ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗಳು ಕಾಂಗ್ರೆಸ್ಗೆ ಕಠಿಣ ಸವಾಲು ಇದೆ. ಈ ಪಕ್ಷ ಕೇರಳದಲ್ಲಿ ಮಾತ್ರವೇ ಗೆಲುವು ಸಾಧಿಸುವ ಸಾಧ್ಯತೆ ಹೊಂದಿದೆ. ಅಸ್ಸಾಂನಲ್ಲಿ ಬಿಜೆಪಿ ಜೊತೆ ನೇರ ಪೈಪೋಟಿಯಲ್ಲಿದೆ. ಹೀಗಾಗಿ, ವಿಧಾನಸಭೆ ಚುನಾವಣೆಗಳು ಕಾಂಗ್ರೆಸ್ಗೆ ಮಹತ್ವ ಎಂದು ಹೇಳುವುದು ಅತಿಶಯೋಕ್ತಿ ಎನಿಸಬಹುದು.

ಮಾರ್ಚ್ 15 ರಂದು ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ಅವರು ಎಕ್ಸ್ನಲ್ಲಿ ಪೋಸ್ಟ್, ಹಂಚಿಕೊಳ್ಳುವ ಮೂಲಕ ಈ ಚುನಾವಣೆಗಳಿಂದ ಕಾಂಗ್ರೆಸ್ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಪಕ್ಷವು ಎಲ್ಲೆಡೆ ವಿಜಯಶಾಲಿಯಾಗುತ್ತದೆ ಎಂದು ಅವರು ಹೇಳಿದ್ದರು. ಆದರೆ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯ ಬಗ್ಗೆ ಯಾವುದೇ ನಿರ್ದಿಷ್ಟ ಉಲ್ಲೇಖ ಮಾಡದ ಅವರು ಕೇರಳದಲ್ಲಿ 100+ ಸ್ಥಾನಗಳ ಅದ್ಭುತ ಗೆಲುವು ಸಿಗಲಿದೆ ಎಂದು ಭವಿಷ್ಯ ನುಡಿದಿದ್ದರು. ತಮಿಳುನಾಡಿನಲ್ಲಿ ಡಿಎಂಕೆಯ ಎಂ. ಕೆ. ಸ್ಟಾಲಿನ್ ನೇತೃತ್ವದ ಬಂಡೆಯಷ್ಟೇ ದೃಢವಾದ ಮೈತ್ರಿಕೂಟ ಅಧಿಕಾರಕ್ಕೆ ಮರಳುತ್ತದೆ ಎಂದು ಹೇಳಿದ್ದರು. ರಾಹುಲ್ ಗಾಂಧಿ ಸಹ ಕೇರಳದ ಬಗ್ಗೆ ಮಾತನಾಡಿದರೆ ಹೊರತು ಉಳಿದ ರಾಜ್ಯಗಳ ಬಗ್ಗೆ ಮೌನವಹಿಸಿದ್ದರು.

ಕೇರಳದ ಬಗ್ಗೆ ಬಹಳ ಭರವಸೆ ಇಟ್ಟುಕೊಂಡಿರುವ ಕಾಂಗ್ರೆಸ್, ಪಿಣರಾಯಿ ವಿಜಯನ್ ಅವರ 10 ವರ್ಷಗಳ ಆಡಳಿತದ ವಿರೋಧಿ ಅಲೆಯ ಲಾಭ ಪಡೆಯುವ ವಿಶ್ವಾಸದಲ್ಲಿದೆ. ಆದರೆ, ಎಲ್ಡಿಎಫ್ ಲೋಪಗಳನ್ನು ಎತ್ತಿತೋರಿಸಿ ಅದರ ಲಾಭ ಪಡೆಯುವ ಅವಕಾಶವನ್ನು ಕಾಂಗ್ರೆಸ್ ಕಳೆದುಕೊಂಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕೇರಳದಲ್ಲಿ ಒಂದೊಮ್ಮೆ ಕಾಂಗ್ರೆಸ್ ಸತತ ಮೂರನೇ ಸೋಲು ಅನುಭವಿಸಿದರೆ ಬಿಜೆಪಿ ಎರಡನೇ ಸ್ಥಾನದಲ್ಲಿ ಕೂರಲು ವೇದಿಕೆಯಾಗಬಹುದು. ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಂತೆ ಅಸ್ತಿತ್ವ ಕಳೆದುಕೊಳ್ಳುವ ಆತಂಕವೂ ಪಕ್ಷಕ್ಕಿದೆ. ಬಿಜೆಪಿ ತಮ್ಮನ್ನು ಸೋಲಿಸಲು ಕೆಲ ಕ್ಷೇತ್ರಗಳಲ್ಲಿ ಕಾರ್ಯತಂತ್ರದ ಮತ ಚಲಾವಣೆ ಮಾಡಿಸಬಹುದು ಎಂಬ ಭಯವೂ ಕಾಂಗ್ರೆಸ್ನಲ್ಲಿದೆ.

