ಲಖನೌ: ದೇಶದ ಸಮಸ್ಯೆಗಳಿಗೆ ಇರಾನ್-ಇಸ್ರೇಲ್ ಸಂಘರ್ಷ ಕಾರಣ ಎಂಬುದಾಗಿ ಬಿಜೆಪಿ ದೂಷಿಸುತ್ತಿದೆ, ಆದರೆ ಇದು ಬಿಜೆಪಿ ಸರ್ಕಾರದ ವೈಫಲ್ಯವೇ ಹೊರತು ಯುದ್ಧದ ಪರಿಣಾಮವಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶುಕ್ರವಾರ ಆರೋಪಿಸಿದ್ದಾರೆ.

ಕಾನ್ಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಪರಿಣಾಮದ ಕುರಿತು ಪ್ರತಿಕ್ರಿಯಿಸಿದ ಅವರು, ಕೈಗಾರಿಕೆಗಳ ಸ್ಥಿತಿಗೆ ಬಿಜೆಪಿ ಸರ್ಕಾರದ ಬೇಜವಾಬ್ದಾರಿ ಕಾರಣ ಎಂದಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿಯೇ ಗಂಗಾ ನದಿಯನ್ನು ಶುದ್ಧೀಕರಿಸಲಾಗುತ್ತಿಲ್ಲವೇ?, ರೈತರ ಸಮಸ್ಯೆಗಳನ್ನು ಬೇರೆಡೆ ಸೆಳೆಯಲು ಸಂಬಂಧವಿಲ್ಲದ ವಿಷಯಗಳನ್ನು ಎಳೆದು ತರುತ್ತಿದೆ ಎಂದು ಬಿಜೆಪಿ ವಿರುದ್ಧ ಯಾದವ್ ವ್ಯಂಗ್ಯವಾಡಿದ್ದಾರೆ.
.ಮಗನ ಜೊತೆಗಿನ ಮೊದಲ ಫೋಟೊ ಹಂಚಿಕೊಂಡ ನಟಿ ಸೋನಮ್ ಕಪೂರ್.ವಿಜಯ್ ರಾಜಕೀಯ ಪ್ರವೇಶಕ್ಕೆ ವ್ಯಂಗ್ಯ? ಗೊಂದಲ ಸೃಷ್ಟಿಸಿದ ‘ಟಿಎನ್ 2026’ ಟೀಸರ್.
ರಸಗೊಬ್ಬರ ಕೊರತೆಯನ್ನು ಉಲ್ಲೇಖಿಸಿದ ಅವರು, ರಸಗೊಬ್ಬರಗಳು ಮೊದಲೇ ಲಭ್ಯವಿರಲಿಲ್ಲ. ಆದರೆ ಈಗ ಇರಾನ್-ಇಸ್ರೇಲ್ ಸಂಘರ್ಷಕ್ಕೆದಿಂದ ಕೊರತೆ ಉಂಟಾಗಿದೆ ಎನ್ನಲಾಗಿದೆ ಎಂದು ದೂರಿದ್ದಾರೆ.

ಮತದಾನ ಪದ್ಧತಿ ಕುರಿತು ಪ್ರತಿಕ್ರಿಯಿಸಿರುವ ಅವರು, ಜರ್ಮನಿಯಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ ಬಳಕೆಯನ್ನು ಸಂವಿಧಾನಬಾಹಿರವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಇವಿಎಂಗಳು ಮತ್ತು ವಿವಿಪಿಎಟಿ ವ್ಯವಸ್ಥೆಗಳ ಮೇಲಿನ ನಿರಂತರ ಅವಲಂಬನೆಯನ್ನು ಪ್ರಶ್ನಿಸಿದರು.

ಬ್ಯಾಲೆಟ್ ಮತದಾನಕ್ಕೆ ಮರಳುವ ಪರವಾಗಿ ತಮ್ಮ ಪಕ್ಷದ ನಿಲುವನ್ನು ಯಾದವ್ ಪುನರುಚ್ಚರಿಸಿದರು.
.ಅಸ್ಸಾಂನಲ್ಲಿ BJPಗೆ ಅವಕಾಶ ಕೊಡಿ, ಬುಡಕಟ್ಟು ಕಲ್ಯಾಣಕ್ಕೆ ಒತ್ತು ನೀಡುತ್ತೇವೆ: ಶಾ.ಭಾಲ್ಕಿ: ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಪೊಲೀಸ್ ಕಾನ್ಸ್ಟೆಬಲ್ ಕಾರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.