ಮುಂಬೈ: ಭಾರತದ ಜನಪ್ರಿಯ ಗಾಯಕಿ ಆಶಾ ಭೋಸ್ಲೆ (92) ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಭಾನುವಾರ (ಏ.12) ನಿಧನರಾಗಿದ್ದಾರೆ. 92 ವರ್ಷದ ಆಶಾ ಭೋಸ್ಲೆ ಅವರು ಇತ್ತೀಚೆಗೆ ಹೃದಯ ಸ್ತಂಭನದಿಂದಾಗಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಇಂದು ಮಧ್ಯಾಹ್ನದ ವೇಳೆಗೆ ನಿಧನ ಹೊಂದಿದ್ದಾರೆ.

ಗಾಯಕಿ ಆಶಾ ಭೋಸ್ಲೆ ಅವರು ಹಾಡಿರುವ ಈಗಲೂ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಹಚ್ಚ ಹಸಿರಾಗಿ ಉಳಿದಿರುವ ಪ್ರಮುಖ 10 ಹಾಡುಗಳ ಪಟ್ಟಿ ಇಲ್ಲಿವೆ.
.ಆಶಾ ಭೋಂಸ್ಲೆ ಒಡೆತನದ ರೆಸ್ಟೋರೆಂಟ್ನಲ್ಲಿ ಭೋಜನ ಸವಿದ ಟಾಮ್ ಕ್ರೂಸ್.Asha Bhosle: ಭಾರತದ ಜನಪ್ರಿಯ ಗಾಯಕಿ ಆಶಾ ಭೋಸ್ಲೆ ನಿಧನ .
ಪಿಯಾ ತು ಅಬ್ ತೋ ಆಜಾ

‘ಪಿಯಾ ತು ಅಬ್ ತೋ ಆಜಾ’ ಜಿತೇಂದ್ರ ಮತ್ತು ಆಶಾ ಪರೇಖ್ ನಟನೆಯ 1971ರಲ್ಲಿ ತೆರೆಕಂಡ ಹಿಂದಿಯ ಸೂಪರ್ಹಿಟ್ ಐಕಾನಿಕ್ ಹಾಡಾಗಿದೆ. ಇದು ಬಾಲಿವುಡ್ನ ಎವರ್ಗ್ರೀನ್ ಹಾಡುಗಳಲ್ಲಿ ಒಂದಾಗಿದೆ. ಆಶಾ ಭೋಸ್ಲೆ ಹಾಡಿರುವ ಮತ್ತು ಆರ್ಡಿ ಬರ್ಮನ್ ಸಂಗೀತ ನೀಡಿರುವ ಈ ಕ್ಯಾಬರೆ ಗೀತೆಯಲ್ಲಿ ಹೆಲೆನ್ ನರ್ತಿಸಿದ್ದಾರೆ. ಈ ಹಾಡಿನ ಸಾಹಿತ್ಯವನ್ನು ಮಜ್ರೂಹ್ ಸುಲ್ತಾನ್ಪುರಿ ಬರೆದಿದ್ದಾರೆ.

ದಮ್ ಮಾರೋ ದಮ್

‘ಹರೇ ರಾಮ ಹರೇ ಕೃಷ್ಣ’ ಚಿತ್ರದ ಜೀನತ್ ಅಮನ್ ಮತ್ತು ದೇವಾನಂದ್ ನಟನೆಯ ಈ ಜನಪ್ರಿಯ ಹಾಡು ಅತ್ಯಂತ ಪ್ರಸಿದ್ಧ ಹಾಡುಗಳಲ್ಲಿ ಒಂದಾಗಿದೆ. ಈ ಹಾಡುಗಳು ಹಲವಾರು ಭಾಷೆಗಳಲ್ಲಿ ರಿಮೇಕ್ಗಳಾಗಿವೆ. ಆದರೆ ಮೊದಲ ಹಾಡು ಅಭಿಮಾನಿಗಳ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ. ಇದನ್ನು ಆಶಾ ಭೋಸ್ಲೆ ಹಾಡಿದ್ದು, ಆನಂದ್ ಬಕ್ಷಿ ಬರೆದಿದ್ದಾರೆ ಮತ್ತು ರಾಹುಲ್ ದೇವ್ ಬರ್ಮನ್ ಸಂಗೀತ ಸಂಯೋಜಿಸಿದ್ದಾರೆ.

