ಉಜಿರೆ: ಅಯೋಧ್ಯೆಯಲ್ಲಿ ₹ 20 ಕೋಟಿ ವೆಚ್ಚದಲ್ಲಿ ಕನ್ಯಾಡಿ ರಾಮಕ್ಷೇತ್ರದ ಶಾಖಾಮಠ ನಿರ್ಮಿಸಲು ಯೋಜಿಸಿದ್ದು, ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್ ಅವರನ್ನು ನಿರ್ಮಾಣ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಕನ್ಯಾಡಿ ರಾಮಕ್ಷೇತ್ರ ಪೀಠಾಧೀಶ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಧರ್ಮಸ್ಥಳ ಗ್ರಾಮದ ಕನ್ಯಾಡಿಯ ಶನಿವಾರ ರಾಮಕ್ಷೇತ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದ್ದು, ₹ 50 ಸಾವಿರ ಚದರ ಅಡಿ ವಿಸ್ತೀರ್ಣದ ಕಟ್ಟಡದಲ್ಲಿ 50 ವಸತಿಗೃಹಗಳು, ಒಂದು ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಸಭಾ ಭವನ ನಿರ್ಮಿಸಲಾಗುವುದು. ಈ ವರ್ಷದ ಚಾರ್ತುರ್ಮಾಸ್ಯವನ್ನು ಜುಲೈನಿಂದ ಬೈಂದೂರು ತಾಲ್ಲೂಕಿನ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಸಲಾಗುವುದು. ಮುಂದಿನ ವರ್ಷ ನಾಸಿಕ್ನಲ್ಲಿ ಕುಂಭಮೇಳ ನಡೆಯಲಿದ್ದು, 2027ರ ಚಾರ್ತುಮಾಸ್ಯವನ್ನು ಅಲ್ಲೇ ಆಚರಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.

ತಿರುಪತಿ, ಶಬರಿಮಲೆ, ಕೇರಳ ಮತ್ತು ಶಿವಮೊಗ್ಗದಲ್ಲಿ ಶಾಖಾಮಠ ನಿರ್ಮಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಬೆಳ್ತಂಗಡಿಯ ಪೀತಾಂಬರ ಹೇರಾಜೆ, ನಾಗೇಶ ಗೌಡ ಮರೋಡಿ, ಸಂಪತ್ ಬಿ.ಸುವರ್ಣ ಬೆಳ್ತಂಗಡಿ, ರಾಜೇಶ್ ಪೈ ಉಜಿರೆ, ತಿಮ್ಮಪ್ಪ ಗೌಡ ಬೆಳಾಲು, ರವೀಂದ್ರ ಪೂಜಾರಿ ಆರ್ಲ, ಕೃಷ್ಣಪ್ಪ ಗುಡಿಗಾರ್, ಸುನಿಲ್ ಕನ್ಯಾಡಿ, ರಾಜೇಶ್ ಪೂಜಾರಿ ವೇಣೂರು, ಕೇಶವ ಬಂಗೇರ ಕಳಿಯ, ವಿನೋಬಾ ಕಾರಂತ ಉಜಿರೆ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-29-1321867304

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.