ನವದೆಹಲಿ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮರು ಯಾವುದೇ ಕಾರಣಕ್ಕೂ ನಿಷೇಧಿತ ಪ್ರಾಣಿಗಳ ಬಲಿ ನೀಡಬಾರದು ಹಾಗೂ ಪ್ರಾಣಿ ಬಲಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ಜಮೀಯತ್ ಉಲಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ಮನವಿ ಮಾಡಿದ್ದಾರೆ.

ಮುಸ್ಲಿಮರಿಗೆ ಸಂದೇಶ ನೀಡಿರುವ ಮದನಿ, ಧಾರ್ಮಿಕ ನಿಯಮಗಳ ಪ್ರಕಾರ ಯಾರಿಗೆ ಪ್ರಾಣಿ ಬಲಿ ನೀಡುವುದು ಕಡ್ಡಾಯವಾಗಿದೆಯೋ ಅವರು ಈ ಕರ್ತವ್ಯವನ್ನು ನೆರವೇರಿಸಬೇಕು. ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಸ್ಲಿಮರು ಸ್ವಯಂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದಿದ್ದಾರೆ.

‘ಯಾರೂ ಕೂಡ ಪ್ರಾಣಿ ಬಲಿ ನೀಡುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಬಾರದು. ಮುಖ್ಯವಾಗಿ ಪ್ರಾಣಿ ಬಲಿಯ ಚಿತ್ರ ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವುದರಿಂದ ದೂರವಿರಬೇಕು. ಯಾವುದಾದರೂ ಪ್ರಾಣಿಗಳನ್ನು ಬಲಿ ಕೊಡಲು ಬಯಸಿದರೆ ಸ್ಥಳೀಯ ಪ್ರಭಾವಿ ಮತ್ತು ಮುಖಂಡರಿಂದ ಒಪ್ಪಿಗೆ ಪಡೆದ ಮೇಲೆ ಪ್ರಕ್ರಿಯೆ ನಡೆಸಬೇಕು. ಒಂದು ವೇಳೆ ಅಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಇದ್ದರೆ, ಬೇರೆ ಪ್ರದೇಶದಲ್ಲಿ ಬಲಿ ನೀಡಬೇಕು’ ಎಂದು ಜಮೀಯತ್ ಮುಖ್ಯಸ್ಥರು ಹೇಳಿದ್ದಾರೆ.

ಹಬ್ಬದ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡುವಂತೆ ಒತ್ತಿ ಹೇಳಿರುವ ಅವರು, ಕೇವಲ ಮಸೀದಿಗಳಿಂದ ಘೋಷಣೆ ಮಾಡುವುದಷ್ಟೇ ಅಲ್ಲದೆ, ಜಮೀಯತ್ ಸ್ವಯಂಸೇವಕರು ಮತ್ತು ಇಮಾಮರು ತಂಡಗಳನ್ನು ರಚಿಸಿಕೊಂಡು ಬಲಿ ನೀಡಿದ ನಂತರ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ನಮ್ಮ ಯಾವುದೇ ನಡವಳಿಕೆಯಿಂದ ಇತರರಿಗೆ ತೊಂದರೆ ಅಥವಾ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ

ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಸೋಮವಾರ ಮುಸ್ಲಿಮರಲ್ಲಿ ಬಕ್ರೀದ್ ವೇಳೆ ಗೋಹತ್ಯೆ ಮಾಡದಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಅರ್ಷದ್ ಮದನಿ ಅವರು ನೀಡಿರುವ ಸಲಹೆಯನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು ಎಂದು ಅನ್ಸಾರಿ ಒತ್ತಾಯಿಸಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ್ದ ಮದನಿ, ‘ದೇಶದ ಬಹುಸಂಖ್ಯಾತರು ಹಸುವನ್ನು ಪವಿತ್ರವೆಂದು ಭಾವಿಸಿ ತಾಯಿಯ ಸ್ಥಾನ ನೀಡಿರುವುದರಿಂದ ಅದನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಸರ್ಕಾರಕ್ಕೆ ಇರುವ ರಾಜಕೀಯ ಅಡಚಣೆಯಾದರೂ ಏನು? ಎಂದು ಪ್ರಶ್ನಿಸಿದ್ದರು. ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿದರೆ ಮುಸ್ಲಿಮರಿಗೆ ಯಾವುದೇ ಅಭ್ಯಂತರವಿಲ್ಲ, ಬದಲಿಗೆ ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಕಾನೂನುಬಾಹಿರ ಹತ್ಯೆಗಳು ಕೊನೆಗೊಳ್ಳುತ್ತವೆ ಎಂಬ ನೆಮ್ಮದಿ ಸಿಗಲಿದೆ ಎಂದು ಅವರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.