ಶ್ರೀವಿಜಯಪುರಂ: ಅಂಡಮಾನ್ ದ್ವೀಪಗಳ ಬಳಿ ಸಮುದ್ರ ಸೌತೆಗಳು ಹಾಗೂ ಇತರ ಅಪರೂಪದ ಕಡಲ ಜೀವಿಗಳನ್ನು ಕಳ್ಳಬೇಟೆಯಾಡುತ್ತಿದ್ದ ಮ್ಯಾನ್ಮಾರ್ನ 11 ಜನರನ್ನು ನಿಕೋಬಾರ್ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ಏಪ್ರಿಲ್ 4 ರಂದು ಅಕ್ರಮವಾಗಿ ಭಾರತದ ಕಡಲ ಪ್ರದೇಶ ಪ್ರವೇಶಿಸಿದ್ದ ಈ ಬೇಟೆಗಾರರ ಮಾಹಿತಿ ಪೊಲೀಸರಿಗೆ ದೊರಕಿತ್ತು. ಬಹಳ ದಿನಗಳಿಂದ ಪೊಲೀಸರು ಇವರನ್ನು ಹುಡುಕುತ್ತಿದ್ದರು.

ಇವರ ಪತ್ತೆಗೆ ‘ಆಪರೇಷನ್ ಸೀ ಸೆಂಟಿನಲ್’ ಆರಂಭಿಸಿದ ಅಂಡಮಾನ್ ಪೊಲೀಸರು, ನಾನ್ಕೌರಿ ರಿಮೋಟ್ ದ್ವೀಪಗಳ ಬಳಿ ತೀವ್ರ ಕಾರ್ಯಾಚರಣೆ ಆರಂಭಿಸಿದ್ದರು. ಇದಕ್ಕಾಗಿ ಸೇನಾ ಸಿಬ್ಬಂದಿಯ ಸಹಾಯವನ್ನು ಪೊಲೀಸರು ಪಡೆದಿದ್ದರು.

ಪೊಲೀಸರ ಎಚ್ಚರಿಕೆಯನ್ನು ಕಡೆಗಣಿಸಿದ ಕಳ್ಳಬೇಟೆಗಾರರು ಗುಂಡಿನ ಚಕಮಕಿ ನಡೆಸಿ ನಾನ್ಕೌರಿಯ ಕಾಕನಾ ದ್ವೀಪದ ದುರ್ಗಮ ಕಾಡನ್ನು ಪ್ರವೇಶಿಸಿದ್ದರು. ಇವರನ್ನು ಬೆನ್ನಟ್ಟಿದ ಪೊಲೀಸರು ಮೂರು ದಿನ ಹಗಲು ರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ರೋಚಕ ಕಾರ್ಯಾಚರಣೆ ಬಗ್ಗೆ ನಿಕೋಬಾರ್ ಎಸ್.ಪಿ ಹರಗೋವಿಂದರ್ ಸಿಂಗ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಭಾರತದ ಕಡಲ ಪ್ರದೇಶದಲ್ಲಿ ಈ ಕಳ್ಳಬೇಟೆಗಾರರು ಹೆಕ್ಕಿ ತೆಗೆದಿದ್ದ 800 ಕೆ.ಜಿ ಸಮುದ್ರ ಸೌತೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಮುದ್ರ ಸೌತೆಗಳು ಕಡಲ ಜೀವಿಗಳಾಗಿದ್ದು ಸೌತೆಕಾಯಿಗಳನ್ನು ಹೋಲುತ್ತವೆ. ಇವುಗಳಲ್ಲಿಯ ಔಷಧಿ ಗುಣ ಹಾಗೂ ಪ್ರೋಟಿನ್ಯುಕ್ತ ರುಚಿಯಿಂದ ಚೀನಾ, ಮ್ಯಾನ್ಮಾರ್ ಸೇರಿದಂತೆ ಮುಂತಾದ ಏಷ್ಯಾ ದೇಶಗಳಲ್ಲಿ ಬೇಡಿಕೆಯ ಖಾದ್ಯವಾಗಿದೆ.

ಹೀಗಾಗಿ ಇವುಗಳ ಕಳ್ಳಬೇಟೆಯೂ ವ್ಯಾಪಕವಾಗಿರುವುದರಿಂದ ಭಾರತವು, ಈ ಜೀವಿಗಳನ್ನು ಅಳಿವಿನಂಚಿನಲ್ಲಿರುವ ಕಡಲ ಜೀವಿಗಳು ಎಂದು ಘೋಷಿಸಿದೆ. ಸಮುದ್ರ ಸೌತೆಗಳು ಸಮುದ್ರವನ್ನು ಸ್ವಚ್ಛವಾಗಿಡಲು ಪ್ರಮುಖಪಾತ್ರವಹಿಸುತ್ತವೆ.
.'ಸಿಂಧೂರ'ಕ್ಕೆ ಬೆಚ್ಚಿದ ಬಳಿಕವೂ ಭಾರತದತ್ತ ಡ್ರೋನ್ ಹಾರಿಸುತ್ತಿರುವುದೇಕೆ ಪಾಕ್?.ಸಂಗತ: ಶಿಸ್ತಿನ ಇಲಾಖೆಗೆ ಹೃದಯವಂತಿಕೆಯೂ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.