ಚುರಾ ಲಿಯಾ ಹೈ ತುಮ್ನೆ ಜೋ ದಿಲ್ ಕೋ

1973ರಲ್ಲಿ ತೆರೆಕಂಡ 'ಯಾದೋಂಕಿ ಬಾರಾತ್' ಚಿತ್ರದ ಈ ‘ಚುರಾ ಲಿಯಾ ಹೈ ತುಮ್ನೆ ಜೋ ದಿಲ್ ಕೋ’ ಜನಪ್ರಿಯ ಹಾಡನ್ನು ಆಶಾ ಭೋಸ್ಲೆ ಮತ್ತು ಮೊಹಮ್ಮದ್ ರಫಿ ಹಾಡಿದ್ದಾರೆ. ಈ ಹಾಡು ಅಭಿಮಾನಿಗಳ ನೆಚ್ಚಿನ ಹಾಡಾಗಿದೆ. ಆಶಾ ಮತ್ತು ರಫಿ ಅವರ ಮಾಂತ್ರಿಕ ಧ್ವನಿಗಳು ಮತ್ತು ಆರ್.ಡಿ. ಬರ್ಮನ್ ಸಂಗೀತ ಸಂಯೋಜನೆಯು ಈ ಹಾಡನ್ನು ಸ್ಮರಣೀಯ ಹಾಡನ್ನಾಗಿ ಮಾಡಿವೆ. ಜೀನತ್ ಅಮಾನ್ ಮತ್ತು ವಿಜಯ್ ಅರೋರಾ ಅವರ ಈ ಪ್ರಣಯ ಗೀತೆ ಪ್ರೇಕ್ಷಕರ ಹೃದಯದಲ್ಲಿ ಅಚ್ಚೊತ್ತಿದೆ.

ದಿಲ್ ಚೀಜ್ ಕ್ಯಾ ಹೈ

‘ದಿಲ್ ಚೀಜ್ ಕ್ಯಾ ಹೈ’ ಹಾಡು 1981ರಲ್ಲಿ ಬಿಡುಗಡೆಯಾದ ‘ಉಮ್ರಾವ್ ಜಾನ್’ ಸಿನಿಮಾದಲ್ಲಿದೆ. ಈ ಚಿತ್ರದಲ್ಲಿ ರೇಖಾ ನಟಿಸಿದ್ದು, ಆಶಾ ಅವರು ಈ ಹಾಡನ್ನು ಹಾಡಿದ್ದಾರೆ.

ಆಯಿ ಮೆಹರ್ಬಾನ್

‘ಆಯಿ ಮೆಹರ್ಬಾನ್’ 1958ರ 'ಹೌರಾ ಬ್ರಿಡ್ಜ್' ಸಿನಿಮಾದ ಜನಪ್ರಿಯ ಹಿಂದಿ ಹಾಡಾಗಿದೆ. ಮಧುಬಾಲಾ ಮತ್ತು ಅಶೋಕ್ ಕುಮಾರ್ ನಟಿಸಿರುವ ಈ ಗೀತೆಯನ್ನು ಆಶಾ ಭೋಸ್ಲೆ ಹಾಡಿದ್ದು, ಓ.ಪಿ. ನಯ್ಯರ್ ಸಂಗೀತ ನೀಡಿದ್ದಾರೆ. ಈ ಕ್ಲಾಸಿಕ್ ಗೀತೆ ಯೂಟ್ಯೂಬ್ನಲ್ಲಿ ಲಭ್ಯವಿದೆ.

ದೋ ಲಫ್ಝೋನ್ ಕಿ ಹೈ ದಿಲ್ ಕಿ ಕಹಾನಿ

‘ದೋ ಲಫ್ಝೋನ್ ಕಿ ಹೈ ದಿಲ್ ಕಿ ಕಹಾನಿ’ 1979ರ ‘ದ ಗ್ರೇಟ್ ಗ್ಯಾಂಬ್ಲರ್’ ಸಿನಿಮಾದ ಜನಪ್ರಿಯ ಹಿಂದಿ ಹಾಡಾಗಿದೆ. ಇದನ್ನು ಆಶಾ ಭೋಸ್ಲೆ ಮತ್ತು ಶರದ್ ಕುಮಾರ್ ಹಾಡಿದ್ದಾರೆ. ಆರ್.ಡಿ ಬರ್ಮ ಸಂಗೀತ ಮತ್ತು ಆನಂದ್ ಬಕ್ಷಿ ಸಾಹಿತ್ಯ ನೀಡಿದ್ದಾರೆ. ಅಮಿತಾಬ್ ಬಚ್ಚನ್ ಮತ್ತು ಜೀನತ್ ಅಮನ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಆಂಖೋನ್ ಕಿ ಮಸ್ತಿ

