳ ನುಸುಳುಕೋರರಿಂದ ಆಗುತ್ತಿರುವ ದುರ್ಬಳಕೆ ತಡೆಯಲು ಆರು ವರ್ಷದೊಳಗಿನ ಭಾರತೀಯ ಪ್ರಜೆಗಳಿಗೆ ಮಾತ್ರ ಆಧಾರ್ ಕಾರ್ಡ್ ವಿತರಿಸುವಂತೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರಕ್ಕೆ (ಯುಐಡಿಎಐ) ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ.

ಭಾರತೀಯ ನಾಗರಿಕರು ಎಂದು ನುಸುಳುಕೋರರು ಬಿಂಬಿಸಿಕೊಳ್ಳುವುದನ್ನು ನಿಯಂತ್ರಿಸುವ ಉದ್ದೇಶದಿಂದ ಹರೆಯದವರು ಮತ್ತು ವಯಸ್ಕರಿಗೆ ಆಧಾರ್ ವಿತರಿಸಲು ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯ ಇದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

ವಕೀಲರಾದ ಅಶ್ವಿನಿ ಉಪಾಧ್ಯಾಯ ಎಂಬುವರು ಅಶ್ವಿನಿ ದುಬೆ ಎಂಬುವರ ಮೂಲಕ ಅರ್ಜಿ ಸಲ್ಲಿಸಿದ್ದಾರೆ.

‘12 ಅಂಕಿಗಳ ಡಿಜಿಟಲ್ ಆಧಾರ್ ಸಂಖ್ಯೆ ಗುರುತಿನ ದಾಖಲೆಯೇ ಹೊರತು ಪೌರತ್ವದ ಆಧಾರವಲ್ಲ’ ಎಂಬ ಪ್ರದರ್ಶನ ಫಲಕಗಳನ್ನು ಆಧಾರ್ ಸೇವಾ ಕೇಂದ್ರಗಳ ಮುಂದೆ ಅಳವಡಿಸಬೇಕು’ ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.

ಪ್ರಾಧಿಕಾರ 144 ಕೋಟಿ ಆಧಾರ್ ಕಾರ್ಡ್ ವಿತರಿಸಿದೆ. ಶೇ 99ರಷ್ಟು ಭಾರತೀಯರು ನೋಂದಣಿ ಮಾಡಿಕೊಂಡಿದ್ದಾರೆ. ಹೀಗಾಗಿ ಇನ್ನು ಮುಂದೆ ಆರು ವರ್ಷದ ಒಳಗಿನವರಿಗೆ ಮಾತ್ರ ಆಧಾರ್ ಸಂಖ್ಯೆ ವಿತರಿಸುವಂತೆ ಸಂವಿಧಾನದ 32ನೇ ವಿಧಿಯ ಅವಕಾಶ ಬಳಸಿಕೊಂಡು ಅರ್ಜಿದಾರರು ಕೋರಿದ್ದಾರೆ.

ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಹಾಗೂ ಇತರೆ ಗುರುತಿನ ಚೀಟಿಗಳನ್ನು ಪಡೆಯಲು ಇತ್ತೀಚೆಗೆ ಆಧಾರ್ ಕಾರ್ಡ್ ಮೂಲ ದಾಖಲೆಯಾಗಿ ಬಳಕೆಯಾಗುತ್ತಿದೆ. ಆಧಾರ್ ನೀಡಲು ಅನುಸರಿಸುವ ಪರಿಶೀಲನಾ ಪ್ರಕ್ರಿಯೆ ದುರ್ಬಲವಾಗಿವೆ. ನುಸುಳುಕೋರರು ಸುಲಭವಾಗಿ ದಾಖಲೆ ತಿರುಚುತ್ತಿದ್ದಾರೆ. ಹೀಗಾಗಿ ಕಠಿಣ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯ ಇದೆ ಎಂದು ಅರ್ಜಿಯಲ್ಲಿ
ಹೇಳಲಾಗಿದೆ.

ವಿದೇಶಿಗರು ಆಧಾರ್ಗಾಗಿ ವಿದೇಶಿ ವಿಭಾಗದಲ್ಲಿ ಅರ್ಜಿ ಸಲ್ಲಿಸುತ್ತಾರೆ. ಆದರೆ, ನುಸುಳುಕೋರರು ‘ಭಾರತೀಯ ನಾಗರಿಕ’ ವಿಭಾಗದಲ್ಲಿ ಅರ್ಜಿ ಸಲ್ಲಿಸಿ ಸುಲಭವಾಗಿ ಪಡೆಯುತ್ತಿದ್ದಾರೆ. ಆನಂತರ ವಾಸ ದೃಢೀಕರಣ, ಚಾಲನಾ ಪರವಾನಗಿ ಸೇರಿ ಇತರೆ ದಾಖಲೆ ಪಡೆದು ಸುಲಭವಾಗಿ ಭಾರತೀಯ ಪ್ರಜೆ ಎನಿಸಿಕೊಳ್ಳುತ್ತಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ವಿದೇಶಿಯರನ್ನು ಭಾರತೀಯ ಪ್ರಜೆಯಿಂದ ಬೇರ್ಪಡಿಸುವಲ್ಲಿ ಆಧಾರ್ ಕಾಯ್ದೆ–2026 ವಿಫಲವಾಗಿದೆಯೇ ಎಂಬ ಕಾನೂನಾತ್ಮಕ ಪ್ರಶ್ನೆಯನ್ನೂ ಈ ಅರ್ಜಿ ಎತ್ತಿದೆ.

ಆಧಾರ್ ದುರ್ಬಳಕೆಯು ಕಲ್ಯಾಣ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಂಪನ್ಮೂಲ ಅನರ್ಹರ ಪಾಲಾಗುವುದನ್ನು ಹೆಚ್ಚಿಸಿದೆ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಮತದಾರರ ಗುರುತಿನ ಚೀಟಿ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿ ಸಾಂವಿಧಾನಿಕ ಅವಕಾಶಗಳ ಬಗ್ಗೆಯೂ ಅರ್ಜಿಯಲ್ಲಿ ಗಮನಸೆಳೆಯಲಾಗಿದೆ. ಅಕ್ರಮ ನೋಂದಣಿಗಳು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಹಾಳುಮಾಡುತ್ತವೆ ಎಂಬ ಆತಂಕ ಅರ್ಜಿಯಲ್ಲಿ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.