ನವದೆಹಲಿ: ಆಮ್ ಆದ್ಮಿ ಪಕ್ಷದ ಏಳು ಮಂದಿ ರಾಜ್ಯಸಭಾ ಸಂಸದರು ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿಗೆ (ಬಿಜೆಪಿ) ಸೇರಿದ್ದಾರೆ. ಇವರ ಸೇರ್ಪಡೆಯನ್ನು ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರು ಸೋಮವಾರ ಅಧಿಕೃತವಾಗಿ ಅಂಗೀಕರಿಸಿದ್ದಾರೆ.

ಈ ಹೊಸ ಸೇರ್ಪಡೆಯೊಂದಿಗೆ ರಾಜ್ಯಸಭೆಯಲ್ಲಿ ಬಿಜೆಪಿಯ ಬಲ 113ಕ್ಕೆ ಏರಿಕೆಯಾಗಿದೆ. ಮೇಲ್ಮನೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸದಸ್ಯರ ಸಂಖ್ಯೆ ಕೇವಲ ಮೂರಕ್ಕೆ ಇಳಿದಿದೆ.

ರಾಘವ್ ಛಡ್ಡಾ, ಅಶೋಕ್ ಮಿತ್ತಲ್, ಹರ್ಭಜನ್ ಸಿಂಗ್, ಸಂದೀಪ್ ಪಾಠಕ್, ವಿಕ್ರಮ್ಜಿತ್ ಸಾಹ್ನಿ, ಸ್ವಾತಿ ಮಾಲಿವಾಲ್ ಮತ್ತು ರಾಜೀಂದರ್ ಗುಪ್ತಾ ಅವರು ಬಿಜೆಪಿಗೆ ಸೇರ್ಪಡೆಗೊಂಡ ಸಂಸದರಾಗಿದ್ದಾರೆ.
.KKR ವಿರುದ್ಧ ಸೂಪರ್ ಓವರ್ ಸೋತ LSG: ‘ನಮಗೆ ವಿರಾಮ ಬೇಕು’ ಎಂದ ನಾಯಕ ರಿಷಬ್ ಪಂತ್.ನಾನು ತಪ್ಪಾಗಿರಬಹುದು, ಆದರೆ ಏಳು ಜನ ತಪ್ಪಾಗಲು ಸಾಧ್ಯವಿಲ್ಲ: ಚಡ್ಡಾ ತಿರುಗೇಟು.
ರಿಜಿಜು ಪ್ರತಿಕ್ರಿಯೆ

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ಎನ್ಡಿಎ ಮೈತ್ರಿಗೆ ಸಂಸದರನ್ನು ಸ್ವಾಗತಿಸುತ್ತೇನೆ. ಅವರು 'ತುಕ್ಡೆ-ತುಕ್ಡೆ ಇಂಡಿ ಒಕ್ಕೂಟ'ಕ್ಕೆ ಗುಡ್ಬೈ ಹೇಳಿದ್ದಾರೆ. ಈ ಸಂಸದರು ಎಂದಿಗೂ ಅಸಂಸದೀಯ ನಡವಳಿಕೆ ತೋರಿಲ್ಲ ಎಂದು ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.

ಎಎಪಿ ಆಕ್ಷೇಪ

ಈ ಸೇರ್ಪಡೆಯನ್ನು 'ಅಸಂವಿಧಾನಿಕ' ಎಂದು ಕರೆದಿರುವ ಎಎಪಿ, ಪಕ್ಷಾಂತರಗೊಂಡ ಸಂಸದರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಸಭಾಪತಿಗಳಿಗೆ ಅರ್ಜಿ ಸಲ್ಲಿಸಿದೆ. ಎಎಪಿ ಸಂಸದ ಸಂಜಯ್ ಸಿಂಗ್ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಅನರ್ಹತೆ ಪ್ರಕ್ರಿಯೆಗೆ ಒತ್ತಾಯಿಸಿದ್ದಾರೆ.
.ಹೊರ್ಮುಜ್ ಮುಕ್ತ, ಯುದ್ಧ ಅಂತ್ಯಕ್ಕೆ ಇರಾನ್ನ 3 ಹಂತದ ಪ್ರಸ್ತಾವನೆಯಲ್ಲಿ ಏನಿದೆ?.ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಮುಂದೆ ವಿಚಾರಣೆಗೆ ಹಾಜರಾಗಲ್ಲ: ಕೇಜ್ರಿವಾಲ್.ಯುದ್ಧ ಕೊನೆಗೊಳಿಸಲು ಪಾಕ್ ಮೂಲಕ ಅಮೆರಿಕಕ್ಕೆ ಇರಾನ್ ಪ್ರಸ್ತಾವನೆ.ದಲಿತರಿಗೆ ಚೊಂಬು ಕೊಟ್ಟ ಸರ್ಕಾರ: ವಿರೋಧ ಪಕ್ಷದ ನಾಯಕ ಆರ್.ಅಶೋಕ ಕಿಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.