ಮೊಗಾ: ‘ಸಾಲ, ಮಾದಕವಸ್ತು, ಮತಾಂತರ, ಭ್ರಷ್ಟಾಚಾರ ಮತ್ತು ಗ್ಯಾಂಗ್ಸ್ಟರ್ಗಳ ಭಯದಿಂದ ಪಂಜಾಬ್ ಅನ್ನು ನಾಶ ಮಾಡಲಾಗಿದೆ. ಈ ಸಮಸ್ಯೆಗಳಿಂದ ರಾಜ್ಯವನ್ನು ಯಾರಾದರೂ ಕಾಪಾಡಬಲ್ಲರು ಎಂದರೆ ಅದು ನರೇಂದ್ರ ಮೋದಿ ಮತ್ತು ಬಿಜೆಪಿಯಿಂದ ಮಾತ್ರ ಸಾಧ್ಯ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‘ಪಂಜಾಬ್ ಬದಲಾವಣೆ ಬಯಸುತ್ತಿದೆ’ ಎನ್ನುವ ಘೋಷಣೆಯೊಂದಿಗೆ ಪಂಜಾಬ್ನ ಮೊಗ ಪ್ರದೇಶದಲ್ಲಿ ಶಾ ಅವರು ಶನಿವಾರ ರ್ಯಾಲಿ ನಡೆಸಿದರು. 2027ರಲ್ಲಿ ನಡೆಯಲಿರುವ ವಿಧಾನಸಭೆ ಚುನವಾಣೆಗೆ ಬಿಜೆಪಿಯು ತನ್ನ ಪ್ರಚಾರ ಆರಂಭಿಸಿದೆ ಎಂದೂ ಶಾ ಹೇಳಿದರು.

‘ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದೆವು. ಭಯೋತ್ಪಾದನೆಯು ಅಲ್ಲಿ ಕೊನೆಯುಸಿರೆಳೆಯುತ್ತಿದೆ. ನಕ್ಸಲ್ವಾದ ಕೂಡ ತನ್ನ ಅಂತ್ಯದಲ್ಲಿದೆ. ನಮಗೆ ಮತ ನೀಡಿ ಆಶೀರ್ವದಿಸಿ. ರಾಜ್ಯದಿಂದ ಮಾದಕವಸ್ತು ವ್ಯಾಪಾರವನ್ನು ಎರಡೇ ವರ್ಷದಲ್ಲಿ ಬುಡಸಮೇತ ಕಿತ್ತು ಹಾಕುತ್ತೇವೆ’ ಎಂದು ಭರವಸೆ ನೀಡಿದರು.

‘ಭಗವಂತ್ ಮಾನ್ ಅವರ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. ದೆಹಲಿಯಲ್ಲಿ ಕುಳಿತಿರುವ ‘ನಾಲ್ಕು ಸುಬೇದಾರರು’ ಇಲ್ಲಿನ ಸಂಪತ್ತನ್ನು ಹೊತ್ತೊಯ್ಯುತ್ತಿದ್ದಾರೆ. ಇದಕ್ಕೆ ಮಾನ್ ಅವರಿಗೆ ನಾಚಿಕೆಯಾಗಬೇಕು. ಕಳೆದ ಬಾರಿ ಚುನಾವಣೆಯ ವೇಳೆ ನೀಡಿದ್ದ ಯಾವ ಭರವಸೆಯನ್ನೂ ಈ ಸರ್ಕಾರ ಈಡೇರಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವರ್ಷದ ಆರಂಭದಿಂದ ಇಲ್ಲಿಯವರೆಗೆ ಮೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹತ್ಯೆಯಾಗಿದ್ದಾರೆ. ಗ್ಯಾಂಗ್ಸ್ಟರ್ಗಳು ಜನರಿಗೆ ಹಣ ಸುಲಿಗೆ ಮಾಡುತ್ತಿದ್ದಾರೆ
ಅಮಿತ್ ಶಾ, ಕೇಂದ್ರ ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.