ನವದೆಹಲಿ: ದೇಶದಲ್ಲಿ ವಿಮಾನ ಪ್ರಯಾಣಿಕರಿಗೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ಶುಲ್ಕಗಳಿಗೆ ಕಡಿವಾಣ ಹಾಕಲು ನಾಗರಿಕ ವಿಮಾನಯಾನ ಸಚಿವಾಲಯ ಮಹತ್ವದ ಕ್ರಮ ಕೈಗೊಂಡಿದೆ.

ವಿಮಾನದ ಒಟ್ಟು ಸೀಟುಗಳಲ್ಲಿ ಶೇ 60ರಷ್ಟು ಸೀಟುಗಳನ್ನು ಉಚಿತವಾಗಿ ಆಯ್ಕೆಮಾಡಲು ಅವಕಾಶ ಕಲ್ಪಿಸುವಂತೆ ವಿಮಾನಯಾನ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಅಂದರೆ, ಶೇ 60ರಷ್ಟು ಸೀಟುಗಳು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪ್ರಯಾಣಿಕರಿಗೆ ಹಂಚಿಕೆ ಮಾಡವುದು, ಒಂದೇ ಪಿಎನ್ಆರ್ ಅಡಿಯಲ್ಲಿ ಪ್ರಯಾಣಿಸುವವರಿಗೆ ಪಕ್ಕಪಕ್ಕದ ಸೀಟುಗಳು ಹಾಗೂ ಪ್ರಾದೇಶಿಕ ಭಾಷೆಯಲ್ಲಿ ಮಾಹಿತಿ ಒದಗಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದೆ.

ಇದುವರೆಗೂ ಅನೇಕ ವಿಮಾನಯಾನ ಸಂಸ್ಥೆಗಳು ಟಿಕೆಟ್ ಬುಕ್ಕಿಂಗ್ ನಂತರ ಅಥವಾ ವೆಬ್ ಚೆಕ್-ಇನ್ ವೇಳೆ ಪ್ರಯಾಣಿಕರ ಇಷ್ಟದ ಸೀಟುಗಳಿಗೆ ಹೆಚ್ಚುವರಿ ಹಣ ಅಥವಾ ಇತರೆ ಗುಪ್ತ ಶುಲ್ಕವನ್ನು ವಸೂಲಿ ಮಾಡುತ್ತಿದ್ದವು. ಇದರಿಂದ ಪ್ರಯಾಣಿಕರಿಗೆ ಹೆಚ್ಚು ಹೊರೆಯಾಗುತ್ತಿತ್ತು.

ಈ ಬಗ್ಗೆ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ವಿಮಾನಯಾನ ಸಂಸ್ಥೆಗಳು ಗ್ರಾಹಕರನ್ನು ಶೋಷಿಸುತ್ತಿವೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಹೊಸ ನಿಯಮಗಳಲ್ಲಿ ಏನಿದೆ?

ಪಕ್ಕಪಕ್ಕದ ಸೀಟುಗಳು: ಒಂದೇ ಪಿಎನ್ಆರ್ನಲ್ಲಿ ಪ್ರಯಾಣಿಸುವ ಕುಟುಂಬದ ಸದಸ್ಯರು, ಸ್ನೇಹಿತರು, ಆಪ್ತರು, ಬಂಧುಗಳು ಒಟ್ಟಿಗೆ ಅಥವಾ ಪಕ್ಕಪಕ್ಕದ ಸೀಟುಗಳಲ್ಲಿ ಕುಳಿತು ಪ್ರಯಾಣಿಸಬಹುದು.

