ಚೆನ್ನೈ: ತಮಿಳುನಾಡಿನಲ್ಲಿ ರೆಸಾರ್ಟ್ ರಾಜಕಾರಣ ಆರಂಭವಾಗಿದ್ದು ಎಐಎಡಿಎಂಕೆಯ 12ಕ್ಕೂ ಹೆಚ್ಚು ಶಾಸಕರು ಪುದುಚೆರಿ ರೆಸಾರ್ಟ್ಗೆ ಸ್ಥಳಾಂತರಗೊಂಡಿದ್ದಾರೆ ಎಂದು ವರದಿಯಾಗಿದೆ.

ರಾಜಕೀಯ ಬೆಳವಣಿಗೆಯಲ್ಲಿ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುವ ವಿಷಯದಲ್ಲಿ ಎಐಎಡಿಎಂಕೆ ಪಕ್ಷದೊಳಗೆ ಬಿರುಕು ಮೂಡಿದ್ದು ಕೆಲವು ಶಾಸಕರು ವಿಜಯ್ ಪರ ಒಲವು ಹೊಂದಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.

12ಕ್ಕೂ ಹೆಚ್ಚು ಎಐಎಡಿಎಂಕೆ ಶಾಸಕರು ಪುದುಚೇರಿಯ ರೆಸಾರ್ಟ್ನಲ್ಲಿ ಉಳಿದುಕೊಂಡಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಟಿವಿಕೆ, ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಬಹುದು ಎಂಬ ಭೀತಿಯಿಂದ ಅವರನ್ನು ರೆಸಾರ್ಟ್ಗೆ ಕರೆದೊಯ್ಯಲಾಗಿದೆ ಎಂದು ಎಐಎಡಿಎಂಕೆ ಹೇಳಿದೆ.
.ಸರ್ಕಾರ ರಚನೆಗೆ ಟಿವಿಕೆಗೆ ಬೆಂಬಲ ನೀಡುವುದಿಲ್ಲ: ಎಐಎಡಿಎಂಕೆ ಘೋಷಣೆ.ವಿಜಯ್ಗೆ ‘ಕೈ’ ಬೆಂಬಲ | ಟಿವಿಕೆಗೆ ಬಹುಮತ: ಸಾಕ್ಷ್ಯ ಕೇಳಿದ ರಾಜ್ಯಪಾಲ.
ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆಗೆ ಬೆಂಬಲ ನೀಡುವ ಕುರಿತು ಎಐಎಡಿಎಂಕೆ ನಾಯಕ ಪಳನಿಸ್ವಾಮಿ ಆರಂಭದಲ್ಲಿ ಮೌನ ವಹಿಸಿದ್ದು ಗೊಂದಲಕ್ಕೆ ಕಾರಣವಾಗಿತ್ತು. ಆದರೆ, ಈಗ ಟಿವಿಕೆಗೆ ಬೆಂಬಲ ನೀಡದಿರಲು ಅವರು ನಿರ್ಧರಿಸಿದ್ದು ಎಲ್ಲಾ ಶಾಸಕರು ಇದಕ್ಕೆ ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ನಾಯಕರಾದ ಸಿ.ವಿ. ಷಣ್ಮುಗಂ ಮತ್ತು ಕೆ.ಪಿ. ಮುನಿಸ್ವಾಮಿ ಅವರು ಟಿವಿಕೆಗೆ ನಾವು ಬೆಂಬಲ ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಟಿವಿಕೆ ಕೂಡ ಈವರೆಗೂ ಬೆಂಬಲ ಕೋರಿಲ್ಲ ಎಂದು ಅವರು ಹೇಳಿದ್ದಾರೆ.

ತಮಿಳುನಾಡು ವಿಧಾನಸಭೆಯ ಒಟ್ಟು 234 ಸ್ಥಾನಗಳಲ್ಲಿ ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ದಾಖಲಿಸಿತ್ತು. ಆದರೆ ಬಹುಮತಕ್ಕೆ ಇನ್ನೂ 10 ಸ್ಥಾನಗಳ ಅಗತ್ಯವಿದೆ.

ಈಗಾಗಲೇ ಕಾಂಗ್ರೆಸ್ನ ಐವರು ಶಾಸಕರು ಷರತ್ತುಬದ್ಧ ಬೆಂಬಲ ನೀಡಿದ್ದಾರೆ. ಎಡಪಕ್ಷಗಳು (4 ಸ್ಥಾನ) ಮತ್ತು ವಿಸಿಕೆ (2 ಸ್ಥಾನ) ಬೆಂಬಲಕ್ಕಾಗಿ ವಿಜಯ್ ಕಾಯುತ್ತಿದ್ದಾರೆ.

ಎಐಎಡಿಎಂಕೆಯು ಬಿಜೆಪಿಯೊಂದಿಗೆ ಮೈತ್ರಿ ಹೊಂದಿರುವುದರಿಂದ, ಅವರ ಬೆಂಬಲ ಪಡೆಯಲು ವಿಜಯ್ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಬಿಜೆಪಿಯನ್ನು ತಮ್ಮ ಸೈದ್ಧಾಂತಿಕ ವಿರೋಧಿ ಎಂದು ವಿಜಯ್ ಈ ಹಿಂದೆಯೇ ಘೋಷಿಸಿದ್ದರು.

ಬುಧವಾರವೇ ವಿಜಯ್ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರೂ, ಬೆಂಬಲ ನೀಡುವ 118 ಶಾಸಕರ ಪಟ್ಟಿಯನ್ನು ನೀಡುವಂತೆ ರಾಜ್ಯಪಾಲರು ಸೂಚಿಸಿರುವುದರಿಂದ ಪ್ರಕ್ರಿಯೆ ವಿಳಂಬವಾಗಿದೆ.
.ಸರ್ಕಾರ ರಚನೆ ಕಸರತ್ತು: ಕಾಂಗ್ರೆಸ್ ಬೆಂಬಲ ಕೋರಿದ ವಿಜಯ್.ಟಿವಿಕೆಗೆ ಬೆಂಬಲ ನೀಡುವಂತೆ ಶಾಸಕರ ದುಂಬಾಲು: ಎಐಎಡಿಎಂಕೆಯಲ್ಲಿ ಗೊಂದಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.