ಈ ನಡುವೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾದ ವೇಣುಗೋಪಾಲ್, ವಿ. ಡಿ. ಸತೀಶನ್ ಮತ್ತು ರಮೇಶ್ ಚೆನ್ನಿತ್ತಲರಿಂದ ಅಧಿಕಾರದ ಹಾದಿ ಮತ್ತಷ್ಟು ಜಟಿಲವಾಗಿದೆ. ಅಭ್ಯರ್ಥಿಗಳ ಆಯ್ಕೆಯ ಸಭೆಗಳನ್ನು ರಣಭೂಮಿಯಂತೆ ಮಾಡಿಕೊಂಡಿದ್ದ ಅವರು, ತಮ್ಮ ನಿಷ್ಠಾವಂತ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದರು. ಹಿರಿಯ ಸಂಸದ ಸುಧಾಕರನ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಯೋಚನೆಯಿಂದ ಹಿಂದೆ ಸರಿದಿದ್ದರಿಂದ ಸದ್ಯಕ್ಕೆ ಪಕ್ಷವು ನಿರಾಳವಾಗಿದೆ.

10 ವರ್ಷಗಳಿಂದ ಪಕ್ಷ ಅಧಿಕಾರದಿಂದ ಹೊರಗುಳಿದಿರುವ ಅಸ್ಸಾಂನಲ್ಲಿಯೂ ಪ್ರಮುಖ ನಾಯಕರಾಗಿದ್ದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಮತ್ತು ಪ್ರದ್ಯುತ್ ಬೋರ್ಡೊಲೊಯ್ ಪಕ್ಷ ತೊರೆದಿರುವುದು ಹಿನ್ನಡೆಯಾಗಿದೆ.

ಹಿಮಂತ ಬಿಸ್ವ ಶರ್ಮಾ ನೇತೃತ್ವದ ಬಿಜೆಪಿಯನ್ನು ಮಣಿಸಲು ಅಸ್ಸಾಂಗೆ ಪಕ್ಷದ ಮುಖ್ಯಸ್ಥರಾಗಿ ಲೋಕಸಭಾ ಉಪ ನಾಯಕ ಗೌರವ್ ಗೊಗೊಯ್ ಅವರನ್ನು ನೇಮಕ ಮಾಡಿರುವುದು ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸ್ಕ್ರೀನಿಂಗ್ ಸಮಿತಿಯ ನೇತೃತ್ವ ವಹಿಸಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಉನ್ನತ ನಾಯಕರ ಒಳಜಗಳ ತಪ್ಪಿಸಲು ಸಾಧ್ಯವಾಗಿಲ್ಲ, ಸಂಘಟನಾ ಸಮಸ್ಯೆಗಳಿಗೆ ಪರಿಹಾರ ನೀಡಿಲ್ಲ. ಪ್ರಚಾರಕ್ಕೆ ಕೇಲ ದಿನಗಳು ಬಾಕಿ ಇರುವಾಗ, ಮೈತ್ರಿ ಅಂತಿಮಗೊಳಿಸಲುವಲ್ಲಿ ಪಕ್ಷ ನಿಧಾನಗತಿಯ ಹೆಜ್ಜೆ ಇಡುತ್ತಿದೆ.

