ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಯೋಧ್ಯಾ: ಅತ್ಯಾಚಾರ ಆರೋಪಿಗೆ ಸೇರಿದ ಶಾಪಿಂಗ್‌ ಕಾಂಪ್ಲೆಕ್ಸ್‌ ನೆಲಸಮ

Published 22 ಆಗಸ್ಟ್ 2024, 15:32 IST
Last Updated 22 ಆಗಸ್ಟ್ 2024, 15:32 IST
ಅಕ್ಷರ ಗಾತ್ರ

ಅಯೋಧ್ಯಾ, ಉತ್ತರಪ್ರದೇಶ: 12 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿ ಮೊಯಿದ್‌ ಖಾನ್‌ಗೆ ಸೇರಿದ ಶಾಪಿಂಗ್‌ ಕಾಂಪ್ಲೆಕ್ಸ್‌ಗಳನ್ನು ಇಲ್ಲಿನ ಜಿಲ್ಲಾಡಳಿತವು ಗುರುವಾರ ನೆಲಸಮಗೊಳಿಸಿದೆ.‌

ಅಯೋಧ್ಯೆ ಜಿಲ್ಲೆಯ ಬಾದರಸಾ ನಗರದಲ್ಲಿ ಬೇಕರಿ ನಡೆಸುತ್ತಿದ್ದ ಮೊಯಿದ್‌ ಖಾನ್‌, ಆತನ ಬಳಿ ಕೆಲಸ ಮಾಡುತ್ತಿದ್ದ ರಾಜು ಖಾನ್‌ ಎರಡು ತಿಂಗಳ ಹಿಂದೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದರು. ಈ ಕೃತ್ಯವನ್ನು ವಿಡಿಯೊ ಮಾಡಿಟ್ಟುಕೊಂಡಿದ್ದರು. ಇತ್ತೀಚಿಗೆ ಬಾಲಕಿಯ ಆರೋಗ್ಯ ತಪಾಸಣೆ ನಡೆಸಿದ ವೇಳೆ ಗರ್ಭಿಣಿಯಾಗಿರುವುದು ದೃಢಪಟ್ಟಿತ್ತು. ಜುಲೈ 30ರಂದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. 

ಬಾದರಸಾ ನಗರದಲ್ಲಿ ಆರೋಪಿಗೆ ಸೇರಿದ ಶಾಪಿಂಗ್‌ ಕಾಂಪ್ಲೆಕ್ಸ್‌ಗಳನ್ನು ಬುಲ್ಡೋಜರ್‌ ನೆರವಿನಿಂದ ಮಧ್ಯಾಹ್ನ 1.30ಕ್ಕೆ ನೆಲಸಮಗೊಳಿಸಲಾಯಿತು. ಕಟ್ಟಡದಲ್ಲಿ ಇದ್ದ ಬ್ಯಾಂಕ್‌ ಶಾಖೆಯನ್ನು ಮೊದಲೇ ಸ್ಥಳಾಂತರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದರು. 

‘ಸರ್ಕಾರಿ ಜಾಗದಲ್ಲಿ ಆರೋಪಿ ಮೊಯಿದ್‌ ಖಾನ್‌ ಶಾಪಿಂಗ್‌ ಕಾಂಪ್ಲೆಕ್ಸ್ ನಿರ್ಮಿಸಿದ್ದರು. ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ದರಿಂದ ಒಡೆದು ಹಾಕಲಾಗಿದೆ’ ಎಂದು ಸೊಹಾವಲ್‌ನ ಉಪವಿಭಾಗಾಧಿಕಾರಿ ಎ.ಕೆ. ಸೈನಿ ತಿಳಿಸಿದರು. 

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬಾದರಸಾ ಪಟ್ಟಣದಲ್ಲಿ ಮೀಸಲು ಪೊಲೀಸ್‌ ಪಡೆ, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. 

ಕೊಳದ ಮೇಲೆ ಅಕ್ರಮವಾಗಿ ಬೇಕರಿ ನಿರ್ಮಿಸಿದ್ದ ಆರೋಪದ ಮೇಲೆ ಮೊಯಿದ್‌ ಖಾನ್‌ಗೆ ಸೇರಿದ್ದ ಕಟ್ಟಡವನ್ನು ಅಯೋಧ್ಯಾ ಜಿಲ್ಲಾಡಳಿತವು ಆಗಸ್ಟ್‌ 3ರಂದೇ ಒಡೆದು ಹಾಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT