ಶ್ರೀ ವಿಜಯ ಪುರಂ: ಅಂಡಮಾನ್ ಮತ್ತು ನಿಕೋಬಾರ್ ಪೊಲೀಸರು, 2024ರ ನವೆಂಬರ್ 23ರಂದು ಹಡಗೊಂದರಿಂದ ವಶಪಡಿಸಿಕೊಂಡಿದ್ದ ₹36,000 ಕೋಟಿ ಮೌಲ್ಯದ 6,000 ಕೆ.ಜಿಯಷ್ಟು ಮೆಥಂಫೆಟಮೈನ್ ಮಾದಕವಸ್ತುವನ್ನು, ಒಟ್ಟು 9 ತಿಂಗಳ ಅವಧಿಯಲ್ಲಿ ಹಂತಹಂತವಾಗಿ ನಾಶಪಡಿಸಿದ್ದಾರೆ.

2025ರ ಜೂನ್ 26ರಂದು ಮೆಥಂಫೆಟಮೈನ್ ಅನ್ನು ನಾಶಗೊಳಿಸುವ ಕಾರ್ಯಾಚರಣೆ ಆರಂಭಿಸಲಾಯಿತು. ಅದು 2026ರ ಮಾರ್ಚ್ 12ರಂದು ಮುಕ್ತಾಯಗೊಂಡಿದೆ. ಇದು ದೇಶದಲ್ಲಿ ಈವರೆಗೆ ನಡೆದ ಅತಿದೊಡ್ಡ ಮಾದಕವಸ್ತು ನಾಶ ಕಾರ್ಯಾಚರಣೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.

ಭಾರತೀಯ ಕರಾವಳಿ ಕಾವಲು ಪಡೆಯು ನಡೆಸಿದ ಕಾರ್ಯಾಚರಣೆಯಲ್ಲಿ, ಮ್ಯಾನ್ಮಾರ್ ಪ್ರಜೆಗಳಿದ್ದ ಹಡಗಿನಿಂದ 6,000 ಕೆ.ಜಿಯಷ್ಟು ಮೆಥಂಫೆಟಮೈನ್ ತುಂಬಿದ್ದ 1,500 ಪೊಟ್ಟಣಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಬಳಿಕ ಈ ಪ್ರಕರಣದ ಕುರಿತು ತನಿಖೆ ನಡೆಸಿ, ಕಾನೂನಿನ ನಿಯಮಗಳ ಅನುಸಾರ ಮೆಥಂಫೆಟಮೈನ್ ಅನ್ನು ನಾಶಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.