ತಮಿಳುನಾಡಿನ ಫಲಿತಾಂಶ ಡಿಎಂಕೆ ಜೊತೆಗಿನ ಕಾಂಗ್ರೆಸ್ ಸಂಬಂಧದ ಮೇಲೆ ನಿರ್ಧಾರವಾಗುತ್ತದೆ. ಪಕ್ಷದ ಒಂದು ವರ್ಗ ಅಧಿಕಾರ ಹಂಚಿಕೆಗೆ ಬೇಡಿಕೆ ಇಟ್ಟಿದ್ದರೆ, ಮತ್ತೆ ಕೆಲವರು ವಿಜಯ್ ಅವರ ಟಿವಿಕೆ ಜೊತೆ ಒಪ್ಪಂದಗಳ ಬಗ್ಗೆ ಮಾತನಾಡುತ್ತಿರುವುದು ಡಿಎಂಕೆ ಜೊತೆಗಿನ ಮೈತ್ರಿ ಹೊಂದಾಣಿಕೆಯನ್ನು ಡೋಲಾಯಮಾನಗೊಳಿಸಿದೆ.

ತಮಿಳುನಾಡಿನ ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ಈ ಬಾರಿ ಕೊಂಚ ಹೆಚ್ಚಿನ ಪಾಲನ್ನು ಪಡೆದುಕೊಂಡಿದೆ. ಆದರೆ, ಅದು ಡಿಎಂಕೆ ಮೇಲೆ ಎಷ್ಟು ಕಾಲ ಸವಾರಿ ಮಾಡಬಹುದು ಎಂಬ ಪ್ರಶ್ನೆಗಳು ಉದ್ಭವಿಸುವುದು ಸಹಜ. ವಿಜಯ್ ಅವರ ಪಕ್ಷದ ಪ್ರದರ್ಶನವನ್ನು ಎರಡೂ ಪಕ್ಷಗಳು ಕಾತರದಿಂದ ನೋಡುತ್ತಿವೆ. ಕಾಯುತ್ತಿವೆ ಟಿವಿಕೆ ಗಣನೀಯ ಪ್ರಮಾಣದಲ್ಲಿ ಮತ ಗಳಿಸಿದರೆ, ರಾಜ್ಯದಲ್ಲಿ ಮೈತ್ರಿ ಲೆಕ್ಕಾಚಾರವು ಬದಲಾಗಬಹುದು.

ಪಶ್ಚಿಮ ಬಂಗಾಳದಲ್ಲಿ, ಸಂಘಟನೆಯನ್ನು ಬಲಪಡಿಸುವ ಸಲುವಾಗಿ ಕಾಂಗ್ರೆಸ್ ಎಡಪಕ್ಷಗಳೊಂದಿಗೆ ಒಪ್ಪಂದ ಮಾಡಿಕೊಳ್ಳದೆ ‘ಏಕಲಾ ಚಲೋ’ (ಏಕಾಂಗಿ ಸ್ಪರ್ಧೆ) ತಂತ್ರವನ್ನು ಅನುಸರಿಸಿ ದೆ. 2006ರ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಎಲ್ಲ 294 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳೆದುರು ದುರ್ಬಲವಾಗಿರುವ ಕಾಂಗ್ರೆಸ್ ಪಕ್ಷ ಪಶ್ಚಿಮ ಬಂಗಾಳದಲ್ಲಿ ತನ್ನದೇ ನೆಲೆ ಸ್ಥಾಪಿಸಲು ಹೊರಟಿದೆ. ಈ ರಾಜ್ಯದಲ್ಲಿ ಸಿಪಿಐಎಂ ಪಕ್ಷವು ಕಾಂಗ್ರೆಸ್ಸನ್ನು ಮೊದಲು ಮೂಲೆಗೆ ತಳ್ಳಿತು. ನಂತರ ತೃಣಮೂಲ ಪಕ್ಷವು ಕಾಂಗ್ರೆಸ್ಸನ್ನು ಪೂರ್ತಿ ನಾಶಪಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.