ಪ್ರಯಾಣಿಕರ ಹಕ್ಕುಗಳು: ವಿಮಾನ ವಿಳಂಬ, ರದ್ದತಿ ಅಥವಾ ಬೋರ್ಡಿಂಗ್ ನಿರಾಕರಣೆ ಸಂದರ್ಭಗಳಲ್ಲಿ ವಿಮಾನಯಾನ ಸಂಸ್ಥೆಗಳು ತಮ್ಮ ವೆಬ್ಸೈಟ್, ಮೊಬೈಲ್ ಆ್ಯಪ್ ಮತ್ತು ಏರ್ಪೋರ್ಟ್ ಕೌಂಟರ್ಗಳಲ್ಲಿ ಪ್ರಕಟಿಸುವುದು ಕಡ್ಡಾಯವಾಗಿದೆ.

ಪ್ರಾದೇಶಿಕ ಭಾಷೆಯಲ್ಲಿ ಮಾಹಿತಿ: ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನಯಾನ ಸಂಸ್ಥೆಗಳು ತಮ್ಮ ನಿಯಮಗಳನ್ನು ಮತ್ತು ಪ್ರಯಾಣಿಕರ ಹಕ್ಕುಗಳ ಕುರಿತು ಇಂಗ್ಲಿಷ್ ಮಾತ್ರವಲ್ಲದೆ ಪ್ರಾದೇಶಿಕ ಭಾಷೆಗಳಲ್ಲೂ ಮಾಹಿತಿ ಅಥವಾ ಸಂವಹನ ನಡೆಸಲು ಸೂಚಿಸಲಾಗಿದೆ.

ಕ್ರೀಡಾಪಟುಗಳು, ಸಂಗೀತಗಾರರಿಗೆ ಅನುಕೂಲ: ಕ್ರೀಡಾ ಉಪಕರಣಗಳು, ಸಂಗೀತ ವಾದ್ಯಗಳು, ಸಾಕು ಪ್ರಾಣಿಗಳನ್ನು (Pets) ವಿಮಾನದಲ್ಲಿ ಕೊಂಡೊಯ್ಯುವ ಬಗ್ಗೆ ಇಲ್ಲಿಯವರೆಗೂ ಯಾವುದೇ ಸ್ಪಷ್ಟ ನಿಯಮಗಳಿರಲಿಲ್ಲ. ಈ ಬಗ್ಗೆ ಪಾರದರ್ಶಕ ನೀತಿಗಳನ್ನು ರೂಪಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಸೂಚಿಸಿದೆ.

ದೇಶೀಯ ವಿಮಾನಯಾನ ಕ್ಷೇತ್ರವು ಜಾಗತಿಕವಾಗಿ ಮೂರನೇ ಅತಿ ದೊಡ್ಡ ಮಾರುಕಟ್ಟೆಯಾಗಿ ಬೆಳೆದಿದ್ದು, ದಿನಕ್ಕೆ ಐದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ವಿಮಾನ ಸೇವೆಯನ್ನು ಬಳಕೆ ಮಾಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆ ಅತ್ಯಂತ ಪ್ರಮುಖವಾಗಿದೆ ಎಂದು ಸಚಿವಾಲಯ ಒತ್ತಿ ಹೇಳಿದೆ. ಈ ಹೊಸ ನಿಯಮಗಳು ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯಲ್ಲಿ ಏಕರೂಪತೆ ತರಲು ಮತ್ತು ಪ್ರಯಾಣಿಕರ ಮೇಲೆ ಇರುವ ಹೆಚ್ಚುವರಿ ಶುಲ್ಕದ ಹೊರೆ ತಪ್ಪಿಸಲು ಸಚಿವಾಲಯ ಕೈಗೊಂಡ ಪ್ರಮುಖ ಹೆಜ್ಜೆಯಾಗಿದೆ.
.ಮುಂದಿನ 5 ವರ್ಷಗಳಲ್ಲಿ 50 ವಿಮಾನ ನಿಲ್ದಾಣ ನಿರ್ಮಿಸುವ ಗುರಿ: ವಿಮಾನಯಾನ ಸಚಿವಾಲಯ.377 ವಿಮಾನಗಳಲ್ಲಿ ಪದೇ ಪದೇ ದೋಷ: ನಾಗರಿಕ ವಿಮಾನಯಾನ ಸಚಿವಾಲಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.