ಗುವಾಹಟಿ: ಅಸ್ಸಾಂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ 67 ಅಭ್ಯರ್ಥಿಗಳು ನಾಮಪತ್ರವನ್ನು ಹಿಂಪಡೆಯುವ ಮೂಲಕ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಈ ಮೂಲಕ ಚುನಾವಣಾ ಅಖಾಡದಲ್ಲಿ 722 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.

ಮಾರ್ಚ್ 26 ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿತ್ತು.

ನಾಮಪತ್ರಗಳನ್ನು ಹಿಂತೆಗೆದುಕೊಂಡ ಅಭ್ಯರ್ಥಿಗಳ ಪೈಕಿ ಇತ್ತೀಚೆಗೆ ಎಐಯುಡಿಎಫ್ಗೆ ರಾಜೀನಾಮೆ ನೀಡಿದ್ದ ನ್ಯಾಷನಲ್ ಪೀಪಲ್ಸ್ ಪಾರ್ಟಿಯ (ಎನ್ಪಿಪಿ) ಎಂ.ಡಿ ಅಮೀನುಲ್ ಇಸ್ಲಾಂ (ಮಂಕಾಚಾರ್ ಸ್ಥಾನ), ಸ್ವಾಯತ್ತ ರಾಜ್ಯ ಬೇಡಿಕೆ ಸಮಿತಿಯ (ಎಎಸ್ಡಿಸಿ) ನಾಲ್ವರು ಮತ್ತು ಗೊಂಡ್ವಾನ ಗಣತಂತ್ರ ಪಕ್ಷದ ಒಬ್ಬ ನಾಯಕ ಸೇರಿದ್ದಾರೆ. ಉಳಿದವರೆಲ್ಲರೂ ಸ್ವತಂತ್ರ ಅಭ್ಯರ್ಥಿಗಳು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
.ಪಶ್ಚಿಮ ಏಷ್ಯಾ ಬಿಕ್ಕಟ್ಟು: ಮುಖ್ಯಮಂತ್ರಿಗಳ ಜತೆ ಪ್ರಧಾನಿ ಮೋದಿ ಸಂವಾದ ಇಂದು.ಬಾಕಿ: ಕೇಂದ್ರದ ಬಳಿಗೆ ಸರ್ವಪಕ್ಷ ನಿಯೋಗ.
ಕಮಲ್ ಸಿಂಗ್ ಬೇ (ಬೋಕಾಜನ್), ಮಂಡಲ್ ಎಂಘಿ (ಹೌಘಾಟ್), ಗುಲ್ಸನ್ ಬೇ (ದಿಪು) ಮತ್ತು ಅಂಜೋಶಿ ತೆರಾಂಗ್ (ಹಫ್ಲಾಂಗ್) ಸ್ಪರ್ಧೆಯಿಂದ ಹಿಂದೆ ಸರಿದ ನಾಲ್ವರು ಎಎಸ್ಡಿಸಿ ಸದಸ್ಯರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

126 ಸದಸ್ಯ ಬಲ ಹೊಂದಿರುವ ಅಸ್ಸಾಂ ವಿಧಾನಸಭೆ ಚುನಾವಣೆಗೆ ಒಟ್ಟು 815 ಅಭ್ಯರ್ಥಿಗಳು 1,389 ನಾಮಪತ್ರಗಳನ್ನು ಸಲ್ಲಿಸಿದ್ದರು . ಪರಿಶೀಲನೆಯ ಬಳಿಕ 789 ಅಭ್ಯರ್ಥಿಗಳು ಅರ್ಹರೆಂದು ತಿಳಿದು ಬಂದಿತ್ತು.

ಅಸ್ಸಾಂ ವಿಧಾನಸಭೆ ಚುನಾವಣೆಗೆ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ.
.ದುಃಸ್ವಪ್ನದಂತೆ ಕಾಡುತ್ತೇವೆ: ಇರಾನ್ಗೆ ಎಚ್ಚರಿಕೆ ನೀಡಿದ ಟ್ರಂಪ್.ಇರಾನ್ ಮೇಲಿನ ದಾಳಿಗೆ ಮತ್ತೆ 10 ದಿನ ವಿರಾಮ ಘೋಷಿಸಿದ ಟ್ರಂಪ್!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.