ಭೋಪಾಲ್: ನಟಿ ಟ್ವಿಶಾ ಶರ್ಮಾ ಸಾವಿನ ಪ್ರಕರಣ ಸಂಬಂಧ ಬಂಧನಕ್ಕೊಳಗಾದ ಪತಿ ಸಮರ್ಥ್ ಸಿಂಗ್ ಅವರನ್ನು ನ್ಯಾಯಾಲಯವು ಪೊಲೀಸರ ವಶಕ್ಕೆ ಒಪ್ಪಿಸಿದೆ.

ಭೋಪಾಲ್ನ ಕತಾರ ಹಿಲ್ಸ್ ಪ್ರದೇಶದಲ್ಲಿರುವ ಮನೆಯಲ್ಲಿ ಟ್ವಿಶಾ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮೇ 12ರಂದು ಪತ್ತೆಯಾಗಿತ್ತು.

ಟ್ವಿಶಾ ಅವರ ಪತಿ ಸಮರ್ಥ್ ಸಿಂಗ್ ಮತ್ತು ಅತ್ತೆ, ನಿವೃತ್ತ ನ್ಯಾಯಾಧೀಶರಾದ ಗಿರಿಬಾಲಾ ಸಿಂಗ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 80(2), 85, ಮತ್ತು 3(5) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳಡಿ ಕತಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.

ಇದಾದ ಬಳಿಕ ಸಮರ್ಥ್ ಅವರು ತಲೆಮರೆಸಿಕೊಂಡಿದ್ದರು. ಮಗನ ಪರವಾಗಿ ತಾಯಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ನಲ್ಲಿ ಹಿಂದಕ್ಕೆ ಪಡೆದ ಬಳಿಕ ಜಬಲ್ಪುರ ನ್ಯಾಯಾಲಯಕ್ಕೆ ಶರಣಾಗಲು ಸಮರ್ಥ್ ತೆರಳಿದ್ದರು. ನ್ಯಾಯಾಲಯದ ಆವರಣದ ಹೊರಗಡೆಯೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಭೋಪಾಲ್ ವಿಶೇಷಾ ತನಿಖಾ ತಂಡಕ್ಕೆ ಒಪ್ಪಿಸಿದ್ದರು.

ಹೇಳಿಕೆ ದಾಖಲಿಸಲು ನಿರ್ಧಾರ: ಈ ಪ್ರಕರಣದಲ್ಲಿ ಟ್ವಿಶಾ ಶರ್ಮಾಳ ಅತ್ತೆ ಗಿರಿಬಾಲಾ ಸಿಂಗ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ನೋಟಿಸ್ ಜಾರಿ ಮಾಡಿದ್ದಾರೆ. ಈ ಹಿಂದೆ ಮೂರು ಬಾರಿ ನೋಟಿಸ್ ನೀಡಿದ್ದರೂ ಕೂಡ ಹಾಜರಾಗಿರಲಿಲ್ಲ.

ಗಿರಿಬಾಲಾ ಸಿಂಗ್ ಸೆಷನ್ಸ್ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಿದ್ದು, ಭೋಪಾಲ್ನ ಗ್ರಾಹಕರ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದಾರೆ.

ಹೇಳಿಕೆ ದಾಖಲಿಸಲು ಸಿದ್ಧ: ‘ಹೊರಗಿನ ಪರಿಸ್ಥಿತಿಯಿಂದ ನಾನು ಹೊರಗಡೆ ಹೋಗಲು ಸಾಧ್ಯವಿಲ್ಲ. ನನ್ನ ವಕೀಲರಿಗೆ ಕಾರು ಡಿಕ್ಕಿ ಹೊಡೆದಿದೆ. ನನ್ನ ಹೇಳಿಕೆ ದಾಖಲಿಸಲು ಸಂತೋಷ ಪಡುತ್ತೇನೆ. ಈ ಕುರಿತು ಪೊಲೀಸ್ ಆಯುಕ್ತರಿಗೆ ಇ–ಮೇಲ್ ಮಾಡಿದ್ದು, ಅವರು ಬರುವುದಾಗಿ ತಿಳಿಸಿದ್ದಾರೆ’ ಎಂದು ಗಿರಿಬಾಲಾ ಸಿಂಗ್ ತಿಳಿಸಿದ್ದಾರೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.