ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕ ಚಂದ್ರಶೇಖರ್ ಜೋಸೆಫ್ ವಿಜಯ್ ಅವರು ಭಾನುವಾರ (ಮೇ 10) ಪ್ರಮಾಣವಚನ ಸ್ವೀಕರಿಸಿದ್ದಾರೆ.

ವಿಜಯ್ ಅವರು ಸಮಾರಂಭದಲ್ಲಿ ಬಿಳಿ ಷರ್ಟ್, ಕಪ್ಪು ಕೋಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ರಾಜಕೀಯ ಮತ್ತು ಸಾಮಾಜಿಕ ಸಂದೇಶವನ್ನು ರವಾನಿಸುವ ಸಲುವಾಗಿಯೇ ವಿಜಯ್ ಅವರು ಕಪ್ಪು ಬಟ್ಟೆ ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಕಪ್ಪು ಬಣ್ಣವು ಹಲವು ವರ್ಷಗಳಿಂದ ದ್ರಾವಿಡ ಚಳವಳಿಯ ಸಂಕೇತವಾಗಿದೆ. ಪ್ರತಿಭಟನೆ, ವೈಚಾರಿಕತೆ, ಸಾಮಾಜಿಕ ನ್ಯಾಯ ಮತ್ತು ಜಾತಿ ವ್ಯವಸ್ಥೆ ವಿರುದ್ಧದ ನಿಲುವನ್ನು ಈ ಬಣ್ಣ ಪ್ರತಿನಿಧಿಸುತ್ತದೆ. ಕಪ್ಪು ವಸ್ತ್ರ ಧರಿಸುವುದರ ಹಿಂದೆ ‘ಪೆರಿಯಾರ್’ ಎಂದೇ ಜನಪ್ರಿಯರಾಗಿದ್ದ ಹಾಗೂ ‘ದ್ರಾವಿಡ ಕಳಗಂ’ ಸ್ಥಾಪಕ ಈರೋಡ್ ವೆಂಕಟಪ್ಪ ರಾಮಸಾಮಿ ಅವರ ಚಿಂತನೆಯೂ ಇದೆ.

ಜಾತಿ ಹಾಗೂ ಸಾಮಾಜಿಕ ತಾರತಮ್ಯ, ಮೌಢ್ಯದ ವಿರುದ್ಧ ಪ್ರತಿಭಟನಾರ್ಥವಾಗಿ ಕಪ್ಪು ಅಂಗಿ ಧರಿಸುವಂತೆ ಪೆರಿಯಾರ್ ಅವರು 1945ರಲ್ಲಿ ತಮ್ಮ ಅನುಯಾಯಿಗಳಿಗೆ ಕರೆ ನೀಡಿದ್ದರು ಎಂದು ‘ಮಾತೃಭೂಮಿ’ ವರದಿ ಮಾಡಿದೆ.

ಸುಮಾರು 60 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ (ಎಐಎಡಿಎಂಕೆ) ಪಕ್ಷಗಳಿಗೆ ಪರ್ಯಾರವೆಂಬಂತೆ ತಮ್ಮ ಪಕ್ಷವನ್ನು ಬಿಂಬಿಸಲು ವಿಜಯ್ ಇಂತಹ ಪ್ರಯತ್ನ ಮಾಡಿರಬಹುದು. ಟಿವಿಕೆಯು ದ್ರಾವಿಡ ಸಿದ್ಧಾಂತಗಳಿಗೆ ಬದ್ಧವಾಗಿ ಇರಲಿದೆ ಎಂಬುದನ್ನು ಅವರು ಈ ರೀತಿ ಸಾರಲು ಯತ್ನಿಸಿರಬಹುದು ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

234 ಸದಸ್ಯ ಬಲದ ವಿಧಾನಸಭಾ ಚುನಾವಣೆಗೆ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಮೇ 4ರಂದು ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಿದೆ. 108 ಕ್ಷೇತ್ರಗಳಲ್ಲಿ ಜಯ ಸಾಧಿಸಿರುವ ವಿಜಯ್ ಪಕ್ಷದ, ಅತಿದೊಡ್ಡ ಪಕ್ಷವೆನಿಸಿದರೂ ಬಹುಮತ ಸಾಧಿಸಲು ವಿಫಲವಾಗಿತ್ತು.

ಹೀಗಾಗಿ, ಐವರು ಶಾಸಕರನ್ನು ಹೊಂದಿರುವ ಕಾಂಗ್ರೆಸ್, ತಲಾ ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸಿರುವ ವಿಸಿಕೆ, ಸಿಪಿಐ, ಸಿಪಿಐ(ಎಂ), ಐಯುಎಂಎಲ್ ಬೆಂಬಲದೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಲಾಗಿದೆ.

ಚೆನ್ನೈನ ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ಪ್ರಮಾಣವಚನ ಸಮಾರಂಭ ನಡೆಯಿತು.
.ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ: ದಾಖಲೆ ಬರೆದ ಟಿವಿಕೆ.ಡಿಎಂಕೆ ಸರ್ಕಾರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸುವೆ: ಸಿಎಂ ವಿಜಯ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.