ಲಖನೌ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೆಲ್ಲುತ್ತಾರೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮಂಗಳವಾರ ಪ್ರತಿಪಾದಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯಾದವ್, ಬ್ಯಾನರ್ಜಿ ವಿಜಯಶಾಲಿಯಾಗುತ್ತಾರೆ ಮತ್ತು ಬಂಗಾಳದ ಜನರು ಅವರನ್ನು ಬೆಂಬಲಿಸುತ್ತಾರೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ‘ಬಿಜೆಪಿಯವರು ಅಪ್ರಾಮಾಣಿಕರು ಮತ್ತು ಪಿತೂರಿ ಮಾಡುವವರು. ರಾಜ್ಯದ ಮತದಾರರು ಅವರನ್ನು ಸೋಲಿಸುತ್ತಾರೆ. ರಾಜ್ಯದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಹೆಚ್ಚುತ್ತಿದ್ದು, ಚುನಾವಣೆಗಳ ನಂತರ ಇದು ಇನ್ನಷ್ಟು ಹದಗೆಡುತ್ತದೆ. ಇಂಧನ ಬೆಲೆಗಳು ಮತ್ತು ಅಡುಗೆ ಅನಿಲದ ವೆಚ್ಚಗಳು ಅನಿಶ್ಚಿತ ಮತ್ತು ಸಾರ್ವಜನಿಕರಿಗೆ ಹೊರೆಯಾಗಿ ಉಳಿದಿವೆ. ಆದರೆ ರೈತರು ಸಂಕಷ್ಟವನ್ನು ಎದುರಿಸುತ್ತಲೇ ಇದ್ದಾರೆ’ ಎಂದರು.

ಮಹಿಳಾ ಮೀಸಲಾತಿಯ ಬಗ್ಗೆ ಮಾತನಾಡಿ, ‘ಮಹಿಳಾ ಮೀಸಲಾತಿಯನ್ನು ಸಂಖ್ಯಾ ಆಧಾರದ ಮೇಲೆ ನೀಡಲಾಗುತ್ತಿದೆ. ಆದರೆ 2011ರಿಂದ ಜನಸಂಖ್ಯೆ ಹೆಚ್ಚಾಗಿದೆ. ಅಂದಿಗೂ ಇಂದಿನ ಜನಸಂಖ್ಯೆಯಲ್ಲಿ ವಿಭಿನ್ನವಾಗಿದೆ. ಆದ್ದರಿಂದ ಮೀಸಲಾತಿಗಳು ಪ್ರಸ್ತುತ ಜನಸಂಖ್ಯೆಯನ್ನು ಆಧರಿಸಿರಬೇಕು. ನವೀಕರಿಸಿದ ಜನಗಣತಿ ಅಂಕಿಅಂಶಗಳಿಲ್ಲದೆ ಈ ಕ್ರಮವನ್ನು ಜಾರಿಗೆ ತರಲು ಆತುರ ಏನು’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.