ನಾಗ್ಪುರ: ‘ಭಾರತೀಯರು ನಾಲ್ಕು ಮಕ್ಕಳನ್ನು ಹೆರಬೇಕು, ಇದರಲ್ಲಿ ಒಂದು ಮಗುವನ್ನು ಆರ್ಎಸ್ಎಸ್ಗೆ ನೀಡಬೇಕು’ ಎಂದು ನಾಗ್ಪುರದ ಕಾರ್ಯಕ್ರಮದಲ್ಲಿ ಬಾಗೇಶ್ವರ ಧಾಮದ ಪೀಠಾಧಿಪತಿ ಧೀರೆಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿತ್ತು. ಇದೀಗ ಅವರು ಪ್ರತಿಕ್ರಿಯಿಸಿದ್ದಾರೆ.

'ಎಷ್ಟೇ ಒಳ್ಳೆಯದನ್ನು ಮಾತನಾಡಲು ಪ್ರಯತ್ನಿಸಿದರೂ ಅದು ವಿವಾದಕ್ಕೆ ಕಾರಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ನನ್ನ ಕುಂಡಲಿಯಲ್ಲೇ 'ವಿವಾದ'ವಿದೆ ಎಂದು ಈಗ ನಾನು ನಂಬುತ್ತೇನೆ. ನಾಗ್ಪುರದಲ್ಲಿ ಇದು ಮತ್ತೆ ಸಂಭವಿಸಿದೆ. ನಾನು ಎಲ್ಲವನ್ನೂ ಸರಿಯಾಗಿಯೇ ಹೇಳಲು ಪ್ರಯತ್ನಿಸಿದ್ದೆ, ಆದರೂ ವಿವಾದವಾಯಿತು. ನನಗೆ ಯಾರಿಂದಲೂ ಯಾವುದೇ ಪ್ರಮಾಣೀಕರಣದ ಅಗತ್ಯವಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
.ಅತ್ಯಾಚಾರದ ವಿರುದ್ಧ ಧರ್ಮ ಯುದ್ಧ ನಡೆಯಲಿ: ರುದ್ರಪ್ಪ ಅವರ ಲೇಖನ.ಎಚ್.ವಿಶ್ವನಾಥ್ಗೆ ಅರಳುಮರಳು, ಕ್ಷಮಿಸಿಬಿಡೋಣ: ಸಚಿವ ಮಧು ಬಂಗಾರಪ್ಪ.
ಹನುಮಂತನನ್ನು ಆರಾಧಿಸುವುದು ಮೂಢನಂಬಿಕೆ ಎನ್ನುವುದಾದರೆ, ಈ ದೇಶದಲ್ಲಿರುವ ಎಲ್ಲಾ ಧರ್ಮಗಳೂ ಮೂಢನಂಬಿಕೆಯಾಗುತ್ತವೆ. ದೇವರ ಆರಾಧನೆಯನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸಿ ಟೀಕಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.

ತಾವು ಯಾವುದೇ ತಪ್ಪು ಅಥವಾ ಕೆಟ್ಟದ್ದನ್ನು ಮಾತನಾಡಿಲ್ಲ ಎಂದು ಪ್ರತಿಪಾದಿಸಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲದಿದ್ದರೂ ಪರಿಸ್ಥಿತಿಯನ್ನು ತಿಳಿಗೊಳಿಸಲು ಈಗಾಗಲೇ ಕ್ಷಮೆ ಕೇಳಿದ್ದೇನೆ ಎಂದರು.

ಶುಕ್ರವಾರ ರಾತ್ರಿ ನಡೆದ ‘ಭಾರತ್ ದುರ್ಗಾ ಶಕ್ತಿಸ್ಥಳ’ ದೇವಾಲಯದ ಶಂಕುಸ್ಥಾಪನೆ ಹಾಗೂ ಧರ್ಮ ಸಭಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಅವರು ‘ಭಾರತೀಯರು ನಾಲ್ಕು ಮಕ್ಕಳನ್ನು ಹೆರಬೇಕು, ಇದರಲ್ಲಿ ಒಂದು ಮಗುವನ್ನು ಆರ್ಎಸ್ಎಸ್ಗೆ ನೀಡಬೇಕು’ ಎಂದಿದ್ದರು. ಮರಾಠರ ರಾಜ ಛತ್ರಪತಿ ಶಿವಾಜಿ ಮಹಾರಾಜರು ಕುರಿತೂ ಮಾತನಾಡಿದ್ದರು.
.ಎಎಪಿ ತೊರೆದು ಬಿಜೆಪಿ ಸೇರಿದ ಸಂಸದರು ಇವರೇ...ನಾನು ತಪ್ಪಾಗಿರಬಹುದು, ಆದರೆ ಏಳು ಜನ ತಪ್ಪಾಗಲು ಸಾಧ್ಯವಿಲ್ಲ: ಚಡ್ಡಾ ತಿರುಗೇಟು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.