ಗುವಾಹಟಿ: ಮುಸ್ಲಿಮರ ಮದುವೆ ಮತ್ತು ವಿಚ್ಛೇದನಗಳನ್ನು ನೋಂದಾಯಿಸುವ ಮಸೂದೆಯನ್ನು ಅಸ್ಸಾಂ ವಿಧಾನಸಭೆ ಗುರುವಾರ ಅಂಗೀಕರಿಸಿದೆ.
ಮಸೂದೆಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ನಮ್ಮ ಉದ್ದೇಶ ಬಾಲ್ಯವಿವಾಹ ರದ್ದುಗೊಳಿಸುವುದು ಮಾತ್ರವಲ್ಲ, ನಾವು ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳ ನೋಂದಣಿಯನ್ನು ಸರ್ಕಾರಿ ವ್ಯವಸ್ಥೆಯ ಅಡಿಯಲ್ಲಿ ತರಲು ಬಯಸುತ್ತೇವೆ ಎಂದು ಹೇಳಿದರು.
ಈ ಕಾರ್ಯವಿಧಾನವು ಅನೌಪಚಾರಿಕವಾಗಿರುತ್ತದೆ ಎಂದು ಅವರು ಬಿಸ್ವಾ ಶರ್ಮಾ ಸದನಕ್ಕೆ ಮಾಹಿತಿ ನೀಡಿದರು.