ನವದೆಹಲಿ: ಕೇಂದ್ರ ಸರ್ಕಾರವು ಆಂಧ್ರಪ್ರದೇಶ ಪುನರ್ರಚನೆ ತಿದ್ದುಪಡಿ ಮಸೂದೆ–2026 ಅನ್ನು ಲೋಕಸಭೆಯಲ್ಲಿ ಬುಧವಾರ ಅಂಗೀಕರಿಸಲಾಗಿದೆ. ಈ ಮೂಲಕ ಅಮರಾವತಿ ನಗರವನ್ನು ಆಂಧ್ರಪ್ರದೇಶದ ಶಾಶ್ವತ ರಾಜಧಾನಿಯಾಗಿ ಘೋಷಿಸಿದಂತಾಗಿದೆ.

ಅಮರಾವತಿಯನ್ನು ಏಕೈಕ ಮತ್ತು ಶಾಶ್ವತ ರಾಜಧಾನಿಯನ್ನಾಗಿ ಮಾಡಬೇಕು ಮತ್ತು ಭವಿಷ್ಯದಲ್ಲಿ ರಾಜಧಾನಿಯನ್ನು ಬದಲಾಯಿಸುವ ಯಾವುದೇ ಪ್ರಯತ್ನವನ್ನು ತಡೆಯುವ ಈ ಮಸೂದೆಯನ್ನು ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ.

ಇದರೊಂದಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಹುದಿನಗಳ ಆಕಾಂಕ್ಷೆ ಈಡೇರಿದಂತಾಗಿದೆ. ಟಿಡಿಪಿ ಪಕ್ಷವು ಕೇಂದ್ರದ ಎನ್ಡಿಎ ಮೈತ್ರಿಕೂಟದ ಭಾಗವಾಗಿದೆ.

ಅಮರಾವತಿಯನ್ನು ರಾಜ್ಯದ ರಾಜಧಾನಿಯಾಗಿ ಅಧಿಕೃತವಾಗಿ ಘೋಷಿಸಲು ನೆರವಾಗುವಂತೆ ಆಂಧ್ರಪ್ರದೇಶ ಪುನರ್ರಚನೆ ಕಾಯ್ದೆ–2014ಕ್ಕೆ ಸೂಕ್ತ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಮಾರ್ಚ್ 28ರಂದು ಅಂಗೀಕರಿಸಲಾಗಿತ್ತು.

2024ರ ಜೂನ್ 2ರಿಂದ ಪೂರ್ವಾನ್ವಯವಾಗುವಂತೆ ಅಮರಾವತಿ ನಗರವನ್ನು ಆಂಧ್ರಪ್ರದೇಶ ರಾಜಧಾನಿಯಾಗಿ ಪರಿಗಣಿಸಬೇಕು ಎಂಬ ಅವಕಾಶವನ್ನು ಕೂಡ ಈ ತಿದ್ದುಪಡಿ ಮಸೂದೆ ಒಳಗೊಂಡಿದೆ.

‘ಅಮರಾವತಿಯನ್ನು ಆಂಧ್ರಪ್ರದೇಶದ ಹೊಸ ರಾಜಧಾನಿಯಾಗಿ ಘೋಷಿಸಲು ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರವನ್ನು ಕೋರಿ ಮಾರ್ಚ್ 28ರಂದು ಆಂಧ್ರಪ್ರದೇಶ ವಿಧಾನಸಭೆ ಅಂಗೀಕರಿಸಿದ ನಿರ್ಣಯಕ್ಕೆ ಈ ಮಸೂದೆ ಅಧಿಕೃತ ರೂಪ ನೀಡಿದೆ’ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ತಿಳಿಸಿದ್ದಾರೆ.

2014ರ ವಿಭಜನೆಯ ನಂತರ ಆಂಧ್ರಪ್ರದೇಶದ ರಾಜಧಾನಿಯ ಬಗ್ಗೆ ಶಾಸನಬದ್ಧ ಸ್ಪಷ್ಟತೆಯನ್ನು ಈ ಮಸೂದೆ ನೀಡುತ್ತದೆ. ಆಂಧ್ರಪ್ರದೇಶ ಪುನರ್ರಚನೆ ಕಾಯ್ದೆ 2014ರ ಸೆಕ್ಷನ್ 5ರ ಪ್ರಕಾರ, ವಿಭಜನೆಯ ನಂತರ 10 ವರ್ಷಗಳವರೆಗೆ ಹೈದರಾಬಾದ್ ನಗರವನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳಿಗೆ ಜಂಟಿ ರಾಜಧಾನಿಯನ್ನಾಗಿ ಮಾಡಲಾಗಿತ್ತು. ಪ್ರಸ್ತುತ ಮಸೂದೆಯು ಈ ಸೆಕ್ಷನ್ಗೆ ತಿದ್ದುಪಡಿ ತರಲಿದೆ.

ಲೋಕಸಭೆಯಲ್ಲಿ ಕಾಂಗ್ರೆಸ್ನ ಉಪ ಮುಖ್ಯ ಸಚೇತಕ ಮಾಣಿಕ್ಕಂ ಟ್ಯಾಗೋರ್ ಅವರು ಈ ಮಸೂದೆಯನ್ನು ಬೆಂಬಲಿಸಿದ್ದಾರೆ. ಸಂಸತ್ತಿನಲ್ಲಿ ಭರವಸೆ ನೀಡಿದಂತೆ ಆಂಧ್ರಪ್ರದೇಶಕ್ಕೆ ವಿಶೇಷ ರಾಜ್ಯದ ಸ್ಥಾನಮಾನ ನೀಡಬೇಕು. ಅಮರಾವತಿಯು ಬೆಂಗಳೂರು, ಚೆನ್ನೈ ಅಥವಾ ಹೈದರಾಬಾದ್ನಂತೆ ಅಭಿವೃದ್ಧಿಯಾಗಲಿ ಎಂದು ಆಶಿಸಿದ್ದಾರೆ.

‘ಸ್ವತಂತ್ರ ಭಾರತದ ಇತಿಹಾಸದಲ್ಲಿ ನಿರ್ದಿಷ್ಟ ಸ್ಥಳವೊಂದನ್ನು ರಾಜ್ಯದ ರಾಜಧಾನಿ ಎಂದು ಘೋಷಿಸಲು ಸಂಸತ್ತಿನಲ್ಲಿ ಮಸೂದೆ ತಂದಿರುವುದು ಇದೇ ಮೊದಲು’ ಎಂದ ಬಿಜೆಪಿ ಸಂಸದ ಸಿ.ಎಂ. ರಮೇಶ್, ಮೂರು ರಾಜಧಾನಿಗಳ ಯೋಜನೆಯನ್ನು ಹೊಂದಿದ್ದ ಹಿಂದಿನ ವೈಎಸ್ಆರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಭೂಮಿ ಕಳೆದುಕೊಂಡ ರೈತರ ಹಿತಾಸಕ್ತಿ ಕಾಪಾಡುವವರೆಗೆ ಮತ್ತು ನಿರ್ದಿಷ್ಟ ಕಾಲಮಿತಿಯಲ್ಲಿ ಪರಿಹಾರ ನೀಡುವವರೆಗೆ ಈ ಮಸೂದೆಗೆ ಅರ್ಥವಿರುವುದಿಲ್ಲ’ ಎಂದ ವೈಎಸ್ಆರ್ ಕಾಂಗ್ರೆಸ್ ನಾಯಕ ಪಿ.ವಿ. ಮಿಥುನ್ ರೆಡ್ಡಿ, ಜಾಗತಿಕ ಉದಾಹರಣೆಗಳನ್ನು ನೀಡುವ ಮೂಲಕ ತಮ್ಮ ಸರ್ಕಾರದ ಮೂರು ರಾಜಧಾನಿಗಳ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.