ಚೆನ್ನೈ: ತಮಿಳುನಾಡಿನಲ್ಲಿ ವಿರೋಧ ಪಕ್ಷ ಎಐಎಡಿಎಂಕೆಯು ಚೆನ್ನೈ ನಗರದ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

ಚೆನ್ನೈ ಜಿಲ್ಲೆ ವ್ಯಾಪ್ತಿಯ 16 ವಿಧಾನಸಭಾ ಕ್ಷೇತ್ರಗಳ ಪೈಕಿ ಎಐಎಡಿಎಂಕೆ ಪಕ್ಷ 13 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಡಿಎಂಕೆ ಜತೆ ನೇರ ಹಣಾಹಣಿಗೆ ಸಜ್ಜಾಗಿದೆ. ಇತರ ಮೂರು ಸ್ಥಾನಗಳನ್ನು ಮಿತ್ರ ಪಕ್ಷಗಳಾದ ಬಿಜೆಪಿ, ಎಎಂಎಂಕೆ ಮತ್ತು ಪಿಎಂಕೆಗೆ ಬಿಟ್ಟುಕೊಟ್ಟಿದೆ.

ಡಿಎಂಕೆಯ ಭದ್ರಕೋಟೆ ಎಂದೇ ಪರಿಗಣಿಸಲಾದ ಚೆನ್ನೈ ನಗರದ ವ್ಯಾಪ್ತಿಯಲ್ಲಿ ಆಡಳಿತ ಪಕ್ಷವನ್ನು ಎದುರಿಸಲು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಮಾಜಿ ಸಚಿವರು, ಪಕ್ಷದ ಹಿರಿಯ ನಾಯಕರು ಮತ್ತು ಮಹಿಳೆಯರನ್ನು ಕಣಕ್ಕಿಳಿಸಿದ್ದಾರೆ.

ಮಾಜಿ ಸಚಿವರುಗಳಾದ ಬಿ.ವಲರ್ಮತಿ ಮತ್ತು ಗೋಕುಲ ಇಂದಿರಾ ಅವರಿಗೆ ಥೌಸಂಡ್ ಲೈಟ್ಸ್ ಮತ್ತು ಅಣ್ಣಾನಗರ ಕ್ಷೇತ್ರಗಳ ಟಿಕೆಟ್ ನೀಡಲಾಗಿದೆ. ಇವರು ಕ್ರಮವಾಗಿ ಡಿಎಂಕೆಯ ಹಾಲಿ ಶಾಸಕ ಎನ್.ಎಝಿಲನ್ ಮತ್ತು ಪಕ್ಷದ ನಾಯಕ ಎನ್.ಚಿತ್ರರಸು ಅವರನ್ನು ಎದುರಿಸಲಿದ್ದಾರೆ.

ಪಕ್ಷದ ಹಿರಿಯ ನಾಯಕರಾದ ಪಿ.ಸಂತಾನ ಕೃಷ್ಣನ್ ಮತ್ತು ಆದಿ ರಾಜಾರಾಮ್ ಅವರು ಕೊಳತ್ತೂರು ಹಾಗೂ ಚೆಪಾಕ್ ತಿರುವಲ್ಲಿಕೇನಿ ಕ್ಷೇತ್ರಗಳಲ್ಲಿ ಕ್ರಮವಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಉಪ ಮುಖ್ಯಮಂತ್ರಿ ಉದಯನಿಧಿ ಅವರ ವಿರುದ್ಧ ಪೈಪೋಟಿ ನಡೆಸಲಿದ್ದಾರೆ. ಈ ಕ್ಷೇತ್ರಗಳಲ್ಲಿ ಎಐಎಡಿಎಂಕೆ– ಡಿಎಂಕೆ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.