ಚೆನ್ನೈ (ಪಿಟಿಐ): ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷದಲ್ಲಿನ ಬಣ ಜಗಳ ಗುರುವಾರ ತಾರಕಕ್ಕೇರಿದೆ. ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರದ ವಿಶ್ವಾಸಮತ ಯಾಚನೆ ವೇಳೆ ವಿಪ್ ಉಲ್ಲಂಘಿಸಿದ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಅವರ ಬೆಂಬಲಿಗ ಶಾಸಕರನ್ನು ಅನರ್ಹಗೊಳಿಸುವಂತೆ ವಿ.ಷಣ್ಮುಗಂ ಮತ್ತು ಎಸ್.ಪಿ. ವೇಲುಮಣಿ ನೇತೃತ್ವದ ಬಣ ಆಗ್ರಹಿಸಿದೆ.

ಶಾಸಕಾಂಗ ಪಕ್ಷವನ್ನು ಬಹುಮತದ ಮೇಲೆ ನಿರ್ಧರಿಸಲಾಗುತ್ತದೆ ಹಾಗೂ ತಮ್ಮ ಬಣಕ್ಕೆ ಹೆಚ್ಚಿನ ಶಾಸಕರ ಬೆಂಬಲವಿದೆ ಎಂದು ಷಣ್ಮುಗಂ–ವೇಲುಮಣಿ ಬಣವು ನೇಮಿಸಿರುವ ಮುಖ್ಯ ಸಚೇತಕ ಸಿ.ವಿಜಯಭಾಸ್ಕರ್ ಗುರುವಾರ ಹೇಳಿದ್ದಾರೆ.

‘ಬುಧವಾರ ನಡೆದ ವಿಶ್ವಾಸಮತ ಯಾಚನೆ ವೇಳೆ ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ ಪರವಾಗಿ ಮತ ಚಲಾಯಿಸುವಂತೆ ಪಕ್ಷದ ಸೂಚನೆಯನ್ನು ಎಐಎಡಿಎಂಕೆಯ ಎಲ್ಲ ಶಾಸಕರಿಗೆ ವಾಟ್ಸ್ಆ್ಯಪ್ ಮತ್ತು ಇ–ಮೇಲ್ ಮೂಲಕ ತಿಳಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘47 ಶಾಸಕರ ಪೈಕಿ 25 ಶಾಸಕರು ಸೂಚನೆಯನ್ನು ಪಾಲಿಸಿದ್ದು, ಪಳನಿಸ್ವಾಮಿ ಸೇರಿದಂತೆ ಪಕ್ಷದ 22 ಶಾಸಕರು ಮುಖ್ಯ ಸಚೇತಕ ಆಗಿರುವ ನನ್ನ ಸೂಚನೆಯನ್ನು ಪಾಲಿಸದೆ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ, ವಿಧಾನಸಭೆ ಸ್ಪೀಕರ್ ಅವರನ್ನು ಭೇಟಿ ಮಾಡಿ ಪಕ್ಷಾಂತರ ನಿಷೇಧ ಕಾಯ್ದೆ ಅಡಿ 22 ಮಂದಿಯನ್ನು ಅನರ್ಹಗೊಳಿಸುವಂತೆ ಕೋರಿದ್ದೇವೆ’ ಎಂದಿದ್ದಾರೆ.

‘ವೇಲುಮಣಿ ನೇತೃತ್ವದ ಬಹುಪಾಲು ಶಾಸಕರು ವಿಪ್ಅನ್ನು ಅನುಸರಿಸಿದ್ದಾರೆ. ಹಾಗಾಗಿ, ಹೆಚ್ಚಿನ ಶಾಸಕರ ಬೆಂಬಲ ಹೊಂದಿರುವ ನಮ್ಮ ಬಣ ತೆಗೆದುಕೊಂಡು ನಿರ್ಧಾರ ಮಾತ್ರ ಮಾನ್ಯವಾಗಿದೆ’ ಎಂದು ಹೇಳಿದ್ದಾರೆ.

