ಉದಕಮಂಡಲ (ತಮಿಳುನಾಡು) (ಪಿಟಿಐ): ನೀಲಗಿರಿ ಜಿಲ್ಲೆಯ ಜನಾಂಗೀಯ ಭಾಷಾ ಸಮುದಾಯವಾದ ‘ಬಡಗ ಜನಾಂಗ’ಕ್ಕೆ ಸೇರಿದ ಮಲ್ಲಮ್ಮಾಳ್ ಅವರಿಗೆ ಶನಿವಾರ 100 ವರ್ಷ ತುಂಬಿದ್ದು, ಸಮುದಾಯದ ಮೊದಲ ಶತಾಯುಷಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸುಮಾರು 50 ಮನೆಗಳಿರುವ ಮಲ್ಲಿಕೊರೈ ಗ್ರಾಮದ ಜನರು ಮತ್ತು ಕುಟುಂಬದ ಸದಸ್ಯರು ಮಲ್ಲಮ್ಮಾಳ್ ಅವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಮಲ್ಲಮ್ಮಾಳ್ ಅವರನ್ನು ಸಾಂಪ್ರದಾಯಿಕ ಬಡಗ ಬುಡಕಟ್ಟು ಉಡುಪುಗಳು ಮತ್ತು ಸಾಂಪ್ರದಾಯಿಕ ಆಭರಣಗಳಿಂದ ಅಲಂಕರಿಸಿ, ಸಾಂಪ್ರದಾಯಿಕ ಸಂಗೀತ ನುಡಿಸುವ ಜತೆಗೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.

ಮಲ್ಲಮ್ಮಾಳ್ ಅವರ ನಾಲ್ವರು ಪುತ್ರರು, 10 ಮೊಮ್ಮಕ್ಕಳು, 20 ಮರಿಮೊಮ್ಮಕ್ಕಳು ಹಾಗೂ ಅವರ ಹುಟ್ಟೂರು ಕಡನಾಡು ಗ್ರಾಮದ ಜನರು ಶುಭ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.