ಲಖನೌ: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶುಕ್ರವಾರ (ಮೇ.1) ತೀವ್ರವಾಗಿ ಖಂಡಿಸಿದ್ದಾರೆ.

‘ಸಿಲಿಂಡರ್ ಬೆಲೆ ಏರಿಕೆಯಿಂದಾಗಿ ಆಹಾರ ದುಬಾರಿಯಾಗಲಿದ್ದು, ಸಾಮಾನ್ಯ ವರ್ಗದ ಜನರಿಗೆ ಹೊರೆಯಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಬೆಲೆ ಏರಿಕೆಯಾಗಿದ್ದು, ಇದರ ಪರಿಣಾಮವಾಗಿ 19 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ ₹993 ಏರಿಕೆಯಾಗಿದೆ. ಇದುವರೆಗೆ ಸತತ ಮೂರನೇ ತಿಂಗಳು ಬೆಲೆ ಹೆಚ್ಚಾದಂತಾಗಿದೆ.

ಬೆಲೆ ಏರಿಕೆ ಕುರಿತು ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್, ‘ಇಲ್ಲಿ ಸಿಲಿಂಡರ್ ಬೆಲೆ ಏರುತ್ತಿಲ್ಲ, ಬದಲಿಗೆ ಸಾಮಾನ್ಯ ಜನರ ಆಹಾರ ದುಬಾರಿಯಾಗುತ್ತಿದೆ. ಕಷ್ಟಪಟ್ಟು ದುಡಿದು, ಕೊಂಡು ತಿನ್ನುವವರಿಗೆ ಮಾತ್ರ ಅದರ ನೋವು ಗೊತ್ತಾಗುತ್ತದೆ. ಆದರೆ ಬೇರೆಯವರ ಮನೆಯಲ್ಲಿ ತಿನ್ನುವವರಿಗೆ ಅಥವಾ ಜನರ ತಟ್ಟೆಯಿಂದ ಆಹಾರ ಕದಿಯುವವರಿಗೆ ಇದು ಅರ್ಥವಾಗುವುದಿಲ್ಲ’ ಎಂದು ಕಿಡಿಕಾರಿದರು.

‘ಸಿಲಿಂಡರ್ ಬೆಲೆಯನ್ನು ಏರಿಸಲೇಬೇಕು ಎಂದಿದ್ದರೆ ನೇರವಾಗಿ ₹1,000 ಹೆಚ್ಚಿಸಬೇಕಿತ್ತು. ಅದರಲ್ಲಿ ₹7 ಕಡಿಮೆ ಮಾಡಿ ಯಾರಿಗೆ ಉಪಕಾರ ಮಾಡುತ್ತಿದ್ದಾರೆ? ಎಂದು ಅಖಿಲೇಶ್ ವ್ಯಂಗ್ಯವಾಡಿದರು.

ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ₹2,078ರಿಂದ ದಾಖಲೆಯ ₹3,071ಕ್ಕೆ ಏರಿಕೆಯಾಗಿದೆ. ಆದರೆ, ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹಣದುಬ್ಬರ, ನಿರುದ್ಯೋಗ ಮತ್ತು ಆರ್ಥಿಕ ಹಿಂಜರಿತದ ಬಗ್ಗೆ ಬಿಜೆಪಿ ಯಾವಾಗ ನಿಂದನಾ ನಿರ್ಣಯ ತರುತ್ತದೆ ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.