ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆ ಸಂಬಂಧ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯು ಶುಕ್ರವಾರ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೋಲ್ಕತ್ತಕ್ಕೆ ಆಗಮಿಸಿದ್ದು, ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಸಿಎಂ ಗಾದಿಯಲ್ಲಿ ಪಕ್ಷದ ನಾಯಕ ಸುವೇಂದು ಅಧಿಕಾರಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ.

ನೂತನ ಸರ್ಕಾರ ರಚನೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಆದರೆ ಕಳೆದ 24 ತಾಸಿನಲ್ಲಿ ಅಗ್ನಿಮಿತ್ರಾ ಪೌಲ್ ಹಾಗೂ ರೂಪಾ ಗಂಗೂಲಿ ಹೆಸರುಗಳು ಸದ್ದು ಮಾಡುತ್ತಿವೆ.

ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾದಲ್ಲಿ ಮಾಡಿದಂತೆ ಬಿಜೆಪಿ ಅನಿರೀಕ್ಷಿತವಾಗಿ ಹೊಸ ಮುಖಗಳನ್ನು ಉನ್ನತ ಹುದ್ದೆಗಳಿಗೆ ಆಯ್ಕೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಅಗ್ನಿಮಿತ್ರಾ ಪೌಲ್ ಹಾಗೂ ರೂಪಾ ಗಂಗೂಲಿ ಹೆಸರುಗಳು ಗುರುತಿಸಿವೆ.
.ಸುವೇಂದು ಆಪ್ತನ ಕೊಲೆ: ವೃತ್ತಿಪರ ಶೂಟರ್ಗಳ ಕೈವಾಡ ಶಂಕೆ.ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ್ದಕ್ಕೆ ನನ್ನ ಆಪ್ತನ ಕೊಲೆ: ಸುವೇಂದು.
ಮಮತಾ ಬ್ಯಾನರ್ಜಿ ಅವರಿಗೆ ತಕ್ಕಂತೆ ಮಹಿಳಾ ನಾಯಕಿಯನ್ನು ಆಯ್ಕೆ ಮಾಡಲು ಬಿಜೆಪಿ ಯೋಜಿಸಿದರೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ಅಗ್ನಿಮಿತ್ರಾ ಪೌಲ್ ಅವರನ್ನು ಆಯ್ಕೆ ಮಾಡಬಹುದು.

ಅಗ್ನಿಮಿತ್ರಾ ಅವರು ಅಸನ್ಸೋಲ್ ದಕ್ಷಿಣ ಕ್ಷೇತ್ರದಲ್ಲಿ ಟಿಎಂಪಿಯ ತಾಪಸ್ ಬ್ಯಾನರ್ಜಿ ಅವರನ್ನು 40 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.

ಸೋನಾರ್ಪುರ ದಕ್ಷಿಣ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಅರುಂಧತಿ ಮೈತ್ರಾ ಅವರನ್ನು 35,000 ಮತಗಳಿಂದ ಸೋಲಿಸಿದ ರೂಪಾ ಗಂಗೂಲಿ ಅವರ ಹೆಸರೂ ಕೂಡ ಚರ್ಚೆಯಲ್ಲಿದೆ.

ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಅವರನ್ನು ಉಪಮುಖ್ಯಮಂತ್ರಿ ಮಾಡಿದ ಮಾದರಿಯನ್ನೇ ಬಂಗಾಳದಲ್ಲೂ ಅನ್ವಯಿಸಬಹುದು. ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾದರೆ ಅಗ್ನಿಮಿತ್ರಾ ಪೌಲ್ ಅವರಂತಹ ನಾಯಕಿರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರದ 15 ವರ್ಷಗಳ ಆಡಳಿತಯನ್ನು ಕೊನೆಗೊಳಿಸಿರುವ ಬಿಜೆಪಿ, ಮೊದಲ ಬಾರಿಗೆ ಸರ್ಕಾರ ರಚನೆಗೆ ಸಿದ್ಧತೆ ನಡೆಸುತ್ತಿದೆ. ಮೇ 9ರಂದು ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ನಿರೀಕ್ಷೆ ಇದೆ.
.ರಾಜಕೀಯ ವಿವಾದಕ್ಕೆ ತಿರುಗಿದ ಸುವೇಂದು ಸಹಾಯಕನ ಹತ್ಯೆ: ಬಿಜೆಪಿ–ಟಿಎಂಸಿ ವಾಗ್ಯುದ್ಧ.ಸುವೇಂದು ಅಧಿಕಾರಿ ಆಪ್ತನ ಹತ್ಯೆ: ಪ್ರತ್ಯಕ್ಷದರ್ಶಿ, ವೈದ್ಯರು ಹೇಳಿದ್ದೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.