ಅಮರಾವತಿ: ಮಹಿಳೆಯರು ಮತ್ತು ಯುವತಿಯರ ಅಶ್ಲೀಲ ಫೋಟೊ ಮತ್ತು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟ ಆರೋಪದ ಮೇಲೆ 8 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಓರ್ವ ಆರೋಪಿ ಮನೆಯಿಂದ ಲ್ಯಾಪ್ಟಾಪ್, ಟ್ಯಾಬ್ ಮತ್ತು ಹಾರ್ಡ್ ಡಿಸ್ಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪರತ್ವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಯುವತಿಯರ ಜೊತೆಗೆ ಇರುವ ವಿಡಿಯೊಗಳನ್ನು ಆರೋಪು ಏಪ್ರಿಲ್ 11ರಂದು ಕೆಲವು ವೆಬ್ಸೈಟ್ಗಳಲ್ಲಿ ಹರಿಬಿಟ್ಟಿದ್ದ. ಆ ಕೂಡಲೇ ಈ ಪ್ರಕರಣದ ತನಿಖೆ ಪ್ರಾರಂಭವಾಯಿತು ಎಂದು ಅಮರಾವತಿ ಪೊಲೀಸ್ ವರಿಷ್ಠಾಧಿಕಾರಿ ವಿಶಾಲ್ ಆನಂದ್ ತಿಳಿಸಿದ್ದಾರೆ.

ಬಂಧಿತ ಆರೋಪಿ ಅಯಾನ್ ಅಹ್ಮದ್ ತನ್ವೀರ್ ಮೂಲತಃ ಅಮರಾವತಿಯ ಪರತ್ವಾಡ ನಿವಾಸಿ. ಏಪ್ರಿಲ್ 11ರಂದು ಕೆಲವು ಮಹಿಳೆಯರು ಮತ್ತು ಯುವತಿಯರೊಂದಿಗೆ ಅಶ್ಲೀಲ ಚಿತ್ರಗಳು ಮತ್ತು ವಿಡಿಯೊಗಳನ್ನು ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾನೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಮರಾವತಿ ಮೂಲದ ರಾಜ್ಯಸಭಾ ಸದಸ್ಯ ಅನಿಲ್ ಬೋಂಡೆ ಎಸ್ಐಟಿ ತನಿಖೆಗೆ ಒತ್ತಾಯಿಸಿದ್ದರು.
.ಮಹಿಳೆ, ಯುವತಿಯರ ಅಶ್ಲೀಲ ವಿಡಿಯೊ ಹರಿಬಿಟ್ಟ 19 ವರ್ಷದ ಯುವಕನ ಬಂಧನ.ಮೊಬೈಲ್ನಲ್ಲಿ ಯುವತಿಯರ ಅಶ್ಲೀಲ ಫೋಟೊಗಳು, ದೂರು.
ಆ ಬೆನ್ನಲ್ಲೇ ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಸಂಬಂಧ ಅಮರಾವತಿ ಪೊಲೀಸ್ ವರಿಷ್ಠಾಧಿಕಾರಿ ವಿಶಾಲ್ ಆನಂದ್ ಅವರ ನೇತೃತ್ವದಲ್ಲಿ 11 ಪೊಲೀಸ್ ಅಧಿಕಾರಿಗಳು ಮತ್ತು 36 ಕಾನ್ಸ್ಟೆಬಲ್ಗಳನ್ನು ಒಳಗೊಂಡಿರುವ ವಿಶೇಷ ತಂಡ ತನಿಖೆ ನಡೆಸುತ್ತಿದೆ.

ಪರತ್ವಾಡ ನಿವಾಸಿ ಆರೋಪಿ ಅಯಾನ್ ಅಹ್ಮದ್ ತನ್ವೀರ್ ಅಹ್ಮದ್ (19) ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತಾ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಆರೋಪಿಯನ್ನು ಏಪ್ರಿಲ್ 13ರಂದು ಬಂಧಿಸಲಾಗಿದ್ದು, ಏ 21ರವರೆಗೆ ಪೊಲೀಸ್ ಠಾಣೆಯಲ್ಲಿಯೇ ಇರಿಸಲಾಗುವುದು. ಆತ ವಿಡಿಯೊಗಳು ಮತ್ತು ಫೋಟೊಗಳನ್ನು ತನ್ನ ಸ್ನೇಹಿತ ಉಜರ್ ಇಕ್ಬಾಲ್ ಖಾನ್ಗೆ (20) ಕಳುಹಿಸಿದ್ದಾನೆ. ಬಳಿಕ ಉಜರ್ ಅದನ್ನು ಹಲವರೊಂದಿಗೆ ಹಂಚಿಕೊಂಡಿದ್ದಾನೆ’ ಎಂಬುದು ತನಿಖೆ ವೇಳೆ ತಿಳಿದುಬಂದಿದೆ ಎಂದು ಅಧಿಕಾರಿ ವಿಶಾಲ್ ಆನಂದ್ ಹೇಳಿದರು.

8 ಆರೋಪಿಗಳ ಬಂಧನ

ಅಚಲಪುರ ನಿವಾಸಿ ಮೊಹಮ್ಮದ್ ಸಾದ್, ಅಯಾನ್ ಅಹ್ಮದ್ ತನ್ವೀರ್ ಅಹ್ಮದ್, ಉಜರ್ ಇಕ್ಬಾಲ್ ಖಾನ್ಗೆ (20), ತಬ್ರೇಜ್ ಖಾನ್ ತಸ್ಲೀಮ್ ಖಾನ್ (24), ಐಫಾಜ್ ಖಾನ್ ಮನೀರ್ ಖಾನ್ (26), ಮೊಹಮ್ಮದ್ ಇಮ್ರಾನ್ ಮೊಹಮ್ಮದ್ ಸಾಜಿದ್ (21) ಮತ್ತು ಶೇಖ್ ನವೀದ್ ಶೇಖ್ ಹಸನ್ (21), ಮಾನವ್ ದೀಪಕ್ ಸುಗುಣ (20) ಬಂಧಿತ ಆರೋಪಿಗಳಾಗಿದ್ದಾರೆ. ಈ ಎಂಟು ಆರೋಪಿಗಳು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ತುಣುಕುಗಳು ಮತ್ತು ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ಎಸ್ಪಿ ಹೇಳಿದರು.

ಅಲ್ಲದೆ ಎಂಟನೇ ಆರೋಪಿ ಮಾನವ್ ದೀಪಕ್ ಸುಗುಣ ಹುಡುಗಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಅಯಾನ್ ಅಹ್ಮದ್ ತನ್ವೀರ್ ಅಹ್ಮದ್ಗೆ ಬಾಡಿಗೆಗೆ ಪಡೆದಿದ್ದ ಮನೆಯನ್ನು ಗಂಟೆಯ ಆಧಾರದಲ್ಲಿ ನೀಡಿದ್ದ ಎಂಬುವುದು ತನಿಖೆ ಮೂಲಕ ತಿಳಿದು ಬಂದಿದೆ. ಸದ್ಯ ನಾಶಮಾಡಿದ ಸಾಕ್ಷಿಗಳನ್ನು ಮರುಸೃಷ್ಟಿಸಲು ಆರೋಪಿಗಳ ಐದು ಮೊಬೈಲ್ಗಳನ್ನು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡುವವರಿದ್ದರೆ ದಯವಿಟ್ಟು ಪೊಲೀಸರನ್ನು ಸಂಪರ್ಕಿಸಿ. ಗುರುತನ್ನು ರಹಸ್ಯವಾಗಿಡಲಾಗುವುದು ಎಂದೂ ಆನಂದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.