ತಲಾ 70 ಕೆ.ಜಿ ತೂಕದ ಸಿಮೆಂಟ್ ಬ್ಲಾಕ್‌ಗಳಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ. ಆದರೆ, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ.
‘ಭಾನುವಾರ ಕೆಲವು ದುರ್ಷ್ಕಮಿಗಳು ಸರಕು ಸಾಗಣೆ ಕಾರಿಡಾರ್‌ನ ಹಳಿಗಳ ಮೇಲೆ ಎರಡು ಸಿಮೆಂಟ್ ಬ್ಲಾಕ್‌ಗಳನ್ನು ಇಟ್ಟಿದ್ದಾರೆ. ಗೂಡ್ಸ್ ರೈಲು ಅದಕ್ಕೆ ಡಿಕ್ಕಿ ಹೊಡೆದಿದೆ’ ಎಂದು ವಾಯುವ್ಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸರಕು ಸಾಗಣೆ ಕಾರಿಡಾರ್ ಅಧಿಕಾರಿಯೊಬ್ಬರು ಹೇಳಿದ್ದಾರೆ.