ಗ್ವಾಲಿಯರ್: ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಅದಾನಿ ಸಂಸ್ಥೆ ತಯಾರಿಸಿರುವ 2,000 ‘ಪ್ರಹಾರ್’ ಹಗುರ ಮಷಿನ್ ಗನ್ಗಳು (ಎಲ್ಎಂಜಿ) ಮೊದಲ ಹಂತದಲ್ಲಿ ಶನಿವಾರ ಭಾರತೀಯ ಸಶಸ್ತ್ರ ಪಡೆಗೆ ಸೇರ್ಪಡೆಗೊಂಡವು.

7.62 ಎಂ.ಎಂ ಸಾಮರ್ಥ್ಯದ ‘ಪ್ರಹಾರ್’ ಮಷಿನ್ ಗನ್ಗಳನ್ನು ಗ್ವಾಲಿಯರ್ನಲ್ಲಿರುವ ಅದಾನಿ ಡಿಫೆನ್ಸ್ ಮತ್ತು ಏರೊಸ್ಪೇಸ್ ಸಂಸ್ಥೆಯು ತಯಾರಿಸಿದೆ. ರಕ್ಷಣಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮತ್ತು ಡಿಜಿ ಎ.ಅನ್ಬರಸು, ಅದಾನಿ ಸಂಸ್ಥೆಯ ಸಿಇಒ ಆಶಿಶ್ ರಾಜವಂಶಿ ಸಮ್ಮುಖದಲ್ಲಿ ‘ಪ್ರಹಾರ್’ ಶಸ್ತ್ರಗಳ ಸಮರ್ಪಣೆ ಕಾರ್ಯಕ್ರಮ ನಡೆಯಿತು.

‘ಅದಾನಿ ಡಿಫೆನ್ಸ್ ಸಂಸ್ಥೆಗೆ ಸುಮಾರು 40,000 ಹಗುರು ಮಷಿನ್ ಗನ್ಗಳನ್ನು ತಯಾರಿಸಿ ಕೊಡಲು ತಿಳಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಗುರಿ ಮುಟ್ಟುತ್ತೇವೆ’ ಎಂದು ಸಿಇಒ ರಾಜವಂಶಿ ತಿಳಿಸಿದರು.

‘ರಕ್ಷಣಾ ಕೈಗಾರಿಕೆ ಪಾಲುದಾರರ ಹೆಗಲಿಗೆ ಹೆಗಲುಕೊಟ್ಟು ಸರ್ಕಾರ ನಿಂತಿದೆ. ಈ ವಲಯದಲ್ಲಿ ಪ್ರಗತಿ ಮತ್ತು ಪೈಪೋಟಿ ಕಾಣುತ್ತಿದ್ದೇವೆ’ ಎಂದು ಡಿಜಿ ಅನ್ಬರಸು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.