ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಐಎಂಎ ಅಧ್ಯಕ್ಷರನ್ನು ಮತ್ತೆ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌

Published : 27 ಆಗಸ್ಟ್ 2024, 15:52 IST
Last Updated : 27 ಆಗಸ್ಟ್ 2024, 15:52 IST
ಫಾಲೋ ಮಾಡಿ
Comments

ನವದೆಹಲಿ: ಪಿಟಿಐ ಸುದ್ದಿಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ತನ್ನ ಘನತೆಗೆ ಕುಂದು ತರುವಂತಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಬೇಷರತ್ ಕ್ಷಮೆಯಾಚಿಸಿ ಜಾಹೀರಾತು ನೀಡುವಂತೆ ಭಾರತೀಯ ವೈದ್ಯ ಸಂಸ್ಥೆಯ (ಐಎಂಎ) ಅಧ್ಯಕ್ಷ ಡಾ.ಆರ್‌.ವಿ. ಅಶೋಕನ್ ಅವರಿಗೆ ಸೂಚಿಸಿತ್ತು. ಆದರೆ, ನೀಡಿರುವ ಪತ್ರಿಕಾ ಜಾಹೀರಾತಿನ ಪ್ರತಿಯಲ್ಲಿ ಮಾಹಿತಿಯು ಅಸ್ಪಷ್ಟವಾಗಿದ್ದು, ಸಣ್ಣ ಅಕ್ಷರಗಳಲ್ಲಿ ಇದೆ ಎಂದು ಮಂಗಳವಾರ ಸುಪ್ರೀಂ ಕೋರ್ಟ್‌ ಮಂಗಳವಾರ ತರಾಟೆಗೆ ತೆಗೆದುಕೊಂಡಿತು. 

ಹಿಮಾ ಕೊಹ್ಲಿ ಹಾಗೂ ಸಂದೀಪ್ ಮೆಹ್ತಾ ಅವರನ್ನು ಒಳಗೊಂಡ ಪೀಠವು, ಜಾಹೀರಾತು ಪ್ರಕಟವಾಗಿರುವ ‘ದಿ ಹಿಂದೂ’ ಪತ್ರಿಕೆಯ 20 ಪ್ರತಿಗಳನ್ನು ವಾರದೊಳಗೆ ಒದಗಿಸುವಂತೆ ಅಶೋಕನ್ ಪರವಾಗಿ ಹಾಜರಿದ್ದ ವಕೀಲ ಪಿ.ಎಸ್. ಪಟ್ವಾಲಿಯಾ ಅವರಿಗೆ ಸೂಚಿಸಿತು. 

ಪತಂಜಲಿ ಆಯುರ್ವೇದ ಕಂಪನಿಗೆ ಸಂಬಂಧಿಸಿದ ಪ್ರಕರಣದ ಕುರಿತು ಸಂದರ್ಶನವೊಂದರಲ್ಲಿ ಅಶೋಕನ್ ತನ್ನ ಘನತೆಗೆ ಕುಂದು ತರುವ ರೀತಿಯ ಹೇಳಿಕೆ ನೀಡಿದ್ದರು ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ತರಾಟೆಗೆ ತೆಗೆದುಕೊಂಡಿತ್ತು. ತಾವು ನೀಡಿದ್ದ ಹೇಳಿಕೆ ಕುರಿತು ಬೇಷರತ್ ಕ್ಷಮೆಯಾಚಿಸಿರುವ ಜಾಹೀರಾತು ಅದಾಗಲೇ ಪತ್ರಿಕೆಗಳಲ್ಲಿ ಪ್ರಕಟವಾಗಿದೆ ಎಂದು ಅಶೋಕನ್ ಜೂನ್ 9ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಮೇ 14ರಂದು ವಿಚಾರಣೆ ನಡೆಸಿದಾಗ, ಸಂದರ್ಶನ ನೀಡಿದ್ದಕ್ಕೆ ಸುಪ್ರೀಂ ಕೋರ್ಟ್‌ ಅಶೋಕನ್ ಅವರಿಗೆ ಕಠಿಣ ಪ್ರಶ್ನೆಗಳನ್ನು ಕೇಳಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT