ಕೋಲ್ಕತ್ತ: ಪಶ್ಚಿಮ ಬಂಗಾಳ ಚುನಾವಣೆಗೆ ಬಿಜೆಪಿ ಪರ ಪ್ರಚಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೀವ್ರಗೊಳಿಸಿದ್ದು, ಟಿಎಂಸಿ ಸರ್ಕಾರದ ವಿರುದ್ಧ ಶನಿವಾರ ಚಾರ್ಜ್ಶೀಟ್ ಬಿಡುಗಡೆ ಮಾಡಿದ್ದಾರೆ.
.ಟಿಎಂಸಿ ಪ್ರಣಾಳಿಕೆ: 10 ಭರವಸೆ ಜೊತೆಗೆ ಮಹಿಳೆಯರ ಮಾಸಿಕ ನೆರವು ₹500ಕ್ಕೆ ಹೆಚ್ಚಳ.
ಕೋಲ್ಕತ್ತದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಟಿಎಂಸಿಯ 15 ವರ್ಷಗಳ ಆಡಳಿತದಿಂದಾಗಿ ರಾಜ್ಯವು, ಒಳನುಸುಳಿವಿಕೆ, ತುಷ್ಠೀಕರಣ ರಾಜಕಾರಣ ಹಾಗೂ ಗಡಿ ಅಭದ್ರತೆಯ ಪ್ರಮುಖ ಕಾರಿಡರ್ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಬಂಗಾಳ ಚುನಾವಣೆಯೂ ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಮುಖ್ಯವಾದುದು. ದೇಶದ ಭದ್ರತೆಗೂ ಬಂಗಾಳ ಚುನಾವಣೆಗೂ ನಂಟಿದೆ’ ಎಂದು ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಸ್ಸಾಂನಲ್ಲಿ ಒಳನುಸುಳುವಿಕೆ ಅಂತ್ಯವಾಗಿದೆ. ಇದೀಗ ಒಳನುಸುಳಲು ಇರುವ ಏಕೈಕ ಮಾರ್ಗ ಪಶ್ಚಿಮ ಬಂಗಾಳ ಮಾತ್ರ ಎಂದು ಶಾ ಹೇಳಿದ್ದಾರೆ.
.ಪ.ಬಂಗಾಳ ಚುನಾವಣೆ: DGP ಪಾಂಡೆ, ಕೋಲ್ಕತ್ತ ಪೊಲೀಸ್ ಆಯುಕ್ತರ ತೆರವುಗೊಳಿಸಿದ EC.
ಕೇಂದ್ರ ಸರ್ಕಾರ ಪದೇ ಪದೇ ಮನವಿ ಮಾಡಿಕೊಂಡರೂ, ಗಡಿ ಬೇಲಿ ಹಾಕಲು ಮಮತಾ ಬ್ಯಾನರ್ಜಿ ಸರ್ಕಾರ ಭೂಮಿ ನೀಡಿಲ್ಲ ಎಂದು ಆರೋಪಿಸಿದ ಶಾ, ಅವರ ನಡೆ ರಾಜಕೀಯ ಪ್ರೇರಿತವಾಗಿತ್ತು ಎಂದಿದ್ದಾರೆ.

ಒಳನುಸುಳುಕೋರರ ಮತ ಬ್ಯಾಂಕ್ ಸೃಷ್ಠಿ ಮಾಡಲು ಮಮತಾ ಭೂಮಿ ನೀಡಲಿಲ್ಲ ಎಂದು ಶಾ ದೂರಿದ್ದಾರೆ.

ಶಾ ಹೇಳಿದ್ದು...

l ಟಿಎಂಸಿ ಸರ್ಕಾರದ ಓಲೈಕೆ ರಾಜಕಾರಣ, ಭ್ರಷ್ಟಾಚಾರ ಮತ್ತು ರಾಜಕೀಯ ಹಿಂಸೆಯ ಕಾರಣದಿಂದ ಒಳನುಸುಳುಕೋರರಿಗೆ ಪಶ್ಚಿಮ ಬಂಗಾಳವು ದೇಶದ ಪ್ರಮುಖ ಕಾರಿಡಾರ್ ಆಗಿದೆ

l ಮಮತಾ ಅವರು ಯಾವಾಗಲೂ ತಾನು ಸಂತ್ರಸ್ತರು ಎಂದೇ ಗುರುತಿಸಿಕೊಳ್ಳುತ್ತಾರೆ. ಒಮ್ಮೆ ಗಾಯವಾಯಿತು ಎನ್ನುತ್ತಾರೆ. ಮತ್ತೊಮ್ಮೆ ಚುನಾವಣಾ ಆಯೋಗವನ್ನು ದೂರುತ್ತಾರೆ

l ಎಸ್ಐಆರ್ ಪ್ರಕ್ರಿಯೆಯು ದೇಶದ ಇತರೆ ರಾಜ್ಯಗಳಲ್ಲಿಯೂ ನಡೆದಿದೆ. ಆದರೆ, ಇಲ್ಲಿ ಮಾತ್ರವೇ ದೊಡ್ಡ ವಿವಾದ ಸೃಷ್ಟಿಸಲಾಗಿದೆ. ಯಾಕೆಂದರೆ, ಮಮತಾ ಅವರಿಗೆ ತಮ್ಮ ಮತ ಬ್ಯಾಂಕ್ ಅನ್ನು ಉಳಿಸಿಕೊಳ್ಳಬೇಕಾಗಿದೆ

* ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕ ಬಂದ ಮೇಲೆ ಒಳನುಸುಳುವಿಕೆಯು ಕೊನೆಗಾಣುತ್ತಿದೆ. ಆದ್ದರಿಂದ ಒಳನುಸುಳುಕೋರರಿಗೆ ಭಾರತದ ಪ್ರವೇಶಿಸುವ ಪಶ್ಚಿಮ ಬಂಗಾಳದ ಒಂದೇ ಕೊನೆಯ ಆಸರೆಯಾಗಿ ಉಳಿದುಕೊಂಡಿದೆ
.ಪಶ್ಚಿಮ ಬಂಗಾಳ: ಮತದಾರರ ಪಟ್ಟಿಯಲ್ಲಿಲ್ಲ ನಿವೃತ್ತ ನ್ಯಾಯಾಧೀಶ ಹೆಸರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.