ವಿಶ್ವದಲ್ಲಿಯೇ ಅತಿ ಹೆಚ್ಚು ಮಾವಿನಹಣ್ಣು ಬೆಳೆಯುವ ದೇಶ ಭಾರತವಾಗಿದೆ. ಮಾತ್ರವಲ್ಲದೆ, ದೇಶದಲ್ಲಿ ಆಲ್ಫೋನ್ಸೊ ಮಾವಿನ ಹಣ್ಣಿನ ಉತ್ಪಾದನೆಗೆ ಮಹಾರಾಷ್ಟ್ರ ಹೆಸರುವಾಸಿಯಾಗಿದೆ. ಆದರೆ ಈ ವರ್ಷ ಎಲ್ ನಿನೊದ ಪರಿಣಾಮದಿಂದಾಗಿ ಉಂಟಾದ ಹವಾಮಾನ ವೈಪರೀತ್ಯದಿಂದಾಗಿ ಆಲ್ಫೋನ್ಸೊ ಮಾವಿನ ಇಳುವರಿಯಲ್ಲಿ ಇಳಿಮುಖವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾರಾಷ್ಟ್ರದ ದೇವ್ಗಢದಲ್ಲಿ 26 ವರ್ಷದ ತೋಟಗಾರಿಕಾ ತಜ್ಞೆ ಕೋಮಲ್ ವಾಲ್ಕೆ ಎಂಬುವವರು ತಮ್ಮ 3 ಎಕರೆ ಜಮೀನಿನಲ್ಲಿ ಆಲ್ಫೋನ್ಸೊ ಮಾವಿನ ಹಣ್ಣುಗಳನ್ನು ಬೆಳೆದಿದ್ದಾರೆ. ಆದರೆ ಹವಾಮಾನ ವೈಪರೀತ್ಯದಿಂದಾಗಿ ಇಳುವರಿ ಕುಸಿತವಾಗಿದೆ. ಈ ಕಾರಣದಿಂದ ಅವರು ಆನ್ಲೈನ್ ಸೇರಿದಂತೆ ಅಂಗಡಿಗಳಿಗೆ ಆಲ್ಫೋನ್ಸೊ ಮಾವಿನ ಹಣ್ಣಿನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಮ್ಮ ಮಾವಿನ ವ್ಯಾಪಾರವನ್ನು ಮುಂದುವರೆಸಲು ವಿವಿಧ ತೋಟಗಳಿಂದ ಆಲ್ಫೋನ್ಸೊ ಮಾವಿನ ಹಣ್ಣನ್ನು ಕೊಂಡು ತರಬೇಕಾದ ಪ್ರಮೇಯ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ವಿಶ್ವದ ಪ್ರಮುಖ ಮಾವಿನ ಹಣ್ಣು ರಫ್ತುದಾರ ದೇಶವಾಗಿರುವ ಭಾರತವು 2024 ರಿಂದ 2025 ರ ಅವಧಿಯಲ್ಲಿ 2 ಕೋಟಿ 80 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದಿಸಿದೆ ಎಂದು ಸಂಶೋಧನೆ ಮತ್ತು ರೇಟಿಂಗ್ ಸಂಸ್ಥೆ (CRISIL) ತಿಳಿಸಿದೆ. ಆದರೆ ಈ ವರ್ಷ ಹೆಚ್ಚಿದ ತಾಪಮಾನ ಮಾವು ಬೆಳೆಯ ನಷ್ಟಕ್ಕೆ ಕಾರಣವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಡಿಸೆಂಬರ್ ಮತ್ತು ಜನವರಿಯ ತಿಂಗಳಿನಲ್ಲಿ ಉಂಟಾದ ತಾಪಮಾನದ ತೀವ್ರ ವ್ಯತ್ಯಾಸವು ಆಲ್ಫೋನ್ಸೊ ಮಾವಿನ ಹಣ್ಣಿನ ಮರಗಳ ಕಾಯಿ ಕಟ್ಟುವಿಕೆಗೆ ಹಾನಿಯುಂಟು ಮಾಡಿತು. ನಂತರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಬಿಸಿಲಿನ ವಾತಾವರಣ ಹಾಗೂ ಎಲ್ ನಿನೊ ವಿದ್ಯಮಾನವು ಮಾವಿನ ಹಣ್ಣಿನ ಇಳುವರಿಯ ಕುಸಿತಕ್ಕೆ ಕಾರಣವಾಯಿತು’ ಎಂದು ದೇವಗಡದ ಸರ್ಕಾರಿ ಕೃಷಿ ಅಧಿಕಾರಿ ಬಾಪುಸಾಹೇಬ್ ಮಾಣಿಕ್ರಾವ್ ಲಂಬಡೆ ಹೇಳಿದ್ದಾರೆ.

