ಮುಂಬೈ: ಅನಿಲ್ ಅಂಬಾನಿ ಅವರ ಮಾಲೀಕತ್ವದ ರಿಲಯನ್ಸ್ನ ಮೂರು ಕಂಪನಿಗಳಾದ ರಿಲಯನ್ಸ್ ಟೆಲಿಕಾಂ ಲಿಮಿಟೆಡ್, ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ಮತ್ತು ಇವುಗಳ ನಿರ್ದೇಶಕರ ವಿರುದ್ಧ ದಾಖಲಾಗಿರುವ ಮೂರು ಪ್ರಕರಣಗಳಿಗೆ ಸಂಬಂಧಿಸಿ ಮುಂಬೈನ 17 ಕಡೆಗಳಲ್ಲಿ ಸಿಬಿಐ ಶನಿವಾರ ದಾಳಿ ನಡೆಸಿದೆ.

ರಿಯಲನ್ಸ್ ಗ್ರೂಪ್ನ ಕಂಪನಿಗಳ ವಿರುದ್ಧ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಹಾಗೂ ಎಲ್ಐಸಿ, ಕೋಟಿ ಕೋಟಿ ಮೊತ್ತದ ವಂಚನೆ ದೂರು ದಾಖಲಿಸಿದ್ದವು. ಈ ದೂರುಗಳ ಕುರಿತು ಕಳೆದ ಕೆಲವು ತಿಂಗಳಲ್ಲಿ ಸಿಬಿಐ ಹಲವು ಪ್ರಕರಣಗಳು ದಾಖಲಿಸಿಕೊಂಡಿದೆ.

ಮೂರು ಕಂಪನಿಗಳ ನಿರ್ದೇಶಕರ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಹಣದ ಅಕ್ರಮದ ವಹಿವಾಟು ನಡೆಸಲು ನಕಲಿ ಕಂಪನಿಗಳನ್ನು ಸೃಷ್ಟಿಸಲಾಗಿತ್ತು. ‘ಎಲ್ಲ ಪ್ರಕರಣಗಳು ಸೇರಿ ಒಟ್ಟು ₹27,337 ಕೋಟಿ ನಷ್ಟವಾಗಿದೆ’ ಎಂದು ಸಿಬಿಐ ಹೇಳಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-51-1514965143

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.