ನವದೆಹಲಿ : ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ರಾಜೀನಾಮೆಗೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ದೆಹಲಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ವಿಳಂಬಕ್ಕೆ ಕಾರಣವಾಗಿರುವ ಅವರು ಬಿಜೆಪಿಯ ಗೂಂಡಾಗಿರಿ ಬೆಂಬಲಿಸುತ್ತಿದ್ದಾರೆ ಎಂದು ಪಕ್ಷ ಆರೋಪಿಸಿದೆ.

ಎಎಪಿ ಶಾಸಕಿ ಆತಿಶಿ, ದುರ್ಗೇಶ್ ಪಾಠಕ್ ಸೇರಿದಂತೆ ಹಲವು ಮುಖಂ ಡರು, ಕಾರ್ಯಕರ್ತರು ರಾಜ ನಿವಾಸ ಮಾರ್ಗದಲ್ಲಿರುವ ಲೆಫ್ಟಿನೆಂಟ್ ಗವರ್ನರ್ ನಿವಾಸದ ಎದುರು ಪ್ರತಿಭಟನೆ ನಡೆಸಿ, ರಾಜೀನಾಮೆಗೆ ಆಗ್ರಹಿಸಿದರು.

‘ಮೇಯರ್ ಚುನಾವಣೆ ವಿಚಾರ ದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವು ಬಿಜೆಪಿ ಮುಖಕ್ಕೆ ಬಾರಿಸಿ ದಂತೆ ಇದೆ. ದೆಹಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರ ಕ್ರಮಗಳೆಲ್ಲವೂ ಅಸಾಂವಿಧಾನಿಕ. ಬಿಜೆಪಿಯ ಗೂಂಡಾಗಿರಿಗೆ ಬೆಂಬಲವಾಗಿ ನಿಂತಿರುವ ಅವರು ಕೂಡಲೇ ರಾಜೀನಾಮೆ ಕೊಡ ಬೇಕು’ ಎಂದು ಪಾಠಕ್ ಆಗ್ರಹಿಸಿದ್ದಾರೆ.

‘ದೆಹಲಿ ಸರ್ಕಾರದ ಗಮನಕ್ಕೆ ತಾರದೆಯೇ ಲೆ.ಗವರ್ನರ್ ಅವರು ನಾಮನಿರ್ದೇಶಿತ ಸದಸ್ಯರನ್ನು ನೇಮಿಸಿದರು. ನಂತರ, ನಾಮನಿರ್ದೇಶಿತ ಸದಸ್ಯ ರಿಂದ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಿಸಲು ಯತ್ನಿಸಿದರು. ಇಷ್ಟೆಲ್ಲಾ ಮಾಡಿರುವ ಅವರು ರಾಜೀನಾಮೆ ಏಕೆ ನೀಡಬಾರದು? ಇಂತಹ ಅಸಾಂವಿಧಾನಿಕ ನಿರ್ಧಾರಗಳನ್ನು ಎಂದೂ ಕಂಡಿಲ್ಲ’ ಎಂದಿದ್ದಾರೆ.

ಮೇಯರ್ ಚುನಾವಣೆ ಆಯ್ಕೆಗೆ ಮೂರು ಬಾರಿ ನಡೆದಿದ್ದ ಯತ್ನಗಳು ವಿಫಲವಾಗಿದ್ದವು. ಹೀಗಾಗಿ, ಎಎಪಿ ಮೇಯರ್ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಶುಕ್ರವಾರ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ನಾಮನಿರ್ದೇಶಿತ ಸದಸ್ಯರು ದೆಹಲಿ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಬಾರದು ಎಂದು ಸೂಚಿಸಿತ್ತು.

ಮೇಯರ್ ಚುನಾವಣೆ: ಫೆ.22ಕ್ಕೆ ಪಾಲಿಕೆ ಸಭೆ

ದೆಹಲಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಚುನಾವಣೆ ನಡೆಸುವ ಕುರಿತಂತೆ, ಫೆ.22ರಂದು ಪಾಲಿಕೆಯ ಸಭೆ ನಡೆಯಲಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಸಭೆ ನಡೆಸಲು ಅನುಮತಿ ನೀಡಿದ್ದು, ರಾಜನಿವಾಸ ಪ್ರಕಟಣೆ ಹೊರಡಿಸಿದೆ.

ಫೆ.22ಕ್ಕೆ ಚುನಾವಣೆ ನಡೆಸುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರಿಗೆ ಶಿಫಾರಸು ಮಾಡಿದ ಕೆಲವೇ ಗಂಟೆಗಳಲ್ಲಿ ರಾಜನಿವಾಸದಿಂದ ಪ್ರಕಟಣೆ ಹೊರಬಿದ್ದಿದೆ.

ಮೇಯರ್, ಉಪಮೇಯರ್ ಹಾಗೂ ಸ್ಥಾಯಿಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆಸುವ ದಿನಾಂಕ ನಿಗದಿ ಮಾಡುವ ಸಲುವಾಗಿ 24 ಗಂಟೆಯೊಳಗೆ ಸಭೆ ಕರೆಯುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.

1957ರ ದೆಹಲಿ ಮಹಾನಗರ ಪಾಲಿಕೆ (ಡಿಎಂಸಿ) ಕಾಯ್ದೆಯ ಪ್ರಕಾರ, ಚುನಾವಣೆ ಬಳಿಕ ನಡೆಸುವ ಮೊದಲ ಅಧಿವೇಶನದಲ್ಲಿ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಚುನಾವಣೆ ನಡೆಸಬೇಕು. ಆದರೆ ಚುನಾವಣೆ ಆಗಿ ಎರಡು ತಿಂಗಳು ಕಳೆದರೂ ಮೇಯರ್ ಆಯ್ಕೆ ಸಾಧ್ಯವಾಗಿಲ್ಲ.

ನ್ಯಾಯಾಂಗ ನಿಂದನೆ ಆರೋಪ:

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ನ್ಯಾಯಾಂಗ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸಿದ್ದು, ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶನಿವಾರ ಆರೋಪಿಸಿದ್ದಾರೆ. ದೆಹಲಿ ಪಾಲಿಕೆ ಚುನಾವಣೆ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಅವರು, ಸುಪ್ರೀಂ ಕೋರ್ಟ್ನಲ್ಲಿ ದೆಹಲಿ ಸರ್ಕಾರದ ಅಭಿಪ್ರಾಯ ವ್ಯಕ್ತಪಡಿಸಲು ಸಕ್ಸೇನಾ ಅವರು ಬಲವಾಗಿ ತಡೆಯೊಡ್ಡಲು ಯತ್ನಿಸಿದ್ದಾರೆ ಎಂದೂ ಆರೋಪಿಸಿದ್ದಾರೆ.

ಎಎಪಿ ಮೇಯರ್ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಅವರು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಹಾಗೂ ದೆಹಲಿ ಸರ್ಕಾರವನ್ನು ಪ್ರತ್ಯೇಕ ಪ್ರತಿವಾದಿಗಳಾಗಿ ಹೆಸರಿಸಿದ್ದರು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಪ್ರಕರಣದಲ್ಲಿ ವಾದ ಮಂಡಿಸಲು ಗೌತಮ್ ನಾರಾಯಣ್ ಅವರನ್ನು ನೇಮಿಸುವಂತೆ ನಗರಾಭಿವೃದ್ಧಿ ಕಾರ್ಯದರ್ಶಿಗೆ ದೆಹಲಿ ಸರ್ಕಾರ ಸೂಚಿಸಿತ್ತು. ಆದರೆ, ಸರ್ಕಾರಿ ವಕೀಲರನ್ನಾಗಿ ತುಷಾರ್ ಮೆಹ್ತಾ ಅವರನ್ನು ನೇಮಿಸುವಂತೆ ನಗರಾಭಿವೃದ್ಧಿ ಕಾರ್ಯದರ್ಶಿಗೆ ಸಕ್ಸೇನಾ ಅವರು ಸೂಚಿಸಿದ್ದರು. ಸಕ್ಸೇನಾ ಅವರ ಈ ನಡೆಯು, ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಶೋಭೆ ತರುವಂತಿಲ್ಲ ಎಂಬುದನ್ನು ಪತ್ರ ಬರೆದು ಅವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.