ಎಲ್ ನಿನೊ ಪ್ರಭಾವದಿಂದ ಭಾರತ ಮಾತ್ರವಲ್ಲದೆ, ಏಷ್ಯಾ, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾದಾದ್ಯಂತದ ಬೆಳೆಯುವ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ವರ್ಷದ ಆರಂಭದಲ್ಲಿ ಕೃಷಿ ವಿಜ್ಞಾನಿಗಳು ನಡೆಸಿದ ಸಮೀಕ್ಷೆಯಲ್ಲಿ ದೇವ್ಗಡ್ನಲ್ಲಿನ ಬೆಳೆ ನಷ್ಟವು ಶೇ 85 ರಿಂದ ಶೇ 90 ರಷ್ಟಿದೆ ಎಂದು ಅಂದಾಜಿಸಲಾಗಿದೆ.

ಕಳೆದ ವರ್ಷ ದೇಶದಲ್ಲಿ ಉತ್ಪಾದನೆಯಾದ ಮಾವಿನ ಹಣ್ಣಿನ ಮೌಲ್ಯ ಸುಮಾರು ₹250 ಕೋಟಿ ಆಗಿತ್ತು ಎಂದು ಭಾರತೀಯ ಸಂಶೋಧನಾ ಸಂಸ್ಥೆ ಮೊರ್ಡರ್ ಇಂಟೆಲಿಜೆನ್ಸ್ ತಿಳಿಸಿದೆ. 2031 ರ ವೇಳೆಗೆ ಇದರ ಮಾರುಕಟ್ಟೆ ಮೌಲ್ಯವು ಸುಮಾರು ₹340 ಕೋಟಿಗೆ ತಲುಪುವ ನಿರೀಕ್ಷೆಯಿದೆ. 2025 ರಲ್ಲಿ ₹560 ಕೋಟಿ ಮೌಲ್ಯದ ಮಾವಿನಹಣ್ಣನ್ನು ವಿದೇಶಗಳಿಗೆ ರಫ್ತು ಮಾಡಲಾಗಿತ್ತು.

‘ಈ ವರ್ಷದ ರೈತರಿಗೆ ತೀವ್ರವಾಗಿ ನಷ್ಟ ಉಂಟಾಗಿದೆ. ಮಾತ್ರವಲ್ಲದೆ ದಶಕಗಳಲ್ಲಿಯೇ ಉತ್ಪಾದನೆ ಅತ್ಯಂತ ಕಡಿಮೆಯಾಗಿದೆ’ ಎಂದು ಸ್ಥಳೀಯ ರೈತರು, ವ್ಯಾಪಾರಿಗಳು ರಾಯಟರ್ಸ್ಗೆ ತಿಳಿಸಿದ್ದಾರೆ.

ಯುದ್ಧದಿಂದ ಮಾವಿನ ವ್ಯಾಪಾರಕ್ಕೆ ಹೊಡೆತ

ಪಶ್ಚಿಮ ಏಷ್ಯಾ ದೇಶಗಳ ನಡುವೆ ಉಂಟಾದ ಉದ್ವಿಗ್ನತೆಯಿಂದಾಗಿ ಮಾವಿನ ಹಣ್ಣಿನ ರಫ್ತಿನಲ್ಲಿ ಕುಸಿತ ಕಂಡುಬಂದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್, ಯುಎಸ್, ಯುಕೆ, ಕುವೈತ್ ಮತ್ತು ಕತಾರ್ಗಳಿಗೆ ಭಾರತವು ತಾಜಾ ಮಾವಿನಹಣ್ಣನ್ನು ರಫ್ತು ಮಾಡುವ ಅತಿದೊಡ್ಡ ದೇಶವಾಗಿದೆ.

ಮಾವಿನ ರಫ್ತುದಾರರಾಗಿರುವ ಶ್ರೀವಲಿ ಆಗ್ರೋದ ಸಹ-ಸಂಸ್ಥಾಪಕ ಶ್ರೀಧರ್ ಪಾಠಕ್ ಮಾತನಾಡಿ, ‘ಯುದ್ಧದಿಂದಾಗಿ ಸರಕು ಸಾಗಣಿಕೆಯ ಶುಲ್ಕಗಳು ದುಪ್ಪಟ್ಟಾಗಿವೆ. ದುಬೈ ಮತ್ತುಓಮನ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿನ ಬಿಕ್ಕಟ್ಟನಿಂದಾಗಿ ರಫ್ತು ಪ್ರಮಾಣ ಶೇ 40 ರಷ್ಟು ಕಡಿಮೆಯಾಗಿದೆ’ ಎಂದು ಹೇಳಿದ್ದಾರೆ.

ಮಾವಿನ ಹಣ್ಣಿನ ಪೆಟ್ಟಿಗೆ ತಯಾರಕರಾದ ಸಂಜಯ್ ನಾರೆ ಅವರು ಮಾಹಿತಿ ನೀಡಿ ‘ಈ ವರ್ಷ ಕಾರ್ಖಾನೆಯಲ್ಲಿ ಸುಮಾರು 1 ಲಕ್ಷ ಮಾವಿನ ಹಣ್ಣುಗಳನ್ನು ಇಡುವ ಪೆಟ್ಟಿಗೆಗಳು ಮಾರಾಟವಾಗದೆ ಬಾಕಿ ಉಳಿದಿವೆ’ ಎಂದು ಹೇಳಿದ್ದಾರೆ.

ಆಧಾರ: ಮನಿ ಕಂಟ್ರೋಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.