ವಜಾಗೊಳಿಸುವಂತಿಲ್ಲ: ಪೂರ್ವನಿದರ್ಶನಗಳನ್ನು ಉಲ್ಲೇಖಿಸಿದ ವೇಲುಮಣಿ, ‘ಪಕ್ಷದಲ್ಲಿ ಒಡಕು ಕಾಣಿಸಿಕೊಂಡಾಗ ಪಕ್ಷದ ಮುಖ್ಯಸ್ಥರು ಯಾವುದೇ ನಿರ್ಧಾರ ಗಳನ್ನು ತೆಗೆದುಕೊಳ್ಳುವಂತಿಲ್ಲ. ಪಕ್ಷದ ಹುದ್ದೆಗಳಿಗೆ ಯಾರನ್ನಾದರೂ ನೇಮಿಸಲು ಅಥವಾ ತೆಗೆದುಹಾಕಲು ಸಾಧ್ಯವಿಲ್ಲ’ ಎಂದು ಸಿ.ವಿಜಯಭಾಸ್ಕರ್ ಹೇಳಿದ್ದಾರೆ.

ಪಕ್ಷದ ಹುದ್ದೆಗಳಿಂದ ಕೆಲವರನ್ನು ತೆಗೆದುಹಾಕುವ ಪಳನಿಸ್ವಾಮಿ ಅವರ ನಿರ್ಧಾರಗಳು ನ್ಯಾಯಡಸಮ್ಮತವಾಗಿಲ್ಲ. ಎಲ್ಲರೂ ‘ತಮ್ಮ ತಮ್ಮ ಹುದ್ದೆಗಳಲ್ಲಿ ಮುಂದುವರಿಯಲಿದ್ದಾರೆ’ ಎಂದಿದ್ದಾರೆ.

ಟಿವಿಕೆಯೊಂದಿಗೆ ಕೈಜೋಡಿಸಿದ ಮುಖಂಡರಾದ ವೇಲುಮಣಿ, ಷಣ್ಮುಗಂ ಹಾಗೂ ಸಿ. ವಿಜಯಭಾಸ್ಕರ್ ಅವರನ್ನು ಪಳನಿಸ್ವಾಮಿ ಅವರು ಪಕ್ಷದ ಹುದ್ದೆಗಳಿಂದ ಬುಧವಾರ ವಜಾಗೊಳಿಸಿ, ಹೊಸಬರನ್ನು ನೇಮಿಸಿದ್ದರು.

ಪಕ್ಷದ ಕೇಂದ್ರ ಕಚೇರಿಗೆ ಬಿಗಿ ಭದ್ರತೆ

ಎಐಎಡಿಎಂಕೆಯಲ್ಲಿನ ಬಣ ಜಗಳದ ನಡುವೆ, ಪಕ್ಷದ ಪ್ರಧಾನ ಕಚೇರಿ, ‘ಪುರಚ್ಚಿ ತಲೈವರ್ ಎಂಜಿಆರ್ ಮಾಳಿಗೈ’ಗೆ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 2022ರಲ್ಲಿ ಪಕ್ಷದ ನಾಯಕತ್ವದ ವಿಚಾರದಲ್ಲಿ ಪಳನಿಸ್ವಾಮಿ ಮತ್ತು ಅಂದಿನ ನಾಯಕ ಓ. ಪನ್ನೀರಸೆಲ್ವಂ ನಡುವೆ ಭಿನ್ನಾಭಿಪ್ರಾಯ ಎದ್ದಾಗ ಪಕ್ಷದ ಪ್ರಧಾನ ಕಚೇರಿಯ ಸೊತ್ತುಗಳನ್ನು ಹಾನಿಗೊಳಿಸಲಾಗಿತ್ತು.

