ಆನೇಕಲ್: ದೇಶದಾದ್ಯಂತ ಗೋಹತ್ಯೆ ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ಗೋಮಾತೆಗೆ ರಾಷ್ಟ್ರೀಯ ಗೌರವ ಸಿಗುವ ಸಲುವಾಗಿ ಸೋಮವಾರ ಗೋಸಮ್ಮಾನ ದಿನ ಆಯೋಜಿಸಲಾಗಿತ್ತು.

ಮುಖಂಡ ಹರಿಸಿಂಗ್ ಮಾತನಾಡಿ, ಸಂವಿಧಾನದ ರಾಜ್ಯ ನಿರ್ದೇಶಕ ತತ್ವದಡಿ ಗೋವುಗಳನ್ನು ಕಳ್ಳಸಾಗಣೆ ಮಾಡುವುದು ಮತ್ತು ಹತ್ಯೆ ಮಾಡುವುದು ಜಾಮೀನು ರಹಿತ ಅಪರಾಧ. ರಾಷ್ಟ್ರದ ಎಲ್ಲೆಡೆ ಗೋವು ನಿಷೇಧ ಕಾಯ್ದೆ ಮತ್ತು ಸುರಕ್ಷತೆ ಖಚಿತಪಡಿಸಬೇಕು. ಗೋವವನ್ನು ರಾಷ್ಟ್ರದ ಆರಾಧ್ಯ ಅಥವಾ ರಾಷ್ಟ್ರ ಮಾತೆ ಎಂದು ಘೋಷಿಸಬೇಕು ಎಂದರು.

ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ನಂದಿಶಾಲೆ ಮತ್ತು ಜಿಲ್ಲಾ ಮಟ್ಟದಲ್ಲಿ ಆದರ್ಶ ಗೋ ಅಭಯಾರಣ್ಯ ಅಥವಾ ಬೃಹತ್ ಗೋಶಾಲೆಯನ್ನು ಪ್ರಾರಂಭಿಸಬೇಕು. ರಾಷ್ಟ್ರ ಮತ್ತು ರಾಜ್ಯ ಹೆದ್ದಾರಿಯಲ್ಲಿ ಪ್ರತಿ 100ಕಿ.ಮೀಗೆ ಗೋವು ವಾಹಿನಿ ಆಂಬುಲೆನ್ಸ್ ಸೌಲಭ್ಯ ನೀಡಬೇಕು. ದೇಶದಲ್ಲಿ ಮೇವು ಭದ್ರತಾ ಕಾಯ್ದೆಯನ್ನು ಜಾರಿಗೆ ತಂದು ಮೇವಿನ ಅಕ್ರಮ ಸಂಗ್ರಹ, ಅನಿಯಂತ್ರಿತ ಬೆಲೆ ಏರಿಕೆ ತಪ್ಪಿಸಬೇಕು ಮತ್ತು ಗೋಮಾಳಗಳನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಜ್ಞಾನಮೂರ್ತಿ, ನಂದಿ ಬಾಬಾ, ಸಂಜಯ್, ಆನಂದ್, ಸರಸ್ವತಿ, ಬ್ರಹ್ಮಚಾರಿ, ಮೋಹನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-15-1752694789

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.