ನವದೆಹಲಿ: ದೆಹಲಿಯಿಂದ ವ್ಯಾಂಕೋವರ್ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು 7 ಗಂಟೆ ಹಾರಾಟ ನಡೆಸಿದ ಬಳಿಕ, ಕಾರ್ಯಾಚರಣೆಯಲ್ಲಿ ಸಮಸ್ಯೆ ಕಾಣಿಸಿಕೊಂಡ ಕಾರಣ ದೆಹಲಿಗೆ ಮರಳಿತು.

‘ದೆಹಲಿಯಿಂದ ವ್ಯಾಂಕೋವರ್ಗೆ ಹೊರಟಿದ್ದ ಏರ್ ಇಂಡಿಯಾ ಎಐ185 ವಿಮಾನದಲ್ಲಿ ಕಾರ್ಯಾಚರಣೆಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅದು ದೆಹಲಿಗೆ ಮರಳಿತು. ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ’ ಎಂದು ಏರ್ ಇಂಡಿಯಾ ಶುಕ್ರವಾರ ತಿಳಿಸಿದೆ. ಆದರೆ ಘಟನೆ ಬಗ್ಗೆ ಅದು ಹೆಚ್ಚಿನ ಮಾಹಿತಿಯನ್ನು ಅದು ನೀಡಿಲ್ಲ.

ಶುಕ್ರವಾರ ಮುಂಜಾನೆ ವಿಮಾನವು ವ್ಯಾಂಕೋವರ್ಗೆ ಹೊರಟಿತು ಎಂದೂ ಏರ್ ಇಂಡಿಯಾ ತಿಳಿಸಿದೆ.

ಬೋಯಿಂಗ್ 777–200 ಎಲ್ಆರ್ ವಿಮಾನ ವಿಟಿ– ಎಇಐ, ಚೀನಾದ ವಾಯುಪ್ರದೇಶದಿಂದ ದೆಹಲಿಗೆ ಮರಳಿತು ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.