ನವದೆಹಲಿ: ‘ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡಿ, ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುವುದನ್ನು ಮುಂದುವರಿಸಿದರೆ, ಅದು ಭೂಗೋಳದ ಭಾಗವಾಗಿರಬೇಕೆ ಅಥವಾ ಇತಿಹಾಸದಲ್ಲಿ ಉಳಿಯಬೇಕೆ? ಬೇಡವೇ ಎಂಬುದನ್ನು ನಿರ್ಧರಿಸಲಿದ್ದೇವೆ’ ಎಂದು ಭಾರತೀಯ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೊದಲನೇ ವರ್ಷಾಚರಣೆ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಮಾಣಿಕ್ಶಾ ಕೇಂದ್ರದಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಸಂದೇಶ ನೀಡಿದ್ದಾರೆ.

ಕಳೆದ ವರ್ಷ ನಡೆದ ‘ಆಪರೇಷನ್ ಸಿಂಧೂರ’ದಂತಹ ಸಂದರ್ಭಗಳು ಮತ್ತೆ ಎದುರಾದರೆ ಸೇನೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆಯ ಸಂದೇಶ ನೀಡಿದರು. ಅಂತಹ ಸಂದರ್ಭ ಮರುಕಳಿಸಿದರೆ ಪಾಕಿಸ್ತಾನವನ್ನು ನಿರ್ನಾಮ ಮಾಡಲಾಗುವುದು ಎಂಬರ್ಥದಲ್ಲಿ ಮಾತನಾಡಿದರು.

ದ್ವಿವೇದಿ ಹೇಳಿಕೆಯು ಚಿಕ್ಕದಾಗಿದ್ದರೂ, ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ರವಾನಿಸಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಅಹಿಸ್ತಾ ಜಿಂದಗಿ ಕೆಫೆ ತೆರೆಯುವ ಬಯಕೆ

ನವದೆಹಲಿ: ಯುವಕರ ಜೊತೆ ಮುಕ್ತ ಸಂವಾದದಲ್ಲಿ ತೊಡಗಿಸಿಕೊಂಡ ಉಪೇಂದ್ರ ದ್ವಿವೇದಿ ಅವರು ನಾಯಕತ್ವದ ಪಾಠಗಳನ್ನು ಮಾಡುವ ಜೊತೆಗೆ ಒತ್ತಡದ ಜೀವನದಿಂದ ಹೊರಬರುವ ನಿಟ್ಟಿನಲ್ಲಿ ಇಂದ್ರಿಯಗಳಿಗೆ ವಿಶ್ರಾಂತಿ ನೀಡುವ ತಾಣವಾಗಿ ‘ಅಹಿಸ್ತಾ ಜಿಂದಗಿ’ ಹೆಸರಿನಲ್ಲಿ ಕೆಫೆ ತೆರೆಯುವ ಬಯಕೆ ವ್ಯಕ್ತಪಡಿಸಿದ್ದಾರೆ.

ತವರು ರಾಜ್ಯವಾದ ಮಧ್ಯಪ್ರದೇಶದಲ್ಲಿಯೇ ಕೆಫೆ ತೆರೆಯುವ ಯೋಚನೆ ಹೊಂದಿದ್ದು ಈ ತಾಣವನ್ನು ಅಸಂಖ್ಯಾತ ವಿಚಾರ ವಿನಿಮಯಗಳ ಜೊತೆಗೆ ವಿಚಾರ ಸಭೆಗಳ ಕೇಂದ್ರಬಿಂದುವಾಗಿ ಸ್ಥಾಪಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಯುವಕರು ಸದೃಢವಾಗಿರುವ ಜೊತೆಗೆ ಕಠಿಣವಾಗಿ ಕೆಲಸ ಮಾಡಲು ಹಿಂಜರಿಯಬಾರದು. ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವ ಜೊತೆಗೆ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ನೋಡುವುದನ್ನು ಬಿಟ್ಟು ಬದಲಾಗುತ್ತಿರುವ ಜಗತ್ತಿನಲ್ಲಿ ಕಾಲಮಾನಕ್ಕೆ ತಕ್ಕಂತೆ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.