ಚಂಡೀಗಢ: 2013ರ ಲೈಂಗಿಕ ಕಿರುಕುಳ ಮತ್ತು ಹಲ್ಲೆ ಪ್ರಕರಣದಲ್ಲಿ ಎಎಪಿ ಶಾಸಕ ಮಂಜಿಂದರ್ ಸಿಂಗ್ ಲಾಲ್ಪುರ ಮತ್ತು ಇತರ ಏಳು ಜನರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಖುಲಾಸೆಗೊಳಿಸಿದೆ. ದೂರುದಾರರು ಮತ್ತು ಆರೋಪಿಗಳ ಮಧ್ಯೆ ರಾಜಿ ಆಗಿರುವ ಕಾರಣದಿಂದ ಈ ತೀರ್ಪು ಬಂದಿದೆ.

ನ್ಯಾಯಮೂರ್ತಿ ತ್ರಿಭುವನ್ ದಹಿಯಾ ಅವರ ಪೀಠವು ಅರ್ಜಿಯನ್ನು ಪುರಸ್ಕರಿಸುತ್ತಾ, ಪಂಜಾಬ್ನ ತರನ್ ತಾರನ್ನ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ. ಕಳೆದ ಸೆಪ್ಟೆಂಬರ್ನಲ್ಲಿ ಆ ನ್ಯಾಯಾಲಯವು ಶಾಸಕ ಮತ್ತು ಇತರ ಏಳು ಮಂದಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಅಲ್ಲದೆ, 2013 ಮಾರ್ಚ್ನಲ್ಲಿ ತರನ್ ತಾರನ್ ಪೊಲೀಸ್ ಠಾಣೆಯಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣವನ್ನು ಕೂಡಾ ಹೈಕೋರ್ಟ್ ರದ್ದು ಮಾಡಿದೆ.

ಪರಿಶಿಷ್ಟ ಜಾತಿ (ಎಸ್ಸಿ) ಸಮುದಾಯಕ್ಕೆ ಸೇರಿದ ದೂರುದಾರ ಮಹಿಳೆ, 2013ರ ಮಾರ್ಚ್ 3ರಂದು ಮಂಜಿಂದರ್ ಮತ್ತು ತರನ್ ತಾರನ್ನ ಕೆಲವು ಪೊಲೀಸ್ ಸಿಬ್ಬಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಈ ವೇಳೆ ಮಂಜಿಂದರ್ ಸಿಂಗ್ ಟ್ಯಾಕ್ಸಿ ಚಾಲಕರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.