ಪಶ್ಚಿಮ ಬಂಗಾಳ: ‘ತೃಣಮೂಲ ಕಾಂಗ್ರೆಸ್ನ ದುರಾಡಳಿತದಿಂದ ಹದಗೆಟ್ಟಿರುವ ರಾಜ್ಯದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಬಂಗಾಳ ಚುನಾವಣೆಯು ಕೊನೆಯ ಅವಕಾಶವಾಗಿದೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಪಶ್ಚಿಮ ಮೇದಿನಿಪುರದ ಪಿಂಗ್ಲಾದಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು ‘ಇದು ಮಾಮೂಲಿ ಚುನಾವಣೆಯಲ್ಲ. ಬಂಗಾಳವು ನಿರ್ಣಾಯಕ ಸ್ಥಿತಿಯಲ್ಲಿ ನಿಂತಿದೆ. ರಾಜ್ಯದ ದಿಕ್ಕು ಬದಲಾಯಿಸಿ ಅಭಿವೃದ್ಧಿಯತ್ತ ಕೊಂಡೊಯ್ಯಲು ಕೊನೆಯ ಅವಕಾಶವಾಗಿದೆ’ ಎಂದು ಹೇಳಿದ್ದಾರೆ.

‘ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ನಡುವಿನ ಪರಿಸ್ಥಿತಿಯನ್ನು ಹೋಲಿಕೆ ಮಾಡಿದ ಅವರು ಎರಡು ರಾಜ್ಯಗಳು ಈ ಹಿಂದೆ ಒಂದೇ ರೀತಿಯ ಸ್ಥಿತಿ ಎದುರಿಸುತ್ತಿದ್ದವು. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಹಾಗೂ ಸುವ್ಯವಸ್ಥೆ ಸುಧಾರಿಸಿ ಮೂಲಸೌಕರ್ಯ ಸಾಕಷ್ಟು ಅಭಿವೃದ್ಧಿಯಾಗಿದೆ. ಇದೇ ಮಾದರಿಯಿಂದ ಮಾತ್ರ ಬಂಗಾಳ ಬದಲಾವಣೆಯಾಗಲು ಸಾಧ್ಯ’ ಎಂದು ತಿಳಿಸಿದ್ದಾರೆ.

ಈ ಚುನಾವಣೆಯು ಬಂಗಾಳದ ಭವಿಷ್ಯಕ್ಕಾಗಿ ಅಪೂರ್ಣ ಕ್ಷಣ ಎಂದು ಬಣ್ಣಿಸಿರುವ ಆದಿತ್ಯನಾಥ್ ರಾಜ್ಯದಲ್ಲಿ ಉತ್ತಮ ಆಡಳಿತ ಹಾಗೂ ಅಭಿವೃದ್ಧಿಗಾಗಿ ಬಿಜೆಪಿ ನೇತೃತ್ವದ ‘ಡಬಲ್ ಎಂಜಿನ್’ ಸರ್ಕಾರ ರಚನೆಗೆ ಮತ ಚಲಾಯಿಸುವಂತೆ ಕರೆನೀಡಿದ್ದಾರೆ. ‘15 ವರ್ಷಗಳು ಸಾಕು. ಭ್ರಷ್ಟಾಚಾರ ಹಿಂಸಾಚಾರ ಹಾಗೂ ದುರಾಡಳಿತವನ್ನು ಕೊನೆಗಾಣಿಸಲು ಇದು ಸಕಾಲ. ಅಭಿವೃದ್ಧಿಯು ಈಗಲಾದರೂ ಆರಂಭಗೊಳ್ಳಬೇಕಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.