ಎರಡೂ ಬಣದವರು ಗುರುವಾರ ಸಭೆ ನಡೆಸಿ ತಮ್ಮ ಮುಂದಿನ ನಡೆಯ ಬಗ್ಗೆ ಚರ್ಚಿಸಿದರು. ಷಣ್ಮುಗಂ-ವೇಲುಮಣಿ ಬಣವು ಪಳನಿಸ್ವಾಮಿ ಅವರ ಬೆಂಬಲಿಗ ಶಾಸಕರಿಗಿಂತ ಹೆಚ್ಚು ಶಾಸಕರನ್ನು ಹೊಂದಿರುವುದರಿಂದ ಕಾನೂನು ಆಯ್ಕೆಗಳನ್ನು ಪರಿಗಣಿಸಿ ಮುಂದಿನ ಹೆಜ್ಜೆಯಿಡಲು ಯೋಜಿಸುತ್ತಿದೆ ಎಂದು ಎಐಎಡಿಎಂಕೆ ಮೂಲಗಳು ತಿಳಿಸಿವೆ. ‘ನ್ಯಾಯ ಲಭಿಸುವವರೆಗೂ ನಾವು ಯಾರೂ ಪಕ್ಷದ ಕೇಂದ್ರ ಕಚೇರಿಗೆ ಭೇಟಿ ನೀಡುವುದಿಲ್ಲ. ಎರಡು ಗುಂಪುಗಳ ನಡುವೆ ಯಾವುದೇ ಘರ್ಷಣೆ ಆಗದಿರುವುದನ್ನು ಖಚಿತಪಡಿಸಿಕೊಳ್ಳುತ್ತೇವೆ’ ಎಂದು ಷಣ್ಮುಗಂ ಹೇಳಿದ್ದಾರೆ.

ಬಂಡಾಯ ಎದ್ದಿರುವ ಬಣವನ್ನು ಎದುರಿಸಲು ಪಳನಿಸ್ವಾಮಿ ಅವರು ತಮ್ಮ ನಿವಾಸದಲ್ಲಿ ಬೆಂಬಲಿಗ ಶಾಸಕರೊಂದಿಗೆ ಸಭೆ ನಡೆಸಿದ್ದಾರೆ.

‘ಸೋಲಿನ ಜವಾಬ್ದಾರಿ ಹೊತ್ತುಕೊಳ್ಳುವೆ’

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ತಾವು ಹೊರುವುದಾಗಿ ಡಿಎಂಕೆ ಅಧ್ಯಕ್ಷ ಎಂ. ಕೆ ಸ್ಟಾಲಿನ್ ಗುರುವಾರ ಹೇಳಿದ್ದಾರೆ. ಚುನಾವಣಾ ಸೋಲಿಗೆ ಕಾರಣಗಳನ್ನು ಪರಾಮರ್ಶಿಸಲು ಸಮಿತಿ ರಚಿಸಲಾಗುವುದು ಮತ್ತು ಸಮಿತಿಯು 20 ದಿನಗಳಲ್ಲಿ ವರದಿ ಸಲ್ಲಿಸಲಿದೆ ಎಂದು ಘೋಷಿಸಿದ್ದಾರೆ.

‘ಡಿಎಂಕೆ ಮೈತ್ರಿಕೂಟ ದುರ್ಬಲ ಆಗಿಲ್ಲ’: ‘ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟವು ಬಹುಮತ ಪಡೆಯದಿದ್ದರೂ ದುರ್ಬಲವಾಗಿಲ್ಲ’ ಎಂದು ಅವರು ಹೇಳಿದ್ದಾರೆ.

‘1.54 ಕೋಟಿ ಮತಗಳನ್ನು ಪಡೆದಿರುವುದು ಮತ್ತು ಮೈತ್ರಿಕೂಟದ ಪಕ್ಷಗಳು ಒಟ್ಟು 72 ಸ್ಥಾನಗಳನ್ನು ಗೆದ್ದಿರುವುದು ತಮಿಳುನಾಡಿನ ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ’ ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-51-1040976192

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.