1981ರಲ್ಲಿ ಬಿಡುಗಡೆಯಾಗಿದ್ದ ‘ಉಮ್ರಾವ್ ಜಾನ್’ ಸಿನಿಮಾದಲ್ಲಿ ಬರುವ 'ಆಂಖೋನ್ ಕಿ ಮಸ್ತಿ' ಬಾಲಿವುಡ್ನ ಅತ್ಯಂತ ಪ್ರಸಿದ್ಧ ಹಳೆಯ ಗೀತೆಗಳಲ್ಲಿ ಒಂದಾಗಿದೆ. ಈ ಸಿನಿಮಾದಲ್ಲಿ ರೇಖಾ ಅವರು ನಟಿಸಿದ್ದಾರೆ. ಆಶಾ ಭೋಸ್ಲೆ ಅವರು ಈ ಹಾಡನ್ನು ಹಾಡಿದ್ದಾರೆ.

ಓ ಮೇರೆ ಸೋನಾ ರೇ

‘ಓ ಮೇರೆ ಸೋನಾ ರೇ’ 1966ರ 'ತೀಸ್ರಿ ಮಂಜಿಲ್'ನ ಸಿನಿಮಾದ ಜನಪ್ರಿಯ ರೋಮ್ಯಾಂಟಿಕ್ ಗೀತೆಯಾಗಿದೆ. ಆಶಾ ಭೋಸ್ಲೆ ಮತ್ತು ಮೊಹಮ್ಮದ್ ರಫಿ ಹಾಡಿರುವ ಈ ಗೀತೆಗೆ ಆರ್.ಡಿ. ಬರ್ಮನ್ ಸಂಗೀತ ಸಂಯೋಜಿಸಿದ್ದು, ಮಜ್ರೂಹ್ ಸುಲ್ತಾನ್ಪುರಿ ಸಾಹಿತ್ಯ ಬರೆದಿದ್ದಾರೆ. ಶಮ್ಮಿ ಕಪೂರ್ ಮತ್ತು ಆಶಾ ಪಾರೇಖ್ ನಟಿಸಿದ್ದಾರೆ.

ಜವಾನಿ ಜಾನ್-ಇ-ಮ್ಯಾನ್

‘ಜವಾನಿ ಜಾನ್-ಇ-ಮ್ಯಾನ್’ 1982ರ ‘ನಮಕ್ ಹಲಾಲ್’ ಸಿನಿಮಾದ ಜನಪ್ರಿಯ ಬಾಲಿವುಡ್ ಗೀತೆಯಾಗಿದ್ದು, ಇದನ್ನು ಆಶಾ ಬೋಸ್ಲೆ ಹಾಡಿದ್ದಾರೆ. ಬಪ್ಪಿ ಲಾಹಿರಿ ಸಂಗೀತ ಸಂಯೋಜನೆ ಮತ್ತು ಅಂಜಾನ್ ಸಾಹಿತ್ಯವಿರುವ ಈ ಹಾಡು, ಅಮಿತಾಬ್ ಬಚ್ಚನ್ ಮತ್ತು ಪರ್ವೀನ್ ಬಾಬಿ ಅವರ ಮೇಲಿನ ನೃತ್ಯ ದೃಶ್ಯಕ್ಕೆ ಹೆಸರುವಾಸಿಯಾಗಿದೆ.

ಯೇ ಮೇರಾ ದಿಲ್ ಯಾರ್ ಕಾ ದೀವಾನಾ

‘ಯೇ ಮೇರಾ ದಿಲ್ ಯಾರ್ ಕಾ ದೀವಾನಾ’ 1978ರ ‘ಡಾನ್’ ಸಿನಿಮಾದ ಜನಪ್ರಿಯ ಹಿಂದಿ ಹಾಡಾಗಿದೆ. ಕಲ್ಯಾಣ್ಜಿ-ಆನಂದ್ಜಿ ಸಂಗೀತ ಸಂಯೋಜನೆಯ ಈ ಹಾಡನ್ನು ಆಶಾ ಭೋಸ್ಲೆ ಹಾಡಿದ್ದಾರೆ. ಸಾಹಿತ್ಯವನ್ನು ಇಂದೀವರ್ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.