ಬೆಳ್ತಂಗಡಿ: ‘ಹತ್ತು ವರ್ಷ ಕೇರಳಂ ರಾಜ್ಯದ ಮುಖ್ಯಮಂತ್ರಿಯಾಗಿ ಗೌರವಯುತವಾಗಿ ಅಧಿಕಾರದಿಂದ ಕೆಳಗಿಳಿದ ಪಿಣರಾಯಿ ವಿಜಯನ್ ಅವರ ಮನೆಗೆ ಸರ್ವಾಧಿಕಾರಿಯಾಗಿ, ರಾಜಕೀಯ ಪ್ರೇರಿತವಾಗಿ ಮತ್ತು ಅವಮಾನಿಸುವ ದುರುದ್ದೇಶದಿಂದ ಇ.ಡಿ (ಜಾರಿ ನಿರ್ದೇಶನಾಲಯ) ಮೂಲಕ ದಾಳಿ ಮಾಡಿಸಿರುವುದು ಕೇಂದ್ರ ಸರ್ಕಾರದ ರಾಜಕೀಯ ದಿವಾಳಿತನ ಎಂದು ಸಿಪಿಎಂ ಭಾವಿಸುತ್ತದೆ’ ಎಂದು ಸಿಪಿಎಂ ಬೆಳ್ತಂಗಡಿ ತಾಲ್ಲೂಕು ಕಾರ್ಯದರ್ಶಿ, ವಕೀಲ ಬಿ.ಎಂ.ಭಟ್ ಹೇಳಿದರು.

ಪಿಣರಾಯಿ ವಿಜಯನ್ ಮನೆಗೆ ಇ.ಡಿ ದಾಳಿ ಖಂಡಿಸಿ ಬೆಳ್ತಂಗಡಿ ತಾಲ್ಲೂಕು ಕಚೇರಿ ಎದುರು ಸಿಪಿಎಂ ಬೆಳ್ತಂಗಡಿ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಶನಿವಾರ ನಡೆಸಿದ ಹೋರಾಟದಲ್ಲಿ ಅವರು ಮಾತನಾಡಿದರು.

ಕಮ್ಯುನಿಸ್ಟರ ಪ್ರಾಮಾಣಿಕ ನಡೆ, ಸರಳ ಬದುಕು, ನಿಷ್ಠಾವಂತ ರಾಜಕಾರಣ ದೇಶದ ಇತಿಹಾಸವಾಗಿದೆ. ಇತಿಹಾಸ ಅರಿಯದ ಈ ಬಿಜೆಪಿಗರು ಅಜ್ಞಾನಿಗಳಂತೆ ವ್ಯವಹರಿಸುವುದನ್ನು ದೇಶದಲ್ಲಿಂದು ನಾವು ಕಾಣುತ್ತೇವೆ. ಕಮ್ಯುನಿಸ್ಟರು ಬಾಡಿಗೆ ಮನೆಯಲ್ಲಿ ವಾಸವಿದ್ದು ಜನಸೇವೆ ಮಾಡುವವರು. ಕಮ್ಯುನಿಸ್ಟರ ಜನಪರ ಆಡಳಿತದಿಂದ ಪಾಠ ಕಲಿಯದ ಕೇಂದ್ರದ ಬಿಜೆಪಿ ಸರ್ಕಾರ ಇ.ಡಿ, ಸಿಬಿಐಯನ್ನು ಪಕ್ಷದ ಕೆಲಸದಾಳುಗಳಂತೆ ನಡೆಸಿಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ, ಸಂವಿಧಾನಕ್ಕೆ ಮತ್ತು ದೇಶಕ್ಕೆ ಮಾಡುವ ದ್ರೋಹವಾಗಿದೆ ಎಂದು ಟೀಕಿಸಿದರು.

‘ಭ್ರಷ್ಟಾಚಾರಿಗಳ ಮನೆಗೆ ದಾಳಿ ಮಾಡದೆ ವಿರೋಧ ಪಕ್ಷಗಳ ಮನೆಗೆ ಇ.ಡಿಯನ್ನು ಕಳುಹಿಸುವ ಹೊಲಸು ರಾಜಕೀಯ ಬಿಜೆಪಿಯದ್ದಾಗಿದೆ. ತಕ್ಷಣ ಕೇಂದ್ರ ಸರ್ಕಾರ ಈ ದೌರ್ಜನ್ಯಗಳ ವಿರುದ್ಧ ದೇಶದ ಜನತೆಯ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.

ತಾಲ್ಲೂಕು ಸಮಿತಿ ಸದಸ್ಯ ಸುಕುಮಾರ್, ಡಿವೈಎಫ್ಐ ತಾಲ್ಲೂಕು ಘಟಕದ ಅಧ್ಯಕ್ಷೆ ಅಧಿತಿ, ಕಾರ್ಯದರ್ಶಿ ಅಭಿಷೇಕ್, ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ವಿನುಶರಮಣ, ಮುಖಂಡರಾದ ಪುಷ್ಪ, ಅಶ್ವಿತ, ಅಪ್ಪಿ, ಕುಮಾರಿ, ಶ್ರೇಯ, ದಾಮೋದರ, ಕುಸುಮ, ನವೀಲ ಭಾಗವಹಿಸಿದ್ದರು.

ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯೆ ಈಶ್ವರಿ ಸ್ವಾಗತಿಸಿ, ಸಿಪಿಎಂ ತಾಲ್ಲೂಕು ಸಮಿತಿ ಸದಸ್ಯೆ ಜಯಶ್ರೀ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-29-106566573

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.