ಸೇಲಂ: ‘ಎಐಎಡಿಎಂಕೆ ವಿಭಜಿಸಲು ಡಿಎಂಕೆ ಹುನ್ನಾರ ನಡೆಸಿತ್ತು’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮಂಗಳವಾರ ಆರೋಪಿಸಿದರು.

ವಿಧಾನಸಭಾ ಚುನಾವಣೆಯ ಪ್ರಚಾರದ ಅಂತಿಮ ದಿನದಂದು ತಮ್ಮ ತವರು, ಸೇಲಂ ಜಿಲ್ಲೆಯಲ್ಲಿ ಮಾತನಾಡಿದ ಅವರು ‘ಆಡಳಿತಾರೂಢ ಡಿಎಂಕೆಯ ತಂತ್ರಗಾರಿಕೆಯನ್ನು ವಿಫಲಗೊಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ’ ಎಂದು ಹೇಳಿದರು.

‘ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ (2016–21) ಎಷ್ಟು ಸಮಸ್ಯೆ ಎದುರಿಸಿದ್ದೆ ಎಂಬುದು ನನಗಷ್ಟೇ ಗೊತ್ತು. ಸ್ಟಾಲಿನ್ ನಮ್ಮ ಪಕ್ಷವನ್ನು ವಿಭಜಿಸಲು ಭಾರಿ ತಂತ್ರಗಾರಿಕೆ ನಡೆಸಿದರು. ಆದರೆ ನಾವು ಅದನ್ನು ನುಚ್ಚುನೂರು ಮಾಡಿದೆವು’ ಎಂದರು.

10 ಭರವಸೆ ಸೇರ್ಪಡೆ:

ಎಐಎಡಿಎಂಕೆಯ ಚುನಾವಣಾ ಪ್ರಣಾಳಿಕೆಗೆ ಹೆಚ್ಚುವರಿಯಾಗಿ 10 ಕಲ್ಯಾಣ ಕ್ರಮಗಳು ಮಂಗಳವಾರ ಸೇರ್ಪಡೆಯಾದವು. ಇದರಿಂದಾಗಿ ಭರವಸೆಗಳ ಸಂಖ್ಯೆ 297ರಿಂದ 307ಕ್ಕೆ ಹೆಚ್ಚಿತು.

ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಣೆ ತಡೆಗಟ್ಟಲು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ 24X7 ಮೇಲ್ವಿಚಾರಣಾ ಕೊಠಡಿ ಆರಂಭಿಸಲಾಗುವುದು ಎಂಬುದು ನೂತನ ಭರವಸೆ.

10 ಲಕ್ಷ ನಿರುದ್ಯೋಗಿಗಳಿಗೆ ದ್ವಿಚಕ್ರ ವಾಹನ ಖರೀದಿಸಲು ₹10 ಸಾವಿರ ಸಹಾಯಧನ, ಮಾವಿಗೆ ಕನಿಷ್ಠ ಬೆಂಬಲ ಬೆಲೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್ಎಂಇ) ಆರಂಭಿಸಲು ಬಯಸುವ ಯುವಕರಿಗೆ 30 ದಿನಗಳಲ್ಲಿ ಪರವಾನಗಿ ನೀಡಲಿಕ್ಕಾಗಿ ಏಕಗವಾಕ್ಷಿ ಯೋಜನೆ ಸೇರ್ಪಡೆಯಾಗಿವೆ.

ತಾಳೆ ಮರಗಳಿಂದ ಹಾಗೂ ಕಟ್ಟಡಗಳಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಕ್ರಮವಾಗಿ ₹20 ಲಕ್ಷ, ₹25 ಲಕ್ಷ ಪರಿಹಾರ ನೀಡಲಾಗುವುದು ಎಂದು ಎಐಎಡಿಎಂಕೆ ಭರವಸೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.