ಚೆನ್ನೈ: ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆ ಸಂಬಂಧ ಕಳೆದ ಕೆಲ ದಿನಗಳಿಂದ ಎದ್ದಿದ್ದ ಕುತೂಹಲ ಹಾಗೂ ಅನಿಶ್ಚಿತತೆಗೆ ಕೊನೆಗೂ ತೆರೆ ಬಿದ್ದಿದೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್ ವಿಜಯ್ ಅವರು

ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಹುಮತಕ್ಕೆ ಅಗತ್ಯವಿರುವ ಸಂಖ್ಯಾಬಲವನ್ನು ಟಿವಿಕೆ ಹೊಂದಿಸಿದ ಬೆನ್ನಲ್ಲೇರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರು ಸರ್ಕಾರ ರಚಿಸು ವಂತೆ ವಿಜಯ್ ಅವರಿಗೆ ಆಹ್ವಾನ ನೀಡಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ನಡೆಯಲಿದೆ. ಇದು ತಮಿಳುನಾಡಿನ ಚೊಚ್ಚಲ ಸಮ್ಮಿಶ್ರ ಸರ್ಕಾರ ಎನಿಸಿಕೊಳ್ಳಲಿದೆ.

ಎನ್. ಆನಂದ್, ಕೆ.ಜಿ ಅರುಣರಾಜ್, ಕೆ.ಎ.ಸೆಂಗೊಟ್ಟೈಯನ್, ಆಧವ್ ಅರ್ಜುನ ಮತ್ತು ಸಿ.ಟಿ.ಆರ್ ನಿರ್ಮಲ್ ಕುಮಾರ್ ಸೇರಿದಂತೆ ಎಂಟರಿಂದ ಒಂಬತ್ತು ಹಿರಿಯ ಶಾಸಕರು ವಿಜಯ್ ಅವರೊಂದಿಗೆ ಭಾನುವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.

‘ರಾಷ್ಟ್ರಪತಿ ಆಳ್ವಿಕೆ ತಡೆಯುವ ಉದ್ದೇಶ’

ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದನ್ನು ತಡೆಯುವ ಉದ್ದೇಶದಿಂದ ತಮ್ಮ ಪಕ್ಷವು ಟಿವಿಕೆಗೆ ಬೆಂಬಲ ನೀಡಿದೆ ಎಂದು ವಿಸಿಕೆ ಮುಖ್ಯಸ್ಥ ತೊಲ್ ತಿರುಮಾವಳವನ್ ಹೇಳಿದರು.

‘ರಾಜಕೀಯ ಪಕ್ಷವಾಗಿದ್ದುಕೊಂಡು ನಾವು ಸ್ವತಂತ್ರ ನಿರ್ಧಾರ ತೆಗೆದುಕೊಂಡಿದ್ದೇವೆ ಮತ್ತು ರಾಜ್ಯದ ಭವಿಷ್ಯವನ್ನು ಗಣನೆಗೆ ತೆಗೆದುಕೊಂಡು ಟಿವಿಕೆಗೆ ಬೇಷರತ್ ಬೆಂಬಲ ನೀಡಿದ್ದೇವೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಟಿವಿಕೆಗೆ ಬೆಂಬಲ ನೀಡಿದರೂ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟದಲ್ಲೇ (ಎಸ್ಪಿಎ) ಮುಂದುವರಿಯುತ್ತೇವೆ. ನಮ್ಮ ನಿಲುವು ಡಿಎಂಕೆ ಜೊತೆಗಿನ ಮೈತ್ರಿ ಮೇಲೆ ಯಾವುದೇ ಪರಿಣಾಮ ಬೀರದು’ ಎಂದರು.

‘ಪಕ್ಷದ ನಿಲುವನ್ನು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರಿಗೆ ತಿಳಿಸಿದ್ದೇವೆ. ವಿಸಿಕೆ ಮತ್ತು ಎಡಪಕ್ಷಗಳು ಒಮ್ಮತದಿಂದ ತೆಗೆದುಕೊಂಡ ನಿರ್ಧಾರಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಹೇಳಿದರು.

ಎಐಎಡಿಎಂಕೆ ಶಾಸಕರ ರಹಸ್ಯ ಸಭೆ

ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡುವ ವಿಚಾರದಲ್ಲಿ ಎಐಎಡಿಎಂಕೆಯಲ್ಲಿ ಭಿನ್ನಮತ ಮೂಡಿದ್ದು, ಪಕ್ಷದ 28 ಶಾಸಕರು ಶನಿವಾರ ರಹಸ್ಯ ಸಭೆ ನಡೆಸಿದ್ದಾರೆ.

ಕಳೆದ ಮೂರು ದಿನಗಳಿಂದ ಪುದುಚೆರಿಯ ರೆಸಾರ್ಟ್ನಲ್ಲಿದ್ದ ಶಾಸಕರು ಶನಿವಾರ ಚೆನ್ನೈಗೆ ವಾಪಸಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ ಸಭೆಯಲ್ಲಿ ಪಾಲ್ಗೊಂಡರು. 47 ಶಾಸಕರಲ್ಲಿ ಐವರು ಗೈರಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಆದರೆ ಈ ಸಭೆಯ ಕೆಲ ಗಂಟೆಗಳ ಬಳಿಕ ಪಕ್ಷದ 28 ಶಾಸಕರು ಹಿರಿಯ ನಾಯಕರಾದ ಸಿ.ವಿ ಷಣ್ಮುಗಂ ಮತ್ತು ಎಸ್.ಪಿ ವೇಲುಮಣಿ ಅವರ ನೇತೃತ್ವದಲ್ಲಿ ರಹಸ್ಯ ಸಭೆ ನಡೆಸಿದ್ದಾರೆ. ಎಐಎಡಿಎಂಕೆಯು ಟಿವಿಕೆಗೆ ಬೆಂಬಲ ನೀಡಬೇಕೆಂದು ಶಾಸಕರ ಈ ಬಣ ಬಯಸುತ್ತಿರುವುದರಿಂದ ಸಭೆಯು ಮಹತ್ವ ಪಡೆದುಕೊಂಡಿದೆ. ಯಾವ ಸಂದರ್ಭದಲ್ಲೂ ಟಿವಿಕೆಗೆ ಬೆಂಬಲ ನೀಡದಿರುವ ದೃಢ ನಿಲುವನ್ನು ಪಳನಿಸ್ವಾಮಿ ಅವರು ತೆಗೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.