ಜಮ್ಮು: ಪ್ರಸಿದ್ಧ ಅಮರನಾಥ ಯಾತ್ರೆಗೆ ಅಂತಿಮ ಹಂತದ ತಯಾರಿ ನಡೆದಿದ್ದು, ಸೋಮವಾರದಿಂದ ಯಾತ್ರಾರ್ಥಿಗಳ ನೇರ ನೋಂದಣಿಗಾಗಿ ಜಮ್ಮುವಿನ ಸರಸ್ವತಿ ಧಾಮ್ನಲ್ಲಿ ಟೋಕನ್ ವಿತರಣೆ ಆರಂಭಗೊಂಡಿದೆ.

ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಾವಲು ವಾಹನಗಳು ಸುರಕ್ಷತೆ ಮತ್ತು ಸುಗಮ ಸಂಚಾರದ ಪೂರ್ವ ತಾಲೀಮು ನಡೆಸಿದ ನಂತರ ಯಾತ್ರಾರ್ಥಿಗಳ ನೋಂದಣಿಗೆ ಟೋಕನ್ ಕೇಂದ್ರ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

3,880 ಮೀಟರ್ ಎತ್ತರದ ಗುಹಾ ದೇವಾಲಯ ಅಮರನಾಥ ಕ್ಷೇತ್ರಕ್ಕೆ ಜುಲೈ 3ರಿಂದ 38 ದಿನಗಳ ಯಾತ್ರೆ ಆರಂಭವಾಗಲಿದೆ. ಅನಂತನಾಗ್ ಜಿಲ್ಲೆಯ ನುನ್ವಾನ್–ಪಹಲ್ಗಾಮ್ ನಡುವಿನ 48 ಕಿಲೋ ಮೀಟರ್ ಮಾರ್ಗ ಮತ್ತು ಗಂದೇರ್ಬಾಲ್ ಜಿಲ್ಲೆಯ 18 ಕಿ.ಮೀ ದೂರದ ಬಲ್ತಾಲ್ ಈ ಎರಡು ಮಾರ್ಗಗಳಲ್ಲಿ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದೆ.

ಮಳೆಯ ನಡುವೆಯೂ ಭಕ್ತರಲ್ಲಿ ಉತ್ಸಾಹ ಮನೆ ಮಾಡಿದೆ. ಜುಲೈ 2ರಂದೇ ಯಾತ್ರಾರ್ಥಿಗಳ ಮೊದಲ ತಂಡ ಕಾಶ್ಮೀರದಿಂದ ಜಮ್ಮು ಭಾಗದ ಭಾಗ್ವತಿ ನಗರ ಸೇನಾ ಶಿಬಿರಕ್ಕೆ ತೆರಳಲಿದೆ.

ಟೋಕನ್ ಪಡೆದವರು ಮಂಗಳವಾರ ವೈಷ್ಣೋದೇವಿ ಧಾಮ, ಪಂಚಾಯತ್ ಭವನ್ ಮತ್ತು ಮಹಾಜನ್ ಸಭಾ ಈ ಮೂರು ಕೇಂದ್ರಗಳಲ್ಲಿ ನೇರ ನೋಂದಣಿ ಮಾಡಿಸಿ ಯಾತ್ರೆ ಆರಂಭಿಸಬಹುದು. ದಿನಕ್ಕೆ ಕನಿಷ್ಠ 2,000 ಯಾತ್ರಾರ್ಥಿಗಳ ನೋಂದಣಿಗೆ ಅವಕಾಶ ಇರಲಿದೆ ಎಂದು ದಕ್ಷಿಣ ಜಮ್ಮು ಉಪ ವಿಭಾಗ ದಂಡಾಧಿಕಾರಿ ಮನು ಹನ್ಸಾ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.