ಕೊಚ್ಚಿ: ಸಿನಿಮಾ ತಾರೆ ಮೋಹನ್ ಲಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ್ದು, ‘ಅವರು ಕಲಾವಿದರು ಮತ್ತು ಸೃಜನಶೀಲರನ್ನು ಗೌರವಿಸುವ ನಿಜವಾದ ಮುತ್ಸದ್ದಿ ಮತ್ತು ದೂರದೃಷ್ಟಿ ಹೊಂದಿರುವವರು’ ಎಂದು ಬಣ್ಣಿಸಿದ್ದಾರೆ.

ಕೇಂದ್ರ ಸರ್ಕಾರದ ‘ಮೈಗೌಇಂಡಿಯಾ’ ನಾಗರಿಕ ಸಂವಹನ ವೇದಿಕೆಯ ಜಿಡಿಪಿ@ಮೈಗೌ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಮೋಹನ್ ಲಾಲ್ ಅವರು ಈ ಹೇಳಿಕೆ ನೀಡಿದ್ದಾರೆ.

ಮೋದಿ ಅವರನ್ನು ಹಲವಾರು ಬಾರಿ ಭೇಟಿ ಮಾಡುವ ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಎಂದು ಹೇಳಿರುವ ಮೋಹನ್ ಲಾಲ್, ಪ್ರತಿ ಭೇಟಿಯಲ್ಲೂ ನಿಜವಾದ ಮುತ್ಸದ್ದಿ ಹಾಗೂ ದೃಢ ಮತ್ತು ದೂರದೃಷ್ಟಿಯುಳ್ಳ ನಾಯಕನನ್ನು ಭೇಟಿಯಾದ ಅನುಭವ ತಮಗಾಗಿದೆ ಎಂದು ತಿಳಿಸಿದ್ದಾರೆ.

‘ನಮ್ಮ ರಾಷ್ಟ್ರದ ಬಗ್ಗೆ ಅವರಿಗಿರುವ ಸಮರ್ಪಣಾ ಮನೋಭಾವವು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಅವರ ಶಕ್ತಿ ಮತ್ತು ಸ್ಪಷ್ಟ ದೂರದೃಷ್ಟಿಯನ್ನು ನಾನು ಯಾವಾಗಲೂ ಪ್ರಶಂಸಿಸುತ್ತೇನೆ. ಭಾರತವನ್ನು ಮುನ್ನಡೆಸುವಲ್ಲಿ ಅವರ ವಿವೇಕ ಮತ್ತು ಸೌಜನ್ಯ ಶ್ಲಾಘನೀಯ’ ಎಂದು ಮೋಹನ್ ಲಾಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.