ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆ ಕುರಿತಂತೆ ಅನಿಶ್ಚಿತತೆ ಮುಂದುವರಿದಿದ್ದು, ಎಐಎಡಿಎಕೆಯ ರಾಜ್ಯಸಭಾ ಸದಸ್ಯ ಎಂ. ತಂಬಿದುರೈ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಪತ್ರಕರ್ತರ ಜೊತೆ ಮಾತನಾಡಿರುವ ಅವರು, ಹಲವು ಚರ್ಚೆಗಳು ನಡೆಯುತ್ತಿವೆ. ಈಗ ನಾನು ಯಾವುದರ ಬಗ್ಗೆಯೂ ಏನನ್ನೂ ಹೇಳಲು ಸಿದ್ಧನಿಲ್ಲ. ಒಳ್ಳೆಯದಾಗಲಿದೆ ಎಂಬ ವಿಶ್ವಾಸದಲ್ಲಿ ನಾವಿದ್ದೇವೆ. ನಮ್ಮ ಪಕ್ಷ, ನಮ್ಮ ನಾಯಕರು ಕಮ್ಬ್ಯಾಕ್ ಮಾಡಲಿದ್ದಾರೆ. ಎಐಎಡಿಎಂಕೆ ಅಧಿಕಾರಕ್ಕೆ ಬರಬೇಕೆಂಬುದು ಸಾರ್ವಜನಿಕರ ಭಾವನೆಯಾಗಿದೆ. ದೇವರ ದಯೆಯಿಂದ ಸ್ವಲ್ಪ ಸಮಯದಲ್ಲೇ ಅದು ಆಗಲಿದೆ ಎಂದು ಮಾರ್ಮಿಕ ಹೇಳಿಕೆ ನೀಡಿದ್ದಾರೆ.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದಿದೆ ಸರಳ ಬಹುಮತದೊಂದಿಗೆ ಸರ್ಕಾರ ರಚಿಸಲು ಅವರಿಗೆ 11 ಶಾಸಕರ ಬೆಂಬಲ ಬೇಕು. ಐದು ಶಾಸಕರಿರುವ ಕಾಂಗ್ರೆಸ್ ಬೆಂಬಲ ಘೋಷಿಸಿದೆ. ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) 59 ಸ್ಥಾನಗಳನ್ನು ಗೆದ್ದು ಎರಡನೇ ಅತಿದೊಡ್ಡ ಪಕ್ಷವಾಗಿದ್ದರೆ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) 47 ಸ್ಥಾನಗಳನ್ನು ಗೆದ್ದು, ಮೂರನೇ ಅತಿದೊಡ್ಡ ಪಕ್ಷವಾಗಿದೆ.

ಈ ನಡುವೆ, ಎಐಡಿಎಂಕೆಗೆ ಬಾಹ್ಯ ಬೆಂಬಲ ಕೊಟ್ಟು ಇತರೆ ಪಕ್ಷಗಳನ್ನು ಒಟ್ಟುಗೂಡಿಸಿ ಮೈತ್ರಿ ಸರ್ಕಾರದ ಯೋಜನೆಯನ್ನು ಡಿಎಂಕೆ ರೂಪಿಸಿದೆ ಎಂಬ ವರದಿಗಳು ಬರುತ್ತಿವೆ.

ಇತ್ತ, ವಿಜಯ್ಗೆ ಬೆಂಬಲ ನೀಡುವ ಕುರಿತಂತೆ ಸಿಪಿಎಂ, ಸಿಪಿಐ ಮತ್ತು ಸಿವಿಕೆ ಪಕ್ಷಗಳು ಪ್ರತ್ಯೇಕ ಸಭೆ ನಡೆಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.