ನವದೆಹಲಿ: ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನಲ್ಲೇ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳೆದಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ತಲೆದೋರಿರುವ ಸಂಘರ್ಷದ ಪರಿಣಾಮವಾಗಿ ತೈಲ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ಇಂಧನವನ್ನು ಕಡಿಮೆ ಬಳಸುವಂತೆ ಮೋದಿ ಅವರು ಮೊನ್ನೆಯಷ್ಟೇ ಕರೆ ನೀಡಿದ್ದರು. ಅದರ ಬೆನ್ನಲ್ಲೇ, ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ತಲಾ ₹ 3 ಹೆಚ್ಚಿಸಲಾಗಿದೆ.

ಈ ಸಂಬಂಧ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್, ಸೈಕಲ್ ಸವಾರಿ ಮಾಡುತ್ತಿರುವ ಚಿತ್ರ ಹಂಚಿಕೊಂಡು, ‘ನೀವು ಮುನ್ನಡೆಯಲು ಬಯಸುವುದಾದರೆ, ಉಳಿದಿರುವ ಆಯ್ಕೆ ಸೈಕಲ್ ಮಾತ್ರ’ ಎಂದಿದ್ದಾರೆ. ಅಖಿಲೇಶ್ ಅವರ ಸಮಾಜವಾದಿ ಪಕ್ಷದ ಚಿಹ್ನೆಯೂ ಸೈಕಲ್. ಅದೇ ಕಾರಣಕ್ಕಾಗಿ ಅವರು ಈ ರೀತಿಯ ಪೋಸ್ಟ್ ಹಂಚಿಕೊಂಡಿದ್ದಾರೆ.

ಇಂಧನ ಉಳಿತಾಯಕ್ಕೆ ಮೋದಿ ಅವರು ನೀಡಿರುವ ಕರೆಗೆ ಓಗೊಟ್ಟಿರುವ ಉತ್ತರ ಪ್ರದೇಶ ಸರ್ಕಾರ, ಅದಕ್ಕೆ ಪೂರಕವಾಗಿ ಹಲವು ಉಪಕ್ರಮಗಳನ್ನು ಆರಂಭಿಸಿದೆ. ಹಲವು ಸಚಿವರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಸೈಕಲ್, ಎಲೆಕ್ಟ್ರಿಕ್ ವಾಹನಗಳು ಅಥವಾ ಸಾರ್ವಜನಿಕ ಸಾರಿಗೆಯನ್ನೇ ಬಳಸಲಾರಂಭಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಬೆಂಗಾವಲು ವಾಹನಗಳನ್ನು ಶೇ 50ರಷ್ಟು ಇಳಿಸಿದ್ದಾರೆ. ಕೆಲವೆಡೆ ವರ್ಕ್ ಫ್ರಂ ಹೋಮ್ಗೆ ಅವಕಾಶ ಕಲ್ಪಿಸಿರುವುದರ ಜೊತೆಗೆ, ಸಭೆಗಳನ್ನು ವರ್ಚುವಲ್ ಆಗಿ ನಡೆಸುವಂತೆ ಆದೇಶಿಸಿದ್ದಾರೆ.

ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಅವರು ಮನೆಯಿಂದ ಕಚೇರಿಗೆ ಸೈಕಲ್ ತುಳಿದುಕೊಂಡೇ ಬರಲಾರಂಭಿಸಿದ್ದಾರೆ.

ಬಾರಾಬಂಕಿ ಜಿಲ್ಲಾಧಿಕಾರಿ ಇಶಾನ್ ಪ್ರತಾಪ್ ಸಿಂಗ್ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ನಿರಂಕರ್ ಸಿಂಗ್ ಅವರೊಂದಿಗೆ ತಮ್ಮ ನಿವಾಸದಿಂದ ಕಚೇರಿಗೆ ನಡೆದುಕೊಂಡೇ ಹೋಗಿದ್ದಾರೆ. ವಾರಾಣಸಿ ಮೇಯರ್ ಅಶೋಕ್ ಕುಮಾರ್ ತಿವಾರಿ ಅವರೂ ಈ ವಿಧಾನವನ್ನೇ ಅನುಸರಿಸಿದ್ದಾರೆ.
.ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೀಗಿದೆ...ಪೆಟ್ರೋಲ್, ಡೀಸೆಲ್ ಬೆಲೆ ತಲಾ ₹3 ಹೆಚ್ಚಳ: ಪರಿಷ್ಕೃತ ದರ ಇಂದಿನಿಂದಲೇ ಜಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.