ಬೆಂಗಳೂರು: ಜೈಲಿನಲ್ಲಿದ್ದುಕೊಂಡು ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ ಹಾಗೂ ಹರಿಯಾಣದಿಂದ ಗ್ರೆನೇಡ್ ತಂದಿದ್ದ ಪ್ರಕರಣದಲ್ಲಿ ಮತ್ತೊಬ್ಬ ಅಪರಾಧಿ ವಿಕ್ರಮ್ ಕುಮಾರ್ ಅಲಿಯಾಸ್ ಛೋಟಾ ಉಸ್ಮಾನ್ಗೆ ಎನ್ಐಎ ವಿಶೇಷ ನ್ಯಾಯಾಲಯವು ಏಳು ವರ್ಷ ಜೈಲು ಶಿಕ್ಷೆ ಹಾಗೂ ₹30 ಸಾವಿರ ದಂಡ ವಿಧಿಸಿ, ಶನಿವಾರ ಆದೇಶಿಸಿದೆ.

2017ರಲ್ಲಿ ನೂರ್ ಎಂಬಾತನ ಕೊಲೆ ಪ್ರಕರಣ ದಲ್ಲಿ ಜುನೈದ್ ಅಹಮದ್, ಅಪರಾಧಿ ವಿಕ್ರಮ್ ಮತ್ತಿತರರು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಅದೇ ಜೈಲಿನಲ್ಲಿದ್ದ ಎಲ್ಇಟಿ ಉಗ್ರ ಟಿ.ನಾಸೀರ್ ಸಂಪರ್ಕಕ್ಕೆ ಕೊಲೆ ಆರೋಪಿಗಳು ಬಂದಿದ್ದರು. ಕೊಲೆ ಆರೋಪಿಗಳ ಮನ ಪರಿವರ್ತನೆ ಮಾಡಿದ್ದ ನಾಸೀರ್, ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ. ಜುನೈದ್ ಹಾಗೂ ವಿಕ್ರಮ್ ಜಾಮೀನಿನ ಮೇಲೆ ಹೊರಕ್ಕೆ ಬಂದಿದ್ದರು. ಜುನೈದ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ಈತನ ಸೂಚನೆಯಂತೆ ಅಪರಾಧಿಗಳಾದ ವಿಕ್ರಂ, ಸುಹೇಲ್, ಮೊಹಮ್ಮದ್ ಉಮರ್, ಜಾಹೀದ್ ತಬ್ರೇಜ್, ಸೈಯದ್ ಮುದಾಸೀರ್ ಪಾಷಾ, ಮೊಹಮ್ಮದ್ ಫೈಜಲ್ ರಬಾನಿ, ಸನ್ಮಾನ್ ಖಾನ್ ಉಗ್ರ ಸಂಚಿನಲ್ಲಿ ಭಾಗಿ ಆಗಿದ್ದರು. ದೇಶದ ನಾನಾ ಕಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎಂದು ಎನ್ಐಎ ತನಿಖೆಯಿಂದ ಪತ್ತೆಯಾಗಿತ್ತು.

ವಿದೇಶದಲ್ಲಿದ್ದ ಜುನೈದ್ ಸೂಚನೆಯಂತೆ 2023ರ ಮೇನಲ್ಲಿ ವಿಕ್ರಮ್ ಕುಮಾರ್, ಹರಿಯಾಣದ ಅಂಬಾಲಕ್ಕೆ ತೆರಳಿ ಹ್ಯಾಂಡ್ ಗ್ರೆನೇಡ್ ಮತ್ತು ವಾಕಿ–ಟಾಕಿಗಳಿರುವ ಪಾರ್ಸೆಲ್ ತಂದಿದ್ದ. ಅದನ್ನು ಮತ್ತೊಬ್ಬ ಅಪರಾಧಿ ಸುಹೈಲ್ ಖಾನ್ ಮನೆಯಲ್ಲಿ ಇರಿಸಿದ್ದ. ಬಳಿಕ, ಜುನೈದ್ ಅಹಮದ್, ಜಾಹೀದ್ ತಬ್ರೇಜ್ಗೆ ಕೊಡಲಾಗಿತ್ತು. ಆ ಬಳಿಕ ಟಿ.ನಾಸೀರ್ ನನ್ನು ಜೈಲಿನಿಂದ ನ್ಯಾಯಾಲಯಕ್ಕೆ ಕರೆದೊಯ್ಯುವ ಮಾರ್ಗಮಧ್ಯೆ ಸ್ಫೋಟಿಸಿ ಆತ ತಪ್ಪಿಸಿಕೊಳ್ಳುವ ಹಾಗೆ ಸಂಚು ರೂಪಿಸಲಾಗಿತ್ತು ಎಂಬುದು ಎನ್ಐಎ ತನಿಖೆ ವೇಳೆ ಕಂಡುಬಂದಿತ್ತು.

2023ರಲ್ಲಿ ಸಿಸಿಬಿ ಪೊಲೀಸರು ಆರ್.ಟಿ ನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆ ಆಗಿದ್ದವು. ಬಳಿಕ ಪ್ರಕರಣದ ತನಿಖೆಯನ್ನು ಎನ್ಐಎಗೆ ವರ್ಗಾವಣೆ ಮಾಡಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-